Suresh Somapura, To Kannada : M. V. Nagarajarao
ಮಹಾ ಯೋಗಿನಿ
ಮಹಾ ಯೋಗಿನಿ
Publisher - ಅಂಕಿತ ಪುಸ್ತಕ
- Free Shipping Above ₹250
- Cash on Delivery (COD) Available
Pages - 144
Type - Paperback
ಇಂದೊಂದು ರೋಚಕ ಕಥೆ. ಕೇವಲ ರೋಚಕ ಕಥೆ ಮಾತ್ರವಲ್ಲ ಸತ್ಯಕಥೆ, ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ-ಪಿಶಾಚಿನಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ ಚೈತನ್ಯಾನಂದರನ್ನು ಭೇಟಿಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರ-ಮಂತ್ರ, ಶವಸಾಧನೆ ಇತ್ಯಾದಿ ನಡೆಸುತ್ತಾರೆ. ಅಂತಿಮವಾಗಿ 'ಕರ್ಣ-ಪಿಶಾಚಿನಿ' ಅವರ ವಶವಾಗುತ್ತದೆ.
ಸುರೇಶ್ ಸೋಮಪುರ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಗಳಿಸಿದ ಚಮತ್ಕಾರಗಳನ್ನು ಮಾನವ ಕಲ್ಯಾಣಕ್ಕಾಗಿ ಪ್ರಯೋಗಿಸಲು ನಿರ್ಧರಿಸುತ್ತಾರೆ. ಮನುಷ್ಯ ತನ್ನ ಜೀವನವನ್ನು ಹೇಗೆ ಕಳೆಯಬೇಕೆಂದು ಪ್ರತಿಪಾದಿಸುತ್ತಾರೆ.
ಆತ್ಮ-ಪರಮಾತ್ಮ, ಭೂತ-ಪ್ರೇತ, ಧರ್ಮ-ಅಧರ್ಮಗಳಿಗೆ ಹೆದರಿ ಬದುಕುವುದು ಸರಿಯಲ್ಲ, ಮನುಷ್ಯ, ಅಂಧಶ್ರದ್ಧೆಯಿಂದ ಹೊರ ಬರಬೇಕಿದೆ ಎನ್ನುತ್ತಾರೆ. ಬದುಕಲು ಹೊಸ ಮಾರ್ಗವನ್ನು ಕಂಡುಕೊಳ್ಳಲು ಇಲ್ಲಿಯ ಸತ್ಯಕತೆ ಪ್ರೇರಣೆ ನೀಡುತ್ತದೆ.
"ಅಘೋರಿಗಳ ನಡುವೆ" ಕೃತಿಯ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿರುವ ದಿ।। ಸುರೇಶ್ ಸೋಮಪುರ ಅವರ ಮತ್ತೊಂದು ರೋಚಕ ನೈಜಕತೆ ನಿಮ್ಮ ಮುಂದಿದೆ.
Share
Subscribe to our emails
Subscribe to our mailing list for insider news, product launches, and more.