Skip to product information
1 of 1

Ajjampura Krishnaswamy

ಖಗಸಿರಿ

ಖಗಸಿರಿ

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಅಪಾರ ಜೀವರಾಶಿಯಲ್ಲಿ ಪಕ್ಷಿಗಳದ್ದೇ ಒಂದು ವೈಶಿಷ್ಟ್ಯ. ಅವುಗಳ ವಾಯುಗಮನದ ಪರಿಪೂರ್ಣತೆ, ಮನತಣಿಸುವ ವರ್ಣವಿನ್ಯಾಸ, ಗರಿಗೆದರುವ ವೈಖರಿ, ಗಾನಸುಧೆ, ಉಲ್ಲಾಸಭರಿತ ದಿನಚರಿ, ಆಹಾರ ದೊರಕಿಸಿಕೊಳ್ಳುವ ಸಾಧನೆ, ಗೂಡುಕಟ್ಟುವ ನಿಪುಣತೆ, ಮರಿಪಾಲನೆಯ ಹೊಣೆ, ಆಗಮನ-ನಿರ್ಗಮನ ಇವೆಲ್ಲ ವಿಸ್ಮಯಭರಿತವಾಗಿದ್ದು, ಪಕ್ಷಿ ವೀಕ್ಷಣೆ ಇಂದು ಆಸಕ್ತಿದಾಯಕ ಹವ್ಯಾಸವಾಗಿದೆ.
ಈ ದಿಸೆಯಲ್ಲಿ ಕನ್ನಡ ಬಂಧುಗಳಿಗೆ ಕರ್ನಾಟಕದಲ್ಲಿ ಕಂಡು ಬರುವ ಜಲಪಕ್ಷಿಗಳು, ನೀರ್ನಡಿಗೆಯ ಪಕ್ಷಿಗಳು, ಗಗನ ವಿಹಾರಿಗಳು, ಇತ್ಯಾದಿಗಳಲ್ಲಿ ಕೆಲವಾರು ಪಕ್ಷಿಗಳ ಪರಿಚಯವನ್ನು ಸೂಕ್ತ ವರ್ಣಚಿತ್ರಗಳ ಮುಖೇನ ಮಾಡಿಕೊಡಲಾಗಿದೆ. ಪಕ್ಷಿ ಜೀವನದ ಕುತೂಹಲಕಾರಿ ವಿಶೇಷತೆಗಳನ್ನು ಹಾಗೂ ಅವುಗಳು ಬದುಕಿ ಬಾಳಲು ರೂಢಿಸಿಕೊಂಡ ಅನೇಕ ಸಾಧನೆಗಳನ್ನು ಪ್ರಬಂಧ, ಅನುಬಂಧಗಳಲ್ಲಿ ಪ್ರಸ್ತಾಪ ಮಾಡಲಾಗಿದೆ.
ಕನ್ನಡದಲ್ಲಿ ಹೆಸರು ಕಾಣದ ಕೆಲವು ಪಕ್ಷಿಗಳು ಹೊಸ ಹೆಸರು ತಳೆದು ಕನ್ನಡಿಗರ ಮನದಲ್ಲಿ ಮೂಡುವಂತೆ ಮಾಡಲಾಗಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)