Skip to product information
1 of 2

Gopalakrishna Kuntini

ಮಹಾಭಾರತ: ಪ್ರೇಮ ಮತ್ತು ಯುದ್ಧ

ಮಹಾಭಾರತ: ಪ್ರೇಮ ಮತ್ತು ಯುದ್ಧ

Publisher - ಸಾವಣ್ಣ ಪ್ರಕಾಶನ

Regular price Rs. 270.00
Regular price Rs. 270.00 Sale price Rs. 270.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 220

Type - Paperback

ವಸಂತಕಾಲ ಚಿಗುರಿಸಿದ ಕಾನನದಲ್ಲಿ ಪಾಂಡುವಿನ ಪ್ರಾಣಕ್ಕಾಗಿ ಕಾತರಿಸಿ ಕಾಯುತ್ತಿತ್ತು ಸಾವು. ನದಿ ದಾಟಿಸಲೆಂದು ಬಂದ ಮತ್ಸ್ಯಗಂಧಿ ಮಹಾಯುದ್ಧಕ್ಕೆ ನೆಪವಾಗುತ್ತಾಳೆ. ಅಣ್ಣನ ಹೆಂಡತಿಯನ್ನು ಮೈದುನ ಬಯಸದ್ದಿರಿಂದ ಹೊಟ್ಟೆಯೊಳಗದ್ದಿ ಮಗು ಕತ್ತಲೆಯಲ್ಲೇ ಇರಬೇಕಾದ ಶಾಪಕ್ಕೆ ತುತ್ತಾಗುತ್ತದೆ. ದೇವಯಾನಿಯ ಪ್ರೇಮವನ್ನು ನಿರಾಕರಿಸಿದ ತಪ್ಪಿಗೆ ಕಚನಿಗೆ ಕಠೋರ ಶಾಪ ಸಿಗುತ್ತದೆ.
ಹದಿನೆಂಟು ದಿನ ನಡೆದ ಯುದ್ಧದಲ್ಲಿ ಹದಿನೆಂಟು ಅಕ್ಷೋಹಿಣಿ ಸೈನ್ಯ ಸರ್ವನಾಶವಾಗುತ್ತದೆ. ಮಹಾವೀರರು ಸೋಲುತ್ತಾರೆ, ಗೆದ್ದವರಿಗೆ ಸಂಭ್ರಮಿಸುವುದಕ್ಕೆ ಜತೆಗಾರರೇ ಇರುವುದಿಲ್ಲ, ಇಡೀ ಭರತಖಂಡದ ಪ್ರಚಂಡ ವೀರರೆಲ್ಲ ಕುರುಕ್ಷೇತ್ರದ ಮಣ್ಣಲ್ಲಿ ಮಣ್ಣಾಗುತ್ತಾರೆ. ಕಾಲ ಎಲ್ಲವನ್ನೂ ನೋಡುತ್ತಾ, ಮುಗುಳ್ನಗುತ್ತಿರುತ್ತಾನೆ.
ಮಹಾಭಾರತ ದಾಯಾದಿಗಳ ಕತೆಯಷ್ಟೇ ಅಲ್ಲ. ಹುಡುಕಿಕೊಂಡು ಹೋದಷ್ಟೂ ಹೊಸ ಹೊಸ ಕತೆಗಳು ಸಿಗುವ ಕಥೆಗಳ ಸಾಗರ ಅದು. ಒಮ್ಮೆ ಕೇಳಿದ ಕತೆಯನ್ನು ಮತ್ತೊಮ್ಮೆ ಕೇಳುವಾಗ ಹೊಸದೇ ಅರ್ಥ ಹೊಳೆಯುತ್ತದೆ. ಸುಮ್ಮನೆ ಕೇಳಿದರೆ ಒಂದು ಥರ, ಧ್ಯಾನಿಸಿದರೆ ಮತ್ತೊಂದು ಸ್ತರ, ಮನನ ಮಾಡಿದರೆ ಬೇರೆಯದೇ ಎತ್ತರ.
ವ್ಯಾಸಭಾರತದ ಒಳಹೊಕ್ಕು, ಕೇಳಿಯೂ ಕೇಳದ, ತಿಳಿದೂ ತಿಳಿಯದ ಅಪರೂಪದ ಪುಟ್ಟಪುಟ್ಟ ಕತೆಗಳನ್ನು ಕತೆಗಾರ ಗೋಪಾಲಕೃಷ್ಣ ಕುಂಟಿನಿ ಹೆಕ್ಕಿತಂದಿದ್ದಾರೆ. ಉತ್ಕಟ ಪ್ರೇಮ, ಬರ್ಬರ ಯುದ್ಧ-ಇವೆರಡರ ಹಿನ್ನೆಲೆಯಲ್ಲಿ ಅರಳಿದ ಕತೆಗಳಿವು.
ಈ ಕತೆಗಳು ಮಹಾಭಾರತದ ಕತ್ತಲೆಯ ಪುಟಗಳಿಗೆ ಹಿಡಿದ ಕಿರುಹಣತೆಯಂತಿವೆ.

-ಜೋಗಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)