Skip to product information
1 of 1

Jogi

ಮಹಾನಗರ

ಮಹಾನಗರ

Publisher -

Regular price Rs. 135.00
Regular price Rs. 135.00 Sale price Rs. 135.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಮಹಾನಗರವನ್ನು ತೆಕ್ಕೆಗೆ ತೆಗೆದುಕೊಳ್ಳುವುದು ಕಷ್ಟ. ಇಲ್ಲಿ ಬಡತನ, ಶ್ರೀಮಂತಿಕೆ ಎಂಬ ಪದಗಳಿಗೆ ಅರ್ಥವಿಲ್ಲ. ವಿದ್ಯಾವಂತ, ಅವಿವೇಕಿ ಎಂಬ ವರ್ಗೀಕರಣ ಸಲ್ಲ. ಜಾತೀಯತೆಗೆ ಬಹಿರಂಗವಾಗಿ ಬೆಲೆಯಿಲ್ಲ.

ಸಾಮೂಹಿಕವಾಗಿ ಏನೂ ನಡೆಯದ, ಸಮೂಹ ಇದು. ರಾಜಕಾರಣವೊಂದೇ ಇಲ್ಲಿಯ ಘಟನೆಗಳನ್ನು ನಿಯಂತ್ರಿಸುತ್ತದೆ; ವಿದ್ಯಮಾನವನ್ನು ನಿಯಂತ್ರಿಸುತ್ತದೆ. ಬದುಕನ್ನು ನಿಯಂತ್ರಿಸುವಂಥ ಶಕ್ತಿ ಯಾವುದೂ ಇಲ್ಲ. ಒಂದು ಮಹಾಸರೋವರದಲ್ಲಿ ತೇಲುತ್ತಿರುವ ಒಣಗಿದ ಎಲೆಗಳ ಹಾಗೆ ಇಲ್ಲಿ ಮಂದಿ ತೇಲುತ್ತಿರುತ್ತಾರೆ. ಎಲ್ಲೋ ಹುಟ್ಟಿದ ಒಂದು ಅಲೆ ಯಾರನ್ನೋ ಯಾವುದೋ ದಡದತ ತೇಲಿಸುತ್ತದೆ. ಸರೋವರ ಎಷ್ಟು ವಿಶಾಲವಾಗಿದೆ ಎಂದರೆ ಎಲೆಗಳಿಗೆ ತಾವು ಕೇಂದ್ರದತ್ತ ಚಲಿಸುತ್ತಿದ್ದೇವೋ ದಡದತ್ತಲೋ ಅನ್ನುವುದು ಗೊತ್ತೂ ಆಗುವುದಿಲ್ಲ. ಮಹಾನಗರ ಯೋಚಿಸುತ್ತದೆ. ನಾವು ಅದನ್ನು ನಮ್ಮದು ಅಂದುಕೊಳ್ಳುತ್ತೇವೆ. ಮಹಾನಗರ ಆಜ್ಞಾಪಿಸುತ್ತದೆ, ನಾವು ಸ್ವಯಂ ಪ್ರೇರಣೆ ಅಂದುಕೊಳ್ಳುತ್ತೇವೆ. ಮಹಾನಗರ ಕೊಲ್ಲುತ್ತದೆ, ನಾವದನ್ನು ದೈವಲೀಲೆ ಅನ್ನುತ್ತೇವೆ.

ಪ್ರಕಾಶಕರು - ಅಂಕಿತ ಪುಸ್ತಕ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)