Skip to product information
1 of 1

Dr. D. N. Shankara Batt

ಕನ್ನಡಕ್ಕೆ ಮಹಾಪ್ರಾಣ ಯಾಕೆ ಬೇಡ?

ಕನ್ನಡಕ್ಕೆ ಮಹಾಪ್ರಾಣ ಯಾಕೆ ಬೇಡ?

Publisher - ಡಿ. ಎನ್. ಶಂಕರ ಬಟ್

Regular price Rs. 50.00
Regular price Rs. 50.00 Sale price Rs. 50.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಕನ್ನಡವನ್ನು ಬರಹಕ್ಕೆ ಇಳಿಸುವಾಗ ಹಲವಾರು ಕಾರಣಗಳಿಂದಾಗಿ ಕನ್ನಡದ ವರ್ಣಮಾಲೆಯಲ್ಲಿ ಹೆಚ್ಚಿನ ಅಕ್ಷರಗಳನ್ನು ಉಳಿಸಿಕೊಳ್ಳಲಾಗಿತ್ತು. ಈ ಕೆಲವು ಹೆಚ್ಚಿನ ಅಕ್ಷರಗಳನ್ನು ಹಾಗೆ ಉಳಿಸಿಕೊಳ್ಳಲು ಏನೇ ಕಾರಣಗಳಿದ್ದರೂ ಅವುಗಳ ಉಲಿಯುವಿಕೆ ಮಾತ್ರ ನಿಜವಾಗಿಯೂ ಕನ್ನಡ ನುಡಿಯಲ್ಲಿ ಅಂದರೆ ಕನ್ನಡ ಮಾತಲ್ಲಿ ಇರಲಿಲ್ಲ ಹಾಗೂ ಈಗಲೂ ಇಲ್ಲ. ಕನ್ನಡಿಗರ ಉಲಿಯುವಿಕೆಗೆ ತಕ್ಕಂತೆ ಬರೆಯುವುದಾದರೆ 31 ಅಕ್ಷರಗಳು ಮಾತ್ರ ಸಾಕಾಗುತ್ತವೆ. ಮಹಾಪ್ರಾಣಗಳು, ವಿಸರ್ಗ, ಋ ಮತ್ತು ಷ ಮೊದಲಾದ ಅಕ್ಷರಗಳು ಕನ್ನಡಕ್ಕೆ ಅನವಶ್ಯಕ.

ಈ ವಿಷಯಗಳ ಕುರಿತಾಗಿ ಡಾ ಡಿ ಎನ್ ಶಂಕರ ಬಟ್ಟರು ಹಲವು ವರುಶಗಳಿಂದ ಹೇಳುತ್ತ ಬಂದಿದ್ದಾರೆ. ಈ ಎಲ್ಲ ವಿಷಯಗಳನ್ನು ಒಟ್ಟು ಸೇರಿಸಿ ಚುಟುಕಾಗಿ ‘ಕನ್ನಡಕ್ಕೆ ಮಹಾಪ್ರಾಣ ಯಾಕೆ ಬೇಡ?‘ ಎಂಬ ಹೊತ್ತಗೆಯನ್ನು ಬರೆದಿದ್ದಾರೆ. ಈ ಹೊತ್ತಗೆಯಲ್ಲಿ ಮಹಾಪ್ರಾಣಗಳೇ ಮೊದಲಾದ ಅಕ್ಷರಗಳು ಯಾಕೆ ಕನ್ನಡಕ್ಕೆ ಅನವಶ್ಯಕ ಎಂದು ತೋರಿಸಿರುವುದಲ್ಲದೆ, ಯಾವುದೇ ಹೊಸ ಮಾರ್ಪಾಟುಗಳಿಲ್ಲದೆ ಕನ್ನಡಕ್ಕೆ ಬೇಕಾಗುವಂತೆ ವರ್ಣಮಾಲೆಯನ್ನು ಹೇಗೆ ಒಗ್ಗಿಸಿಕೊಳ್ಳಬಹುದು ಮತ್ತು ಹಾಗೆ ಮಾಡುವುದರಿಂದ ಕನ್ನಡ ಸಮಾಜಕ್ಕೆ ಆಗುವ ಒಳಿತುಗಳೇನು ಎಂಬುದನ್ನು ತಿಳಿಸಲಾಗಿದೆ. ಅಲ್ಲದೆ ಹೀಗೆ ಲಿಪಿಯನ್ನು ತಮ್ಮ ನುಡಿಯ ಉಚ್ಚಾರಣೆಗೆ ತಕ್ಕಂತೆ ಒಗ್ಗಿಸಿಕೊಂಡ ಪ್ರಪಂಚದ ಹಲವು ನುಡಿಗಳ ಉದಾಹರಣೆಗಳನ್ನು ಈ ಹೊತ್ತಗೆಯಲ್ಲಿ ನೀಡಲಾಗಿದೆ.

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
S
Sukamuni

ನಮ್ಮ ಕನ್ನಡದಲ್ಲೂ ಪದಗಳಿವೆ, ಅವುಗಳನನೇ ಬಳಸೋಣ..