Radahakrishna Kalwar
ಕವಚ
ಕವಚ
Publisher - ವೀರಲೋಕ ಬುಕ್ಸ್
- Free Shipping Above ₹250
- Cash on Delivery (COD) Available
Pages - 149
Type - Paperback
'ಕವಚ' ಮಹಾಭಾರತದ ಕರ್ಣನನ್ನು ಕುರಿತ ಕಾದಂಬರಿ. ಪೌರಾಣಿಕ ಪಾತ್ರವೊಂದು ಆಧುನಿಕ ಜೀವನಕ್ಕೆ ಸಂಗತವಾಗುವ ನೆಲೆಯಲ್ಲಿ ಇದನ್ನು ಗಮನಿಸಬೇಕು. ಯುಗಾಂತರಗಳಿಂದ ಮನುಷ್ಯನ ವಿಚಾರಗಳು. ಭಾವನೆಗಳು ಇಂದಿನವರೆಗೂ ಬದಲಾಗದೆ ಉಳಿದಿವೆ.
ಅಂದಿನ ಮನುಷ್ಯನ ತಲ್ಲಣ ಇಂದಿನ ಮನುಷ್ಯನಿಗೂ ಇದೆ. ತಾನು ಎಂಬ ಪ್ರಜ್ಞೆ ಅವನಂತೆ ಇವನಿಗೂ ಜಾಗೃತವೇ ಇದೆ. ಕರ್ಣನ ತಲ್ಲಣಗಳು, ಅಸ್ತಿತ್ವದ ಉಳಿವಿಗಾಗಿ ಅವನ ಹೋರಾಟ, ಸ್ವಾರ್ಥ, ನಿಸ್ವಾರ್ಥಗಳು ಆಧುನಿಕ ಮನುಷ್ಯನದೂ ಹೌದು. ಹಾಗಾಗಿ ಅವನ ಜೀವನವನ್ನು ಇಂದೂ ನೂರಾರು ಜನರು ಜೀವಿಸುತ್ತಲಿದ್ದಾರೆ. ಆದುದರಿಂದ ಇಂದೂ ಮುಂದೂ ಕರ್ಣನಂತಹ ಪಾತ್ರಗಳು ಕಾಡುತ್ತಲೇ ಇರುತ್ತವೆ.
ಕರ್ಣನಿಗೆ ಪೂರ್ವ ಜನ್ಮದಲ್ಲಿ ಸಹಸ್ರ ಕವಚಗಳಿದ್ದುವೆಂದೂ, ಅದನ್ನು ನರ ಮತ್ತು ನಾರಾಯಣರೆಂಬ ಋಷಿಗಳು ಯುದ್ಧದಲ್ಲಿ ಕತ್ತರಿಸುತ್ತ ಬಂದರೆಂಬುದು ಕಥೆ. ಅವುಗಳಲ್ಲಿ ಒಂದು ಕವಚ ಉಳಿದು ಬಂತು. ಅದನ್ನು ಕತ್ತರಿಸುವುದಕ್ಕಾಗಿ ಕೃಷ್ಣಾರ್ಜುನರು ಈ ಜನ್ಮದಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲ, ಜೀವನೊಬ್ಬನಿಗೆ ಅನೇಕ ಕವಚಗಳು, ಕರ್ಣನಂತೆ. ಅವುಗಳನ್ನು ಕಳೆದುಕೊಳ್ಳುತ್ತ. ಕಳೆದುಕೊಳ್ಳುತ್ತ ಸಾಗುವುದೇ ಅವನ ಪಾಡು. ಆ ಕವಚಗಳು ಲೋಹದ ಕವಚಗಳಲ್ಲ. ಕವಚ ಸಾಂಕೇತಿಕ ಅಷ್ಟೇ. ಕರ್ಣನ ಬದುಕೂ ಈ ಕವಚಗಳನ್ನು ಕಳೆದುಕೊಳ್ಳುವ ಪ್ರಕ್ರಿಯೆ. ಅದನ್ನೇ ಕಾದಂಬರಿಯೂ ಧ್ವನಿಸುತ್ತದೆ..
-ರಾಧಾಕೃಷ್ಣ ಕಲ್ದಾರ್
Share
ಕವಚ
Subscribe to our emails
Subscribe to our mailing list for insider news, product launches, and more.