R. K. Asha Pramod
ಮಾ... ರತಿ
ಮಾ... ರತಿ
Publisher -
- Free Shipping Above ₹300
- Cash on Delivery (COD) Available
Pages - 176
Type - Paperback
Couldn't load pickup availability
ಮಗುವಿಗೆ ಸಿಗುವ ಮೊದಲ ಪ್ರೀತಿ ತಾಯಿಯದ್ದು. ಅದಕ್ಕೆ ವಾತ್ಸಲ್ಯ ಎಂದರೆ ತಪ್ಪಿಲ್ಲ. ಆದರೆ ಅದೇ ಮಗು ಯೌವನಕ್ಕೆ ಬಂದಾಗ ಸಂಗಾತಿಯಿಂದ ಸಿಗುವ ಪ್ರೀತಿ ತಾಯಿಯಿಂದ ಸಿಗುವ ಪ್ರೀತಿಯಷ್ಟೇ ದೈವೀಕ, ಗಂಡು-ಹೆಣ್ಣಿನ ಪ್ರೀತಿ ಪರಾಕಾಷ್ಠೆಗೆ ನಮ್ಮಲ್ಲಿ ಶಿವ-ಪಾರ್ವತಿಯ, ಲಕ್ಷ್ಮೀ-ನಾರಾಯಣರ ಆದರ್ಶ ದಾಂಪತ್ಯವನ್ನು ಹೋಲಿಸುವುದುಂಟು. ಆದರೆ ಅದೃಷ್ಟವಂತರಿಗಷ್ಟೇ ದೈವೀಕ ಪ್ರೀತಿಯ ಲಭ್ಯತೆ.
'ಮಾ... ರತಿ' ಕಾದಂಬರಿಯಲ್ಲಿ ಸಾಂಗತ್ಯದ ಪ್ರೀತಿ ಸಿಗುವ ಮತ್ತು ಸಿಗದ ಎರಡೂ ರೀತಿಯ ಪರಿಸ್ಥಿತಿಗಳನ್ನು ಬಹಳ ಸೊಗಸಾಗಿ ಲೇಖಕಿ ದಾಖಲಿಸಿದ್ದಾರೆ. ಒಂದೇ ಕೃತಿಯಲ್ಲಿ ಮತ್ತೊಂದು ಕೃತಿಯನ್ನು ಹೊಂದಿಸುವ ನಿರೂಪಣಾ ತಂತ್ರದ ಮೂಲಕ ಪ್ರೀತಿಸಾರ್ಥಕ್ಯದ, ಪ್ರೇಮವೈಫಲ್ಯದ ಎರಡು ಜೋಡಿಗಳ ಕಥೆಯನ್ನು ಹೆಣೆದಿದ್ದಾರೆ. ಆ ಹೆಣೆಯುವಿಕೆ ಸ್ವಾರಸ್ಯಕರವಾಗಿರುವ ಪ್ರಯುಕ್ತ ಮೊದಲ ಪುಟ ಓದಲು ಶುರು ಮಾಡಿದವರಿಗೆ ಕೊನೆಯ ಪುಟದಲ್ಲೇ ಎಚ್ಚರವಾಗುವುದು. ಅಂತಹ ಬರವಣಿಗೆಯನ್ನು ತಮ್ಮ ಎರಡನೇ ಕಾದಂಬರಿಯಲ್ಲೇ ಸಾಧಿಸಿದ್ದಾರೆ.
ಅವರು ಮುಂದೆ ಇಂತಹ ಇನ್ನಷ್ಟು ಉತ್ತಮ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಉಣಬಡಿಸಲೆಂದು ಆಶಿಸುತ್ತೇನೆ.
-ಪ್ರಕಾಶಕರು
Share


Subscribe to our emails
Subscribe to our mailing list for insider news, product launches, and more.