Dr. D. N. Shankara Batt
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
Publisher - ಡಿ. ಎನ್. ಶಂಕರ ಬಟ್
- Free Shipping Above ₹250
- Cash on Delivery (COD) Available
Pages -
Type -
ಇವತ್ತಿನ ದಿನ ಶಾಲೆಗಳಲ್ಲಿ ಕನ್ನಡ ವ್ಯಾಕರಣದ ನಿಯಮಗಳು ಎಂದು ಕಲಿಸಿಕೊಡಲಾಗುತ್ತಿರುವ ನಿಯಮಗಳು ನಿಜವಾದ ಕನ್ನಡ ವ್ಯಾಕರಣ ನಿಯಮಗಳಿಗಿಂತ ಬಹಳಷ್ಟು ಭಿನ್ನವಾಗಿವೆಯಾದ ಕಾರಣ ಕನ್ನಡ ಪದಗಳ ಮತ್ತು ವಾಕ್ಯಗಳ ರಚನೆಯನ್ನು ಸರಿಯಾಗಿ ವಿವರಿಸಲಾರವು. ನಿಜಕ್ಕೂ ಕನ್ನಡದ ವ್ಯಾಕರಣ ನಿಯಮಗಳು ಎಂತಹವು, ಕನ್ನಡ ವ್ಯಾಕರಣಗಳಲ್ಲಿ ಅದರಲ್ಲೂ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವ ವ್ಯಾಕರಣಗಳಲ್ಲಿ ಬರುವ ನಿಯಮಗಳಿಗಿಂತ ಅವು ಹೇಗೆ ಭಿನ್ನವಾಗಿವೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕನ್ನಡ ಭಾಷೆಯಲ್ಲಿ ಮತ್ತು ಅದರ ವ್ಯಾಕರಣದಲ್ಲಿ ಆಸಕ್ತಿಯಿರುವವರೆಲ್ಲ ಅವಶ್ಯವಾಗಿ ಓದಬೇಕಾದ ಪುಸ್ತಕವಿದು.
ಈ ಪುಸ್ತಕವನ್ನು ಬರೆದಿರುವ ಡಿ. ಎನ್. ಶಂಕರ ಭಟ್ ಅವರು ನೂರಾರು ಭಾಷೆಗಳ ವ್ಯಾಕರಣಗಳನ್ನು ಪರಿಶೀಲಿಸಿ, ಅವುಗಳ ನಡುವೆ ಯಾವ ರೀತಿಯಲ್ಲೆಲ್ಲ ವ್ಯತ್ಯಾಸಗಳು ಕಾಣಿಸಿಕೊಳ್ಳಬಲ್ಲುವು ಎಂಬುದನ್ನು ಕಂಡುಹಿಡಿಯುವುದಕ್ಕಾಗಿ ಅವರು ಸುಮಾರು ನಲವತ್ತು ವರ್ಷಗಳ ಸಂಶೋಧನೆ ಮಾಡಿದ್ದಾರೆ. ಈ ಸಂಶೋಧನೆಯ ಮೂಲಕ ತಾವು ಪಡೆದ ತಿಳುವಳಿಕೆಯನ್ನು ಅವರೀಗ ಕನ್ನಡ ವ್ಯಾಕರಣವನ್ನು ಅರಿಯುವ ಪ್ರಯತ್ನದಲ್ಲಿ ಬಳಸಿಕೊಳ್ಳುತ್ತಿದ್ದಾರೆ.
Share
ಇದೊಂದು ಕನ್ನಡ ನುಡಿ ತಿಳಿಮೆಯ ಮೇಲ್ಮಟ್ಟದ ಹೊತ್ತಿಗೆ.
ಕನ್ನಡದ ಸೊಲ್ಲರಿಮೆಯ ಆಳ ಅಗಲದ ಬಗ್ಗೆ ತುಂಬ ಸುಳುವಾಗಿ ಮಂದಿಗೆ ತಿಳಿಯುವಂತೆ ಈ ಹೊತ್ತಗೆಯಲ್ಲಿ ಹೇಳಿದ್ದಾರೆ ನಮ್ಮ ನಾಡೋಜ ಡಾ.ಡಿ.ಎನ್.ಶಂಕರಬಟ್ಟರು!!
ಎಲ್ಲ ನುಡಿಗಳಿಗೆ ತನ್ನದೇ ಸೊಲ್ಲರಿಮೆ (ವ್ಯಾಕರಣ) ಇರುತ್ತದೆ, ಅದು ಕನ್ನಡಕ್ಕು ಒಪ್ಪುವ ಮಾತು ಕೂಡ. ಅದನ್ನೇ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರ ಈ ಹೊತ್ತಗೆಯಲ್ಲಿ ಇಡಿಯಾಗಿ ನಮಗೆ ತಿಳಿಯುವ ಹಾಗೆ ತಿಳಿಸಿದ್ದಾರೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
Subscribe to our emails
Subscribe to our mailing list for insider news, product launches, and more.