Skip to product information
1 of 1

Girimane Shyamarao

ಹೇಮಾವತಿ ತೀರದ ಕೌತುಕ ಕತೆಗಳು

ಹೇಮಾವತಿ ತೀರದ ಕೌತುಕ ಕತೆಗಳು

Publisher - ಗಿರಿಮನೆ ಪ್ರಕಾಶನ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಇದು ಸಾವಿರದ ಒಂಬೈನೂರಾ ತೊಂಭತ್ತರ ದಶಕದ ಆಚೀಚೆ ಹುಟ್ಟೂಲಿನ ಹಳ್ಳಿ ಮತ್ತು ಅದನ್ನು ಬಿಟ್ಟು ಪೇಟೆ ಸೇರಿದ ಸಂದರ್ಭಗಳಲ್ಲ ಹೇಮಾವತಿ ನದಿಯ ಅಕ್ಕ-ಪಕ್ಕ ನಡೆದ ಘಟನೆಗಳ ಮಲೆನಾಡಿನ ಚಿತ್ರಣ. ಮಲೆನಾಡಿನ ರೋಚಕ ಕತೆಗಳ ಒಂಭತ್ತನೆಯ ಭಾಗ.

ನಮ್ಮ ಸುತ್ತ-ಮುತ್ತ ದಿನನಿತ್ಯವೂ ನಡೆಯುವ ಘಟನೆಗಳಲ್ಲಿ ನಮಗೆ ಸಂಬಂಧ ಪಟ್ಟದ್ದು, ಪಡವಿರುವುದು ಎರಡೂ ಇರುತ್ತದೆ. ಅದರಲ್ಲೂ ಪ್ರಾಣಿ, ಪಕ್ಷಿ, ನದಿ, ಗುಡ್ಡ-ಬೆಟ್ಟ, ಕಾಡು, ಮಳೆ, ಮಂಜುಗಳಿರುವ ಮಲೆನಾಡಿನಲ್ಲಿ ನಡೆಯುವ ಘಟನೆಗಳು ಯಾವತ್ತೂ ವಿಶೇಷವೇ. ಕೆಲವು ನಮ್ಮ ಗಮನಕ್ಕೇ ಬಾರದಿದ್ದರೆ ಕೆಲವೊಂದಕ್ಕೆ ನಾವು ಮೂಕ ಪ್ರೇಕ್ಷಕರು. ಅವು ನಮ್ಮಲ್ಲಿ ಯಾವ ಭಾವನೆಗಳನ್ನೂ ಹುಟ್ಟು ಹಾಕುವುದಿಲ್ಲ. ಕೆಲವು ನಮ್ಮ ಮನ ಕಲಕಿದರೆ ಇನ್ನು ಕೆಲವು ನೇರ ನಮಗೇ ಸಂಬಂಧಪಟ್ಟದ್ದಾಗಿ ಅದರ ಸಂತಸ, ನೋವು, ದುಗುಡ, ದುಮ್ಮಾನಗಳು ನಮ್ಮನ್ನೇ ನಲಿಸುತ್ತವೆ; ಬಾಧಿಸುತ್ತವೆ. ನಮ್ಮದು ನಮಗೆ ಬೇಗ ಅರ್ಥವಾಗುತ್ತದೆ. ಇಂತಹಾ ಸಂದರ್ಭಗಳಲ್ಲಿ ಕೂಡಾ ಅವರವರ ಭಾವನೆಗಳು ಹೇಗಿರುತ್ತವೆ? ಅವರವರ ಕಷ್ಟ-ಸುಖಗಳ ಅನುಭವ ಎಂಥಾದ್ದು? ಎನ್ನುವುದನ್ನು ಅರ್ಥಮಾಡಿಕೊಂಡು ಓದುಗರಿಗೂ ಅರ್ಥವಾಗುವಂತೆ ಪರಿಣಾಮಕಾರಿಯಾಗಿ ಬರಹದಲ್ಲಿ ಮೂಡಿಸಲು ಶಕ್ತನಾಗುವ ಬರಹಗಾರ ಓದುಗರ ಮನ ಗೆಲ್ಲುತ್ತಾನೆ.

ಹಾಗೆ ಕಳೆದ ಕಾಲದ ಕೆಲವು ಸಂಗತಿಗಳನ್ನು ಅಗತ್ಯಕ್ಕೆ ತಕ್ಕ ಬದಲಾವಣಿಗಳೊಂದಿಗೆ ಪರಿಣಾಮಕಾರಿಯಾಗಿ ದಾಖಲಿಸಲು ಇಲ್ಲಿ ಯತ್ನಿಸಿದ್ದೇನೆ. ಓದುಗರ ಮನ ಮುಟ್ಟದರೆ ಧನ್ಯತೆಯ ಭಾವ ನನ್ನದು. ಮಲೆನಾಡಿನ ರೋಚಕ ಕತೆಗಳ ಸರಣಿಗೆ, ಅಭೂತ ಪೂರ್ವ ಯಶಸ್ಸಿಗೆ, ರೋಚಕ ಮುನ್ನಡೆ ನೀಡಿ ಸಹಕರಿಸಿದ, ಸಹಕರಿಸುತ್ತಿರುವ ಎಲ್ಲರಿಗೂ ಈ ಕೃತಿ ಸಮರ್ಪಣಿ.

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
R
Raviprakash N

Nice book