Keshava Prasad B. Kidooru
ಲೈಫ್ ಈಸ್ ವಂಡರ್ಫುಲ್
ಲೈಫ್ ಈಸ್ ವಂಡರ್ಫುಲ್
Publisher - ಸ್ನೇಹ ಬುಕ್ ಹೌಸ್
Regular price
Rs. 150.00
Regular price
Sale price
Rs. 150.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಈ ಪುಸ್ತಕದ ಲೇಖಕರು ಶ್ರೀ ಕೇಶವ ಪ್ರಸಾದ್ ಬಿ. ಕಿದೂರು ಅವರು ಅನುಭವೀ ಲೇಖಕರು, ಪತ್ರಕರ್ತರು.
ಕನ್ನಡ ಭಾಷೆಯಲ್ಲಿ ಸುಮಾರು ನಲ್ವತ್ತು ವರ್ಷಗಳಿಂದೀಚೆಗೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳು ಬಂದಿವೆ; ಬರುತ್ತಿವೆ. ಆತ್ಮ ವಿಶ್ವಾಸ, ಹೋರಾಟದ ಕೆಚ್ಚು, ಜೀವನದಲ್ಲಿ ಏನಾದರೂ ಸಾಧಿಸುವ ಹಂಬಲ-ಇವುಗಳಿಗೆ ಬೆಂಬಲ ನೀಡುವ ಸ್ಫೂರ್ತಿಯನ್ನೂ ಎಷ್ಟೋ ಓದುಗರಿಗೆ ಈ ಬರಹಗಳು ನೀಡಿರುವುದು ದಿಟ.
ಈ ಗ್ರಂಥದಲ್ಲಿ ವ್ಯಕ್ತಿತ್ವ ವಿಕಸನ, ಜೀವನದಲ್ಲಿ ಯಶಸ್ಸನ್ನೂ, ಸಂತೋಷವನ್ನೂ ಸಾರ್ಥಕತೆಯನ್ನೂ ಸಾಧಿಸುವುದು ಹೇಗೆ ಎನ್ನುವ ಬಗ್ಗೆ ವಿಪುಲವಾದ ಉಪಯುಕ್ತ ಮಾಹಿತಿಯನ್ನು ಲೇಖಕರು ನೀಡಿದ್ದಾರೆ. ಜೊತೆಗೆ ಪ್ರಾಚೀನ ಕಾಲದಿಂದ ಅತ್ಯಾಧುನಿಕ ಕಾಲದ ವರೆಗಿನ ಅನೇಕ ಜ್ಞಾನಿಗಳ, ವಿಜ್ಞಾನಿಗಳ ಸ್ಫೂರ್ತಿದಾಯಕ ಉಕ್ತಿಗಳನ್ನು ಅರ್ಥಪೂರ್ಣವಾದ ಅನುಭವಗಳನ್ನು, ವಿಶೇಷಪೂರ್ಣ ವಿಚಾರಗಳನ್ನು ಅಳವಡಿಸಿದ್ದಾರೆ. ಇಲ್ಲಿ ವ್ಯಕ್ತವಾಗಿರುವ ವಿಚಾರಗಳು ಸಮಕಾಲಿಕವೂ ಸಾರ್ವಕಾಲಿಕವೂ ಆಗಿದೆ.
ಈ ಕೃತಿಯ ವೈಶಿಷ್ಟ್ಯಗಳಲ್ಲಿ ಲೇಖಕರು ಬಳಸಿರುವ ಭಾಷೆ, ಶೈಲಿ ಪ್ರಮುಖ ಆಕರ್ಷಣೆಯಾಗಿದೆ, ಸರಳ, ನೇರ, ಸುಂದರ, ಸುಲಲಿತವಾಗಿ ಓದಿಸಿಕೊಂಡು ಹೋಗುವ ಭಾಷೆ ಓದುಗರಿಗೆ ಮುದ ನೀಡುತ್ತದೆ. ಹೀಗೆ ವಸ್ತುವಿನ ಉಪಯುಕ್ತತೆ, ನಿರೂಪಣೆಯ ಲವಲವಿಕೆ, ಭಾಷೆಯ ಆಕರ್ಷಣೆಗಳಿಂದ ಕೂಡಿರುವ ಈ ಕೃತಿಯು ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಈ ಸಂದರ್ಭದಲ್ಲಿ ಲೇಖಕರನ್ನು ಅಭಿನಂದಿಸುತ್ತ, ಅವರಿಂದ ಮುಂದೆ ಇನ್ನೂ ಉತ್ತಮವಾದ ಕೃತಿಗಳು ಹೊರ ಬರಲಿ ಎಂದು ಆಶಿಸುತ್ತೇನೆ.
ಸ್ವಾಮಿ ಜಗದಾತ್ಮಾನಂದ
ಶ್ರೀರಾಮ ಕೃಷ್ಣ ಪಾರದಾಶ್ರಮ , ಕೊಡಗು ಜಿಲ್ಲೆ
ಸ್ನೇಹ ಬುಕ್ ಹೌಸ್ ಪ್ರಕಾಶಕರು

Share
Subscribe to our emails
Subscribe to our mailing list for insider news, product launches, and more.