MA. SU. Mannar Krishana Rao
ಲೋಕಮಾನ್ಯ ಬಾಲ ಗಂಗಾಧರ ತಿಲಕ್
ಲೋಕಮಾನ್ಯ ಬಾಲ ಗಂಗಾಧರ ತಿಲಕ್
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 371
Type - Paperback
ಮ.ಸು. ಮನ್ನಾರ್ ಕೃಷ್ಣ ರಾವ್ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಕಳಲೆ ಗ್ರಾಮದವರು. ಇವರು ಮಂಡ್ಯ ನಗರದ ಮೈಷುಗರ್ ಪ್ರೌಢಶಾಲೆಯಲ್ಲಿ ಶಿಕ್ಷಕ ಮತ್ತು ಮುಖ್ಯ ಶಿಕ್ಷಕರಾಗಿ ಸೇವೆಸಲ್ಲಿಸಿ, ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು 14 ಕವನ ಸಂಕಲನಗಳನ್ನು, 8 ಸತ್ಯಘಟನೆಗಳ ಗದ್ಯ ಕೃತಿಗಳನ್ನು ಮತ್ತು 9 ಜೀವನಚರಿತ್ರೆಗಳನ್ನು, ಅಂದರೆ ಜಿ.ಡಿ. ಬಿರ್ಲಾ, ಜೆ.ಎನ್. ಟಾಟಾ. ಜೆ.ಆರ್.ಡಿ. ಟಾಟಾ, ಅಜೀಂ ಪ್ರೇಮ್‌ಜಿ, ಸರ್ದಾರ್ ಪಟೇಲ್. ರಾಜಾಜಿ, ಲಾಲ್ ಬಹಾದುರ್ ಶಾಸ್ತ್ರಿ ಮತ್ತು ನಾರಾಯಣ ಮೂರ್ತಿ ದಂಪತಿ ಅವರ ಜೀವನಚರಿತ್ರೆಗಳನ್ನು ರಚಿಸಿದ್ದಾರೆ. ಅವುಗಳ ಪೈಕಿ ಸರ್ದಾರ್ ಪಟೇಲರ ಜೀವನಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 'ಪುಸ್ತಕ ಬಹುಮಾನ' ಬಂದಿದೆ.
ಪ್ರಸ್ತುತ ಕೃತಿಯನ್ನು ಕುರಿತು
ಭಾರತದ ಸ್ವಾತಂತ್ರ್ಯ ಸಮರ ಚರಿತ್ರೆಯಲ್ಲಿ ಲೋಕಮಾನ್ಯ ತಿಲಕರದು ಒಂದು ಅಮೋಘ ಪಾತ್ರ.. ಆದರೆ ಸ್ವಾತಂತ್ರ್ಯಾ ನಂತರದ ಆರಂಭದ ದಶಕಗಳಲ್ಲಿ ಭಾರತದ ಆಡಳಿತ ಸೂತ್ರಗಳನ್ನು ಹಿಡಿದುಕೊಂಡವರಿಗೆ, ತಮ್ಮ ತುತ್ತೂರಿ ಊದಿಕೊಳ್ಳುವುದೇ ಮುಖ್ಯವಾಗಿ, ಇಂಥ ರತ್ನಗಳೆಲ್ಲ ಮೂಲೆಗುಂಪಾಗಿದ್ದವು.
ಈಗ ಶ್ರೀ ಕೃಷ್ಣರಾಯರು ಈ ಕೊರತೆಯನ್ನು ತುಂಬಲು 400ಕ್ಕೂ ಮೀರಿದ ಪುಟಗಳ ದೊಡ್ಡ ಪುಸ್ತಕವನ್ನೇ ಕನ್ನಡಿಗರ ಕೈಗೆ ನೀಡಿದ್ದಾರೆ. ಅವರದು ಬಹಳ ಸರಳ ಭಾಷೆ. ನದಿಯಂತೆ ಸರಾಗವಾಗಿ ಹರಿಯುವ ಕಥನ ಶೈಲಿ. ಮಕ್ಕಳೂ ಸಹಿತ ಓದಬಹುದು. ಯುವಕ ಯುವತಿಯರಂತೂ ನಮ್ಮ ದೇಶವು ಮರೆತಿರುವ ಮಹಾನುಭಾವನೊಬ್ಬನ ಜೀವನಗಾಥೆಯನ್ನು ಓದಿ ಪ್ರೇರಿತರಾಗಬೇಕು, ಪುನಿತರಾಗಬೇಕು.
=ಬಾಬು ಕೃಷ್ಣಮೂರ್ತಿ(ಮುನ್ನುಡಿಯಲ್ಲಿ)
Share
Subscribe to our emails
Subscribe to our mailing list for insider news, product launches, and more.