Vasantha Shetty
ಕರ್ನಾಟಕವೊಂದೇ...ಒಡಕು ತರಲಿದೆ ಕೆಡುಕು.
ಕರ್ನಾಟಕವೊಂದೇ...ಒಡಕು ತರಲಿದೆ ಕೆಡುಕು.
Publisher - ಬನವಾಸಿ ಬಳಗ
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ನಮ್ಮ ಹಿರಿಯರ ದಶಕಗಳ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಕನ್ನಡ ನಾಡು ಒಂದಾಯಿತು. ಸರಿ ಸುಮಾರು 750 ವರ್ಷಗಳ ಕಾಲ ಬೇರೆ ಬೇರೆ ಆಡಳಿತದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರು ಮತ್ತೆ ಒಂದಾದದ್ದು ಕರ್ನಾಟಕದ ಏಕೀಕರಣವಾದ ಮೇಲೆ. ಇಂತಹ ಕನ್ನಡ ನಾಡನ್ನು ಒಡೆಯಬೇಕು ಅನ್ನುವ ದನಿಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿವೆ. ಎಲ್ಲ ಸಮಸ್ಯೆಗಳಿಗೂ ರಾಜ್ಯ ಒಡೆಯುವುದೇ ಪರಿಹಾರ ಅನ್ನುವ ವಾದವೊಂದನ್ನು ಮುನ್ನೆಲೆಗೆ ತರುವ ವ್ಯವಸ್ಥಿತ ಪ್ರಯತ್ನಗಳಾಗುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಯಾಕೆ ಒಂದಾಗಿರಬೇಕು, ಒಡೆದುಕೊಂಡರೆ ಉತ್ತರ, ದಕ್ಷಿಣವೆನ್ನದೆ ಎಲ್ಲ ಭಾಗದ ಕನ್ನಡಿಗರು ಎದುರಿಸಬಹುದಾದ ಸಮಸ್ಯೆಗಳೇನು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯವೊಂದು ದೊಡ್ಡದಾಗಿರಬೇಕಾದ ಅಗತ್ಯವೇನು, ಏಳಿಗೆಗೂ ಜನಪ್ರತಿನಿಧಿಗಳಿಗೂ ಇರುವ ಸಂಬಂಧವೇನು, ತೆಲಂಗಾಣ ರಾಜ್ಯವಾದ ಮೇಲೆ ತೆಲುಗರ ನಡುವೆ ಉಂಟಾಗಿರುವ ತೀವ್ರ ಒಡಕಿನ ಪರಿಣಾಮಗಳೇನು ಅನ್ನುವ ಬಗ್ಗೆ ಕನ್ನಡಿಗರಲ್ಲಿ ಅರಿವು ಮೂಡಿಸುವ ಪ್ರಯತ್ನ “ಕರ್ನಾಟಕವೊಂದೇ – ಒಡಕು ತರಲಿದೆ ಕೆಡುಕು” ಹೊತ್ತಗೆ.
Share

Subscribe to our emails
Subscribe to our mailing list for insider news, product launches, and more.