Skip to product information
1 of 1

Maasti Venkatesha Iyyangar

ಕನ್ನಡದ ಸೇವೆ ತಾಯ್ನುಡಿಯ ತಮ್ಮಡಿ ಕನ್ನಡ ಲೆಂಕ

ಕನ್ನಡದ ಸೇವೆ ತಾಯ್ನುಡಿಯ ತಮ್ಮಡಿ ಕನ್ನಡ ಲೆಂಕ

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

೧೯೨೯ನೇ ಇಸವಿಯಲ್ಲಿ ಬೆಳಗಾಮ್ ನಗರದಲ್ಲಿ ನೆರೆದ ಶುಕ್ಲ ಸಂವತ್ಸರದ ಕರ್ನಾಟಕ ಸಾಹಿತ್ಯ ಸಮ್ಮೇಲನದ ಮುಂದೆ ನಾನು ಮಾಡಿದ ಆರಂಭ ಭಾಷಣವನ್ನು ಈ ಪುಸ್ತಕದ ರೂಪದಲ್ಲಿ ಅಚ್ಚು ಮಾಡಿಸಿದ್ದೇನೆ. ಆ ಸಮ್ಮೇಲನದ ಏರ್ಪಾಡಿನಲ್ಲಿ ಬೆಳಗಾಮಿನ ನಮ್ಮ ಪ್ರಮುಖ ಕರ್ಣಾಟಕರು ತೋರಿಸಿದ ಉತ್ಸಾಹ ಮಂತ್ರಶಕ್ತಿ ಕಾರ್ಯದಕ್ಷತೆಗಳನ್ನು ಇಷ್ಟೊಂದು ಹೇಳುವಂತಿಲ್ಲ. ಈ ವಿಚಾರದಲ್ಲಿ ಉತ್ತರ ಕರ್ಣಾಟಕವು ಕನ್ನಡ ನಾಡಿಗೇ ಆದರ್ಶವಾಗಿದೆ. ಸಮ್ಮೇಲನಗಳ ಸಮಯದಲ್ಲಿ ಕಾಣುವ ಈ ಉತ್ಸಾಹವು ನಮ್ಮ ಜನರಲ್ಲಿ ಎಷ್ಟು ಜೀವ ಕಳೆಯಿದೆಯೆಂಬುದನ್ನು ತೋರಿಸುತ್ತದೆ. ಇಂಥ ಉತ್ಸಾಹವನ್ನೂ ಶಕ್ತಿಯನ್ನೂ ಆರು ತಿಂಗಳಿಗೊಮ್ಮೆ ವರ್ಷಕ್ಕೊಮ್ಮೆ ತೋರಿಸಿ ಉಳಿದಾಗ ಸುಮ್ಮನೆ ಇರುವುದನ್ನು ಬಿಟ್ಟು ಸರ್ವದಾ ಕಾರ್ಯದಲ್ಲಿ ಪ್ರಕಾಶಗೊಳಿಸುತ್ತಿರುವುದೇ ಮುಂದುವರಿಯುವ ಜನದ ಲಕ್ಷಣ. ಈ ಬಗ್ಗೆ ನಾವು ಮಾಡಬೇಕಾಗಿರುವ ಕಾರಗಳು ಯಾವುವೆಂಬುದನ್ನು ನಾನು ಸಭೆಯ ಮುಂದೆ ಮಾಡಿದ ಭಾಷಣದಲ್ಲಿ ಸೂಚಿಸಲು ಯತ್ನಮಾಡಿದನು. ಇಂಥ ಭಾಷಣದಲ್ಲಿ ವಿಷಯ ಹೊಸದಾಗಿರಲಾರದು; ಈ ಭಾಷಣದಲ್ಲಿ ರೀತಿಯಾಗಲಿ ವಿಶೇಷವಾಗಿ ಸಾಹಿತ್ಯದ್ದೆಂದು ನಾನು ಹೇಳಲಾರೆನು; ಭಾಷಣವು ಲಂಬವೂ ಆಯಿತು. ನನ್ನ ಜ್ಞಾಪಕಕ್ಕಾಗಿ ಮಾಡಿಕೊಳ್ಳಬಹುದಾಗಿದ್ದ ಕರ್ತವ್ಯಗಳ ಪಟ್ಟಿಯೊಂದನ್ನು ದೇಶ ಸೇವಕರೂ ಭಾಷಾ ಸೇವಕರೂ ನೆರೆದ ಸಭೆಯ ಮುಂದೆ ಇರಿಸುವುದು ಉಚಿತವೆಂದು ನನಗೆ ತೋರಿದ್ದರಿಂದ ಭಾಷಣಕ್ಕೆ ಈ ರೂಪು ಬಂದಿತು. ಅದೇ ಪಟ್ಟಿಯನ್ನು ಈಗ ನಮ್ಮ ಜನರ ಮುಂದೆ ಇರಿಸಿದ್ದೇನೆ. ಇದನ್ನು ಓದುವುದರಲ್ಲಿ ಯಾರಿಗಾದರೂ ಬೇಸರ ತೋರುವುದಾದರೆ ಅಂಥವರು ಈ ಉದ್ದೇಶವನ್ನು ನೆನೆದು ನನ್ನನ್ನು ಮನ್ನಿಸಬೇಕಾಗಿ ಬೇಡುತ್ತೇನೆ.

-ಮಾಸ್ತಿ ವೆಂಕಟೇಶ ಅಯ್ಯಂಗಾರ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)