1
/
of
2
Shreedhara Banavsi
ಲಾಜಿಕ್ ಬಾಕ್ಸ್
ಲಾಜಿಕ್ ಬಾಕ್ಸ್
Publisher - ಪಂಚಮಿ ಪಬ್ಲಿಕೇಷನ್ಸ್
Regular price
Rs. 230.00
Regular price
Rs. 230.00
Sale price
Rs. 230.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available
Pages - 177
Type - Paperback
Couldn't load pickup availability
ಮಾಧ್ಯಮದ ಟಿಸಿಲು ಎಷ್ಟೇ ಹುಲುಸಾಗಿ ಹರಡಿಕೊಂಡರೂ, ಜೀವತಂತು ಮಾತ್ರ ಅದೇ ಇರುವುದು ಮಾಧ್ಯಮುದ ಮತ್ತೊಂದು ಶಕ್ತಿಯೂ ಹೌದು, ಹಾಗಾಗಿ ಆಧುನಿಕ ಮಾಧ್ಯಮವನ್ನು ಪ್ರವೇಶ ಮಾಡುವವರು ಅದರ ಮೂಲಕ್ಕೆಇಳಿದಾಗಲೇ ಮಾಧ್ಯಮದ ಪರಿಭಾಷೆ, ಪದರುಗಳು ದಕ್ಕುತ್ತದೆ. ಅಂತಹ ಪ್ರವೇಶಿಕೆಗೆ ನೆರವಾಗುವಂತಹ ಅನೇಕ ಲೇಖನಗಳ ಒಟ್ಟು ಗುಡ್ಡವೇ 'ಲಾಜಿಕ್ ಬಾಕ್ಸ್' ಕೃತಿ. ಭಾರತದಲ್ಲಿ ದೂರದರ್ಶನಕ್ಕೆ ಅದರದ್ದೇ ಇತಿಹಾಸವಿದೆ. ಅದರಲ್ಲೂ ಕರ್ನಾಟಕಕ್ಕೆ ಟಿ.ವಿ. ಬಂದಾಗ ಅದನ್ನು ನೋಡಿದ ರೀತಿಯೇ ವಿಚಿತ್ರವಾಗಿತ್ತು. ಕೇಬಲ್ ಟೆಲಿವಿಷನ್ ಬಂದ ನಂತರ ಅದು ಪಡೆದುಕೊಂಡ ವೇಗ ಇನ್ನೂ ಅದ್ಭುತ. ಈ ಎಲ್ಲ ಅಪರೂಪದ ದಾಖಲೆಗಳನ್ನು ಈ ಪುಸ್ತಕದಲ್ಲಿ ಲೇಖಕರು ದಾಖಲಿಸುತ್ತಾ ಹೋಗಿದ್ದಾರೆ. ಇತಿಹಾಸದ ಜೊತೆ ಜೊತೆಗೆ ಕೇಬಲ್ ಟವಿ ನೆಟ್‌ವರ್ಕ್ ಕಲ್ಪಸಿದ್ದ ಉದ್ಯೋಗಗಳು ಮತ್ತು ದೇಶಿಯ ಮಾರುಕಟ್ಟೆಯ ಏರಿಳಿತದ ನಡುವೆ ವಿವಿಧ ಉದ್ಯಮಗಳ ಸ್ಥಿತಿಗತಿಗಳನ್ನೂ ಅವಲೋಕಿಸಿದ್ದಾರೆ. ಶ್ರೀಧರ ಬನವಾಸಿ ಅವರು ಮಾಧ್ಯಮ (ಪತ್ರಿಕ ಮತ್ತು ವಿದ್ಯುನ್ಮಾನ) ಕ್ಷೇತ್ರದಲ್ಲಿ ದುಡಿದದ್ದು ಕಡಿಮೆ. ಆದರೆ, ಈ ಕ್ಷೇತ್ರದಲ್ಲಿ ಇದ್ದಷ್ಟು ಹೊತ್ತು ಅವರು ಪ್ರತಿದಿನದ ಬೆರಗನ್ನು ಅನುಭವಿಸಿದ್ದಾರೆ ಎನ್ನುವುದು ಕೃತಿಯ ಒಂದೊಂದು ಲೇಖನವೂ ಅರ್ಥ ಮಾಡಿಸುತ್ತಾ ಹೋಗುತ್ತದೆ. ಒಂದೊಂದು ಲೇಖನದಲ್ಲೂ ಅವರು ಕೊಟ್ಟ ಪುರಾವೆಗಳು ಸಂಶೋಧಕರ ಹುಡುಕಾಟವನ್ನು ಕಡಿಮೆ ಮಾಡಿಸುತ್ತವೆ. ಅಷ್ಟೊಂದು ಮಾಹಿತಿಗಳನ್ನು ಅವರು ಪ್ರತಿ ಲೇಖನದಲ್ಲೂ ಕೂಡುತ್ತಾ ಹೋಗಿದ್ದಾರೆ. ಇದೇ ಈ ಕೃತಿಯ ಹೆಚ್ಚುಗಾರಿಕೆ. ಟೆಲಿವಿಷನ್ ಲೋಕದಲ್ಲಿ ನಡೆದ ಭರಾಟೆಗಳು ಒಂದಾ ಎರಡಾ? ನೋಡಲು ಪುಟ್ಟದಾಗಿ ಕಾಣಿಸುವ ಎಲೆಕ್ಟ್ರಾನಿಕ್ ವಸ್ತುವಿನ ಸುತ್ತಲೂ ನಾನಾ ಕಥೆಗಳಿವೆ. ಆ ಕಥೆಗಳಿಂದ ಹುಟ್ಟಕೊಂಡ ಉಪಕಥೆಗಳು ಇವೆ. ವಾದ, ವಿವಾದ, ಮೋಸ, ಕ್ರೈಮ್ ಹೀಗೆ ಏನೆಲ್ಲ ವಿಷಯಗಳನ್ನು ಅದು ಒಳಗೊಂಡಿದೆ. ಈ ಎಲ್ಲವನ್ನೂ ಒಂದೇ ಗುಕ್ಕಿಗೆ ಸಿಗುವಂತೆ ಈ ಕೃತಿಯಲ್ಲಿ ಲೇಖಕರು ಹಿಡಿದಿಟ್ಟಿದ್ದಾರೆ.
-ಡಾ. ಶರಣು ಹುಲ್ಲೂರುಮಿ
-ಡಾ. ಶರಣು ಹುಲ್ಲೂರುಮಿ
Share


Subscribe to our emails
Subscribe to our mailing list for insider news, product launches, and more.