Dr. D. N. Shankara Batt
ಕನ್ನಡ ವ್ಯಾಕರಣ ಯಾಕೆ ಬೇಕು?
ಕನ್ನಡ ವ್ಯಾಕರಣ ಯಾಕೆ ಬೇಕು?
Publisher - ಡಿ. ಎನ್. ಶಂಕರ ಬಟ್
- Free Shipping Above ₹250
- Cash on Delivery (COD) Available
Pages -
Type -
ಕನ್ನಡ ವ್ಯಾಕರಣ (ಸೊಲ್ಲರಿಮೆ) ಎಂಬುದು ಯಾವ ಕೆಲಸಕ್ಕೂ ಬಾರದ ಕಗ್ಗಂಟಲ್ಲ; ಕನ್ನಡದಲ್ಲಿ ಓದಲು-ಬರೆಯಲು ಕಲಿಯುವುದು, ಇಂಗ್ಲಿಶ್ನಂತಹ ಬೇರೆ ನುಡಿಗಳನ್ನು ಕಲಿಯುವುದು, ಕನ್ನಡದಿಂದ ಬೇರೊಂದು ನುಡಿಗೆ ಇಲ್ಲವೇ ಬೇರೊಂದು ನುಡಿಯಿಂದ ಕನ್ನಡಕ್ಕೆ ನುಡಿಮಾರುವುದು (ಅನುವಾದಿಸುವುದು) ಮೊದಲಾದ ನುಡಿಗೆ ಸಂಬಂಧಿಸಿದಂತಹ ಹಲವಾರು ಕೆಲಸಗಳನ್ನು ನಡೆಸುವಲ್ಲಿ ಅದು ನೆರವನ್ನು ಕೊಡಬಲ್ಲುದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.
ಆದರೆ ಈ ರೀತಿ ನೆರವನ್ನು ಪಡೆಯಬೇಕಿದ್ದಲ್ಲಿ, ನಿಜವಾದ ಕನ್ನಡ ವ್ಯಾಕರಣ ಎಂತಹುದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇವತ್ತು ಬಳಕೆಯಲ್ಲಿರುವ ಕನ್ನಡ ವ್ಯಾಕರಣಗಳು ನಿಜವಾದ ಕನ್ನಡ ವ್ಯಾಕರಣಗಳಲ್ಲ; ಹಾಗಾಗಿ, ಅವು ಮೇಲಿನ ಕೆಲಸಗಳನ್ನು ನಡೆಸುವಲ್ಲಿ ಯಾವ ನೆರವನ್ನೂ ಕೊಡುವುದಿಲ್ಲ.
ಕನ್ನಡದ ನಿಜವಾದ ವ್ಯಾಕರಣ ಎಂತಹುದು ಎಂಬುದನ್ನು ತಿಳಿಯುವುದರೊಂದಿಗೆ, ಕನ್ನಡಕ್ಕೆ ಸಂಬಂಧಿಸಿದಂತಹ ಒಂದೊಂದು ಕೆಲಸಕ್ಕೂ ಆ ತಿಳಿವನ್ನು ಬಳಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅಂತಹ ತಿಳಿವನ್ನು ಕೊಡಬಲ್ಲ ಹಲವಾರು ಬಳಕೆಯ ವ್ಯಾಕರಣಗಳನ್ನೂ ಬರೆಯಬೇಕಾಗುತ್ತದೆ. ಇವತ್ತು ಕನ್ನಡದಲ್ಲಿ ಈ ಎರಡು ಬಗೆಯ ಕೆಲಸಗಳನ್ನೂ ನಡೆಸಬೇಕಾಗುತ್ತದೆ.
Share
ವ್ಯಾಕರಣ ಇಲ್ಲ ಸೊಲ್ಲರಿಮೆ ಪದ ಕೇಳಿದ ಕೂಡಲೇ ಅದು ನನಗೆ ತಿಳಿಯದು ಎಂದು ಅನ್ನಿಸುತ್ತದೆ. ಆದರೆ ಸೊಲರಿಮೆ ಅಂದರೆ ಒಂದು ನುಡಿಯ ಪದ, ಪದಕಂತೆ ಇಲ್ಲ ಸೊಲ್ಲುಗಳ ಇಟ್ಟಳ(ರಚನೆ) ತಿಳಿಸುವ ಒಂದು ಅರಿಮೆ. ಇದರ ತಿಳಿವಳಿಕೆಯಿಂದ ನಮ್ಮ ನುಡಿಗೆ ಏನೇನು ಒಳಿತಾಗುವುದೆಂದು ಈ ಹೊತ್ತಗೆಯಲ್ಲಿ ಸೊಗಸಾಗಿ ತಿಳಿಸಿದ್ದಾರೆ. ಕಲಿಕೆ ಇಂದ ಹಿಡಿದು ಬರವಣಿಗೆ ಅದರಲ್ಲಿ ಹಲವು ಬಗೆಯ ಬರಹಗಳು ಅಂದರೆ ನಲ್ಬರಹ(ಸಾಹಿತ್ಯ), ಅರಿಮೆ ಇಲ್ಲ ಕಟ್ಟಲೆ ಬರೆಯುವುದಕ್ಕೆ ಸೊಲ್ಲರಿಮೆ ತಿಳಿವಳಿಕೆ ಹೇಗೆ ನೆರವು ನೀಡುತ್ತಂದೆ ಈ ಹೊತ್ತಗೆಯಲ್ಲಿ ತಿಳಿಸಲಾಗಿದೆ. ಇದರ ಜೊತೆ ನುಡಿಮಾರಿಕೆ(ಅನುವಾದ) ಕೆಲಸಕ್ಕು ಸೊಲ್ಲರಿಮೆ ತಿಳಿವಳಿಕೆ ಹೇಗೆ ಬೇಕಾಗುತ್ತದೆಂದು ಕೂಡ ತಿಳಿದುಕೊಳ್ಳಬಹುದು. ಇವುಗಳ ಜೊತೆ ನುಡಿಹಮ್ಮುಗೆ(language planning) ಕುರಿತು ಒಂದು ಪಸುಗೆ ಕೂಡವಿದೆ. ಒಟ್ಟಿನಲ್ಲಿ ನಮ್ಮ ನುಡಿಯಲ್ಲಿ ಹೆಚ್ಚೆಚ್ಚು ತಿಳಿವಳಿಕೆ ಕಟ್ಟುವುದಕ್ಕೆ ಈ ಹೊತ್ತಗೆ ತುಂಬಾ ಬೇಕಾಗುತ್ತದೆಂದು ಹೇಳುವೆ.
Subscribe to our emails
Subscribe to our mailing list for insider news, product launches, and more.