Skip to product information
1 of 2

T. S. Goravara

ಕುದರಿ ಮಾಸ್ತರ

ಕುದರಿ ಮಾಸ್ತರ

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 74

Type - Paperback

ಜೀವನಾನುಭವದ ಅಭಿವ್ಯಕ್ತಿಗಿಂತ ಸಿದ್ಧಾಂತ ಬದ್ಧತೆಯೇ ಹೆಚ್ಚು ಎಂಬ ನಿಲುವಿನ ಸಾಹಿತ್ಯ ಪ್ರಚಾರಕರು ಮತ್ತು ಅನುಭವ ಅಥವ ಸಿದ್ಧಾಂತಕ್ಕಿಂತಲೂ ಪ್ರಚಾರ-ಪ್ರತಿಷ್ಠಾಪನೆ. ಮುದ್ರಾಧಾರಣೆಯೇ ಮುಖ್ಯ ಎಂಬ ನಿಲುವಿನ. ಸುಗ್ಗಿಯ ಹಿಗ್ಗನ್ನು ಕೃತಕವಾಗಿ ಸೃಷ್ಟಿಸುತ್ತಿರುವ ಜಾಗತಿಕ ಜಾಣರು- ಈ ಎರಡು ಧ್ರುವಗಳ ನಡುವಿನ ಗೊಂದಲ ಕೊಂಚ ತಿಳಿಯಾಗುತ್ತಿರುವಂತಿದೆ. ಇತ್ತೀಚಿನ ದಿನಮಾನಗಳಲ್ಲಿ ಬರೆಯುತ್ತಿರುವ ಹೊಸ ತಲೆಮಾರಿನ ಲೇಖಕರು ಈ ಎರಡೂ ಅತಿ ನಿಲುವಿನ ಮಧ್ಯೆ ಇರಬಹುದಾದ ಕಥನ ಪರಂಪರೆಯ ಹುಡುಕಾಟದಲ್ಲಿರುವಂತೆ ಕಾಣಿಸುತ್ತಿದ್ದಾರೆ. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಗೆ ಸೇರಿದ ಈ ತರುಣರು ಮುಖ್ಯಧಾರೆಯಲ್ಲಿ ದೊರಕುವ ಮಾನ್ಯತೆಯೇ ಅಂತಿಮ ಎಂದು ತಿಳಿದಿಲ್ಲದಿರುವುದು ಕೂಡ ಆರೋಗ್ಯಕರ ನಿಲುವೇ ಆಗಿದೆ.

ಟಿ.ಎಸ್. ಗೊರವರ ಕೂಡ ಇದೇ ಬಗೆಯ ತರುಣ ಲೇಖಕರಾಗಿದ್ದಾರೆ. ಬದುಕಿನ ತಾಳ-ಲಯ-ಗತಿಗಳನ್ನು ಕೃತಕತೆಯ ಲೇಪವಿಲ್ಲದೆ ಅತ್ಯಂತ ಸಹಜವಾಗಿ ಹಿಡಿದಿಡಬಲ್ಲ ಸಾಮರ್ಥ್ಯ ನಿಸರ್ಗ ಕೃಪೆಯಂತೆ ಅವರಿಗೆ ಒಲಿದು ಬಂದಿದೆ. ಅವರ ಕಥನ ಶೈಲಿ, ಕಥಾ ವಸ್ತುವನ್ನು ನಿಭಾಯಿಸುವ ರೀತಿ ಪ್ರಶಂಸೆಗೆ ಪಾತ್ರವಾಗುವಂತಿದೆ. ಗ್ರಾಮೀಣ ಸಮಾಜವನ್ನು ಚಿತ್ರಿಸುವಾಗ ಅವರ ಶೈಲಿ ಭಾವಗೀತಾತ್ಮಕವಾಗುತ್ತದೆ. ಸ್ಥಳೀಯ ನುಡಿಗಟ್ಟುಗಳಲ್ಲಿನ ಚೆಲುವು-ಕಸುವು, ರೂಪಕ ಶಕ್ತಿಯನ್ನು ಪಡೆದ ಸಹಜ ವಿವರಗಳನ್ನು ನಾವು ಓದಿಯೇ ಅಸ್ವಾದಿಸಬೇಕು ಎನ್ನುವಂತಿವೆ.

-ಕೇಶವ ಮಳಗಿ (ಮುನ್ನುಡಿಯಿಂದ)

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)