Jayshri Bhat
Publisher -
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಇದೊಂದು ತುಂಬಾ ಪ್ರಾಮಾಣಿಕವಾಗಿರುವ, ನಾಟಕೀಯವಾಗಿರುವ, ಸ್ವಾರಸ್ಯಕರವಾಗಿರುವ ಲೀ ಶ್ವಿನ್‌ಶಿಂಗ್ ಆತ್ಮಕಥೆ. ಇದನ್ನು ಓದುವಾಗ ಒಂದು ಕಡೆ ಕಾರಂತರ 'ಮೊಗ ಪಡೆದ ಮನ' ನೆನಪಿಗೆ ಬರುತ್ತಿದ್ದರೆ, ಮತ್ತೊಂದು ಕಡೆ ಶ್ರೇಷ್ಠ ಭಾರತೀಯ ಸಾಧಕರಾದ ಉದಯಶಂಕರ, ಮಾಯಾ ರಾವ್ ಮುಂತಾದವರ ಕಥೆಯಂತೆಯೂ ಕಾಣುತ್ತದೆ. ಒಂದು ಬಡ ಸಮಾಜದಿಂದ ಬರುವ ಪ್ರತಿಭಾಶಾಲಿ, ಮತ್ತೊಂದು ಶ್ರೀಮಂತ ಸಮಾಜದಲ್ಲಿ ತನ್ನ ಕಲಾಸಿದ್ಧಿಯನ್ನು ಕಂಡುಕೊಳ್ಳುವುದು ಆಧುನಿಕ ಕಾಲದ ದುರದೃಷ್ಟಕರ ವ್ಯಂಗ್ಯ. ಈ ಕಥನ, ಕಲಾವಿದನ ಬಾಲ್ಯದಿಂದ ಪ್ರಾರಂಭವಾಗಿ ಇವನ ಕಲೆ ಪರಿಪೂರ್ಣವಾಗುವಲ್ಲಿಗೆ ಮುಗಿಯುತ್ತದೆ. ಹಾಗೆಯೇ, ಇನ್ನೊಂದು ನೆಲೆಯಲ್ಲಿ ಮಾವೋವಾದಿ ಚೀನಾದ ಕ್ರೌರ್ಯ ಹಾಗೂ ಬಂಡವಾಳಶಾಹಿ ಅಮೆರಿಕಾದ 'ಉದಾರವಾದ'ಗಳಿಗೂ ಕನ್ನಡಿ ಹಿಡಿಯುತ್ತದೆ.
