Dr. D. N. Shankara Batt
ಕನ್ನಡ ನುಡಿ ನಡೆದು ಬಂದ ದಾರಿ
ಕನ್ನಡ ನುಡಿ ನಡೆದು ಬಂದ ದಾರಿ
Publisher - ಡಿ. ಎನ್. ಶಂಕರ ಬಟ್
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಮೂಲದ್ರಾವಿಡದಿಂದ ಇವತ್ತಿನ ಬರಹ ಕನ್ನಡದ ತನಕ ಮತ್ತು ಹಳೆಗನ್ನಡದಿಂದ ಇವತ್ತಿನ ಕನ್ನಡದ ಒಳನುಡಿ(ಆಡುನುಡಿ)ಗಳ ತನಕ ಕನ್ನಡ ನುಡಿಯಲ್ಲಿ ನಡೆದಿರುವ ಬದಲಾವಣೆಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಮೂಲತೆಂಕುದ್ರಾವಿಡದಿಂದ ಬೇರಾದ ಮೇಲೆ ಕರಾವಳಿ ಮತ್ತು ಒಳನಾಡುಗಳ ನಡುವೆ ನಡೆದ ಒಡೆತವೇ ಕನ್ನಡ ನುಡಿಯ ಮಟ್ಟಿಗೆ ಅತ್ಯಂತ ಹಳೆಯದಾದ ಮತ್ತು ಮುಖ್ಯವಾದ ಒಡೆತ ಎಂಬುದನ್ನೂ ಇಲ್ಲಿ ತೋರಿಸಿಕೊಡಲಾಗಿದೆ.
ಈ ಪುಸ್ತಕವನ್ನು ಬರೆದಿರುವ ಡಿ. ಎನ್. ಶಂಕರ ಭಟ್ ಅವರು ಕನ್ನಡ ನುಡಿಯ ಚರಿತ್ರೆಯ ಕುರಿತು ಇದಕ್ಕೂ ಮೊದಲೇ ಬರೆದಿದ್ದ ಒಂದು ಪುಸ್ತಕವನ್ನು (ಕನ್ನಡ ಭಾಷೆಯ ಕಲ್ಪಿತ ಚರಿತ್ರೆ) ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಆ ಪುಸ್ತಕವನ್ನು ಬಳಸಿ ಮತ್ತು ಹಲವಾರು ಹೊಸ ವಿಷಯಗಳನ್ನೂ ಸೇರಿಸಿ ಈ ಪುಸ್ತಕವನ್ನು ತಯಾರಿಸಲಾಗಿದೆ. ಕನ್ನಡ ನುಡಿ ಮತ್ತು ಮೂಲದ್ರಾವಿಡ ಕುರಿತಾಗಿ ಇತ್ತೀಚಿನವರೆಗೂ ನಡೆದಿರುವ ಸಂಶೋಧನೆಗಳನ್ನು ಈ ಪುಸ್ತಕವು ಒಳಗೊಂಡಿದೆ.
Share

ಕನ್ನಡ ನುಡಿಗೆ ತುಂಬಾ ದೊಡ್ಡ ಹಿನ್ನಡವಳಿ(ಚರಿತ್ರೆ) ಇದೆ. ಹಿಂದಿನಿಂದಲು ಇಲ್ಲಿಯ ತನಕ ಕನ್ನಡ ನುಡಿಯಲ್ಲಿ ನಡೆದ ಎಲ್ಲ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ತುಂಬಾ ಬೆಲೆಬಾಳುವ ಹೊತ್ತಗೆ ಎಂದು ಹೇಳಬಹುದು. ಕನ್ನಡದ ನೆನ್ನೆಗಳನ್ನು ತಿಳಿದುಕೊಳ್ಳುವುದಕ್ಕೆ ತುಂಬಾ ಒಳ್ಳೆ ಹೊತ್ತಗೆ ಮತ್ತು ಇದರ ಜೊತೆ ಈಗಿನ ಕನ್ನಡ ಹಲವು ಒಳನುಡಿಗಳಲ್ಲಿ ನಡೆದ ಮಾರ‍್ಪಾಟುಗಳ ಕುರಿತು ಕೂಡ ಹೊತ್ತಗೆ ತುಂಬಾ ಸೊಗಸಾಗಿ ತಿಳಿಸುತ್ತದೆ. ಒಟ್ಟಿನಲ್ಲಿ ಹೊತ್ತಗೆ ಹೆಸರು ಹೇಳಿದ ಹಾಗೆ ಕನ್ನಡದ ಹಿನ್ನಡವಳಿಯನ್ನು ತಿಳಿದುಕೊಳ್ಳಲು ಒಂದು ಸರಿಯಾದ ಹೊತ್ತಗೆ.
Subscribe to our emails
Subscribe to our mailing list for insider news, product launches, and more.