Skip to product information
1 of 1

Ravi Belagere

ಖಾಸ್ ಬಾತ್

ಖಾಸ್ ಬಾತ್

Publisher - ಭಾವನಾ ಪ್ರಕಾಶನ

Regular price Rs. 228.00
Regular price Rs. 250.00 Sale price Rs. 228.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 225

Type - Paperback

ಯಾರಿಗೂ ಆಗದೇ ಇರೋದು ನಿಮಗೇ ಆಗುತ್ತಟ್ಟಿಸರ್?' ಕೇಳ್ತಾರೆ.

''ಏನು ಮಾಡಿ, ಒಮ್ಮೊಮ್ಮೆ ಯಾರೂ ಮಾಡದ್ದನ್ನು ನಾನು ಮಾಡುತ್ತೇನೆ. ಏಕೆಂದರೆ ನಾನು ಮುಂಬ, ಉತ್ಸಾಹಿ ಕಾರ್ಗಿಲ್ ಬೆಟ್ಟದ ಮೇಲಕ್ಕೆ ಯಾರೂ ಹತ್ತಿರಲಿಲ್ಲ, ಕನ್ನಡಿಗರಲ್ಲಿ, ನಾನು ಹತ್ತಿದ್ದೆ. ಬೇರೆ ಪತ್ರಿಕೆಯವರೂ ಬರಬಹುದಿತ್ತು, ಹೋಗಿ, ಗೋಗರೆದು ಕೈ ಹಿಡಿದು ಕರೆ ತಂದು ಹತ್ತಿಸಲಾ? ಅದು ಅವರ ಇಷ್ಟ ಅಲ್ಲಿ ಯುದ್ಧ ಭೂಮಿಯಲ್ಲಿ hand to hand fight ನಡೆಯಿತು, ನೀವು ನೋಡಿದಿರಾ? ನೋಡಿದ್ದಿದ್ದರೆ ಅದು ನಿಮ್ಮ ಖಾಸ್‌ಬಾತ್'ಗೆ ಜಮೆ ಆಗುತ್ತಿತ್ತು. ನೀವು ಕೆಳಗೇ ಉಳಿದು ಆರ್ಮಿ ಅಧಿಕಾರಿಗಳೊಂದಿಗೆ ಲಲ್ಲೆ ಹೊಡೆದು "my experiences in Kargil” ಅಂತ ರೆಟ್ಟೆಗಾತ್ರದ ಪುಸ್ತಕ ಬರೆದರೆ ಅದೂ ಓಕೆ, ನಾನು ಇಳಿದು ಬಂದು ಕಾರ್ಗಿಲ್‌ನಲ್ಲಿ ಹದಿನೇಳು ದಿನ' ಅಂತ ಬರೆದರೆ ಅದೂ ಮಂಜೂರ್, ಆ ತರಹದ ಒಂದು ಅನುಭವಕ್ಕೆ ಒಗ್ಗಿಕೊಳ್ಳದ ಹೊರತು, ನಿಮ್ಮ 'ಖಾಸ್‌ಬಾತ್'ನೊಳಕ್ಕೆ ಕಾರ್ಗಿಲ್ ಇಳಿದು ಸ್ಥಾಪಿತವಾಗದು.

ಅದೇ ನಾನು ಅಫಘನಿಸ್ತಾನಕ್ಕೆ ಹೋದೆ. ಅಲ್ಲಿಯ ಜನರೆಲ್ಲ ಹೊರಕ್ಕೆ ಓಡುತ್ತಿದ್ದರು. ನಿಮಗೆ ಗೊತ್ತಿರಲಿಕ್ಕಿಲ್ಲ: ಯೂರಪ್‌-ಏಷಿಯಾಕ್ಕೂ ಮಧ್ಯೆ ಇರೋ ದೇಶವದು. ಅಲ್ಲಿನವರನ್ನು 'ಯೂರೇಷಿಯನ್ನರು' ಅಂತಾರೆ. ನಮ್ಮನ್ನು 'ಇಂಡಿಯನ್ಸ್' ಅಂದಹಾಗೆ, ಅತಿಥಿ ಸತ್ಕಾರ ಆ ಜನರ ನೆತ್ತರಿನಲ್ಲೇ ಇದೆ. ಅಂಥ ಮುದ್ದಾದ ದೇಶವನ್ನು ಹಿಡಿದು ಪುಡಿಗುಟ್ಟತೊಡಗಿತು ಅಮೆರಿಕ, ನಾನು ನೇರ ಹೋಗಿ ಅದರ ಅಡಿಗೇ ನಿಂದೆ. ಕಣ್ಣಾರೆ ನಾನು ಕುಂದೂಸ್ ಯುದ್ಧವೆಂಬ ಘನಘೋರ ಯುದ್ಧ ನೋಡಿದೆ. ಉಂಟಾ? ಬೇರೆ ಪತ್ರಕರ್ತರಿಗೆ ಅದು ಸಾಧ್ಯವಾ? ಸಾಧ್ಯವಾದರೆ ಅದು ಅವನ ಖಾಸ್‌ಬಾತ್. ಆಗಲಿಲ್ಲವೋ sorry sorry.

ಇಲ್ಲಿ ನನ್ನ ಜೀವನಾನುಭವದ ತುಣುಕುಗಳನ್ನು ನೀಡಿದ್ದೇನೆ. ಗ್ರಹಿಸಬಹುದು. ಹಿಮಾಲಯಕ್ಕೆ ಹೋಗಬೇಕೆನ್ನಿಸಿದರೆ, ಅದು ನಿಮ್ಮ ಖಾಸ್‌ಬಾತ್ Why don't you try?

-ರವಿ ಬೆಳಗೆರೆ
View full details