Girisha Mathera
Publisher -
Regular price
Rs. 100.00
Regular price
Rs. 100.00
Sale price
Rs. 100.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 100
Type - Paperback
Couldn't load pickup availability
ದೇಸಿ ಭಾಷೆಗಳ ಅದರಲ್ಲೂ ಕನ್ನಡ ಭಾಷೆಯ ಆಸ್ಥಿತ ಮತ್ತು ಸಾಂಸ್ಕೃತಿಕ ನೆಲೆ ಕುಸಿದ ಪಾತಾಳ ಮುಟ್ಟುತ್ತಿರುವ ಈ ಹೊತ್ತಿನಲ್ಲಿ ಭಾಷೆಯನ್ನು ಸಕಲ ಕ್ಷೇತ್ರಗಳಲ್ಲೂ ಸಜ್ಜುಗೊಳಿಸಲು ಅಧಿಕಾರ ರಾಜಕಾರಣ ಹೇಗೆ ಅಡ್ಡಗಾಲಾಗುತ್ತಿದೆ, ಅಧಿಕಾರಶಾಹಿ ಮತ್ತು ಆ ಭಾಷೆಯನ್ನಾಡುವ ಜನ ಹೇಗೆ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ. ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳ ಸಮ್ಮೋಹಕ ವ್ಯಸನ ಹೇಗೆ ದೇಸಿ ಸಂಸ್ಕೃತಿಯ ಸೌಧವನ್ನು ಬುಡಮೇಲು ಮಾಡುತ್ತಿದೆ ಎನ್ನುವುದನ್ನು ಇಲ್ಲಿನ ಲೇಖನಗಳು ಸಶಕ್ತವಾಗಿ ವಿವರಿಸುತ್ತವೆ. ಭಾಷೆಯ ಬಗೆಗಿನ ಕುರುಡು ವಿಸ್ತರಿಸಿ ಅದರ ಸರ್ವತೋಮುಖ ಬೆಳವಣಿಗೆ ಯಾವ ದಿಸೆಯಲ್ಲಾಗಬೇಕು ಎಂಬ ದಿಕ್ಕೂಚಿಯು ಅಲ್ಲಿನ ಬರಹಗಳ ಗುರುತ್ವವನ್ನು ಹೆಚ್ಚಿಸುವಂತಿದೆ. ಮಾಹಿತಿದಾಯಕ ಹಾಗೂ ಪೂರ್ಣದೆಡೆಗೆ ಸಾಗುವ ವಿಕಾಸಕ್ರಮದ ಹಂಬಲ, ವಿಷಯ ಸ್ಪಷ್ಟತೆ ಮತ್ತು ಪಾರದರ್ಶಕತೆ ಈ ಲೇಖನಗಳ ಮತ್ತೊಂದು ವೈಶಿಷ್ಟ್ಯ. ನುಡಿಯ ಬಗ್ಗೆ ನಿಜವಾದ ಕಾಳಜಿ ಮತ್ತು ಅಭಿಮಾನ ಇರುವವರು, ಆಡಳಿತಗಾರರು ಓದಲೇಬೇಕಾದ ಈ ಹೊತ್ತಿಗೆಯನ್ನು ಕನ್ನಡ ಲೋಕಕ್ಕೆ ನೀಡಿದ ಅರ್ಷೀತ ಮನೋಭಾವದ ತಿಳಿಮನಸ್ಸಿನ ಲೇಖಕ ಕ್ರಿಯಾಶೀಲರೂ ಆದ ಗಿರೀಶ್ ಮತ್ತೇರ ಅವರನ್ನು ನಾನು ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ.
-ಚಂದ್ರಶೇಖರ ತಾಳ್ಯ, ಸಾಹಿತಿಗಳು
-ಚಂದ್ರಶೇಖರ ತಾಳ್ಯ, ಸಾಹಿತಿಗಳು

