Lalitaaja Mallara
ಕೋಟಿ ತೀರ್ಥ
ಕೋಟಿ ತೀರ್ಥ
Publisher - ಸ್ನೇಹ ಬುಕ್ ಹೌಸ್
- Free Shipping Above ₹250
- Cash on Delivery (COD) Available
Pages - 432
Type - Paperback
ಬಹು ದೊಡ್ಡ ಸಂಖ್ಯೆಯಲ್ಲಿರುವ ಒಕ್ಕಲಿಗ ಗೌಡರ ಸಮುದಾಯ ರಾಜ್ಯದೆಲ್ಲೆಡೆ ಚದುರಿ ತಮ್ಮ ಪ್ರಾಬಲ್ಯ ವರ್ಧನೆ ಮಾಡಿರುವುದರ ಹಿಂದೆ ಇದ್ದ ದೌರ್ಜನ್ಯಗಳು, ಮತಾಂತರ ಭೀತಿ, ಸಾಮ್ರಾಜ್ಯಶಾಹಿಗಳ ವಿರುದ್ಧದ ಒಕ್ಕಲಿಗ ಹೋರಾಟ ಬಹು ದೊಡ್ಡ ಚರಿತ್ರೆ ಇದೆಲ್ಲದರ ಜೊತೆ ಜೊತೆಗೆ ಘಟ್ಟದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವಲಸೆ ಬಂದ ಒಕ್ಕಲಿಗ- ಗೌಡರು ದಟ್ಟಾರಣ್ಯಗಳ ನಡುವೆ ತಮ್ಮ ಕೃಷಿ, ಒಕ್ಕಲುತನವನ್ನು ಆರಂಭಿಸುತ್ತಲೇ ದೊಡ್ಡ ಮನೆತನಗಳಾಗಿ ಬೆಳೆದಿದ್ದು ಇತಿಹಾಸ.
ಕಾದಂಬರಿಕಾರ್ತಿ ಲಲಿತಾಜ ಮಲ್ಲಾರ ಅವರ ಅಧ್ಯಯನಶೀಲ ಬರಹ ನನಗೆ ಅತ್ಯಾಪ್ತವಾದದ್ದು. 'ಕೋಟಿ ತೀರ್ಥ'ದ ಮೂಲಕ ಮುಂದಿನ ತಲೆಮಾರುಗಳಿಗೆ ಕೇವಲ ದಕ್ಷಿಣ ಕನ್ನಡದ ಗೌಡರ ಇತಿಹಾಸವನ್ನಷ್ಟೇ ಅಲ್ಲ; ಕೊಡಗು ಜಿಲ್ಲೆ, ಸುಳ್ಯ ಹಾಗೂ ಪುತ್ತೂರು ತಾಲೂಕು ವ್ಯಾಪ್ತಿಯ ಗೌಡರ ಆಡುಭಾಷೆಯಾದ ಅರೆಗನ್ನಡ ಅಥವಾ ಅರೆಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನವನ್ನೂ ಮಾಡಿರುವುದು ಸಂತಸದ ವಿಚಾರ.
''ಕೋಟಿ ತೀರ್ಥ' ವಿಭಿನ್ನ ಶೈಲಿಯ ವಸ್ತು ಹೊಂದಿದ್ದು, ಯುವ ಬರಹಗಾರರಿಗೆ ಅಧ್ಯಯನಶೀಲ ಕಾದಂಬರಿಯೂ ಆಗಲಿದೆ. ಇಳಿವಯಸ್ಸಿನಲ್ಲಿ ಬರಹದ ಮೂಲಕ ಹೊಸತನ್ನು ಹುಡುಕುವ ಅವರ ಪ್ರಯತ್ನ ಯಶಸ್ಸು ಕಾಣಲಿ.
-ಜಯಶೇಖರ್ ಮಡಪ್ಪಾಡಿ (ಪತ್ರಕರ್ತರು, ಕುಂದಾಪುರ)
Share
Subscribe to our emails
Subscribe to our mailing list for insider news, product launches, and more.