B. Padmanabha Somayaji
ಕನ್ನಡ ಕೋಗಿಲೆ ಮುದ್ದಣ
ಕನ್ನಡ ಕೋಗಿಲೆ ಮುದ್ದಣ
Publisher -
- Free Shipping Above ₹250
- Cash on Delivery (COD) Available
Pages - 190
Type - Paperback
ಮುದ್ದಣ ಕತ್ತುರಿಯಲ್ಲೆ!
'ಕನ್ನಡದ ನವೋದಯ ಮುಂಗೋಳಿ' ಎಂದು ಹೆಸರಾಗಿದ್ದ ಮುದ್ದಣ, ಕನ್ನಡಕ್ಕೆ ಹಲವು ಹೊಸ ನುಡಿಗಟ್ಟುಗಳನ್ನು ಕೊಟ್ಟವನು 'ಕನ್ನಡಂ ಕತ್ತುರಿಯಲ್ಲೆ' 'ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತಾಯ್ತು' 'ಭವತಿ ಭಿಕ್ಷಾಂದೇಹಿ ಎನ್ನುವ ಪಪ್ತಾಕ್ಷರಿ ಮಂತ್ರ 'ಪದ್ಯಂ ಪದ್ಮಂ ಗಧ್ವಂ ಹೃದ್ಯಂ' 'ನಾಡಿಗರೊಳೆಲ್ಲರುಂ ಭೋಗಿಗಳ ಕುಂಗಾಮಿಗಳಲ್ಲು' ಇತ್ಯಾದಿ ಹಾಗಾಗಿ ಅವನು 'ಮಹಾಕವಿ'ಯೆಂದೇ ಪ್ರಸಿದ್ಧನಾದ. ಬಾಲ್ಯದಲ್ಲಿ ಮುದ್ದು ಮುದ್ದಾಗಿ ಕಾಣುತ್ತಿದ್ದನಾದ್ದರಿಂದ 'ಮುದ್ದಣ' ಎಂದೇ ಅವನ ತಾಯಿ ಕರೆಯುತ್ತಿದ್ದರಂತೆ. ಹಾಗಾಗಿ ಅದನ್ನೇ ತನ್ನ ಕಾವ್ಯನಾಮವನ್ನಾಗಿ ಆರಿಸಿಕೊಂಡ. ಆತನ ಮೂಲ ಹೆಸರು ನಂದಳಿಕೆಯ ಲಕ್ಷ್ಮೀನಾರಣಪ್ಪ 'ಮುದ್ದಣ ಮನೋರಮ'ಯ ಸಲ್ಲಾಪವನ್ನು ಓದಿ ಅಸ್ವಾದಿಸದ ಕನ್ನಡಿಗನೇ ಇಲ್ಲವೆಂದರೆ ಅದು ಅತಿಶಯೋಕ್ತಿಯಾಗಲಾರದು. ಇದನ್ನು ಓದಿದ ನಮ್ಮ ಓದುಗರು ನಮಗೂ ಮನೋರಮೆಯಂತಹ ಮಡದಿ ಇರಬಾರದಿತ್ತೇ ಎಂದು ಒಂದು ಕ್ಷಣ ಯೋಚಿಸಬಹುದು ಆದರೆ ವಾಸ್ತವದಲ್ಲಿ ಮನೋರಮೆಯ ನಿಜವಾದ ಹೆಸರು ಕಮಲಾಬಾಯಿ, ಶಿವಮೊಗ್ಗದ ಕಾಗೇಗೋಡಮಗ್ಗಿಯವರು ಘಾಟಿ ಹೆಂಗಸು, ಗಂಡನ ಬಗ್ಗೆ ಅಂತಹ ಕಕ್ಕುಲಾತಿಯನ್ನು ತೋರದ ಸ್ಥ-ಕೇಂದ್ರಿತ ಹೆಣ್ಣುಮಗಳು ಮುದ್ದಣನು ಮೂರೂ ಹೊತ್ತು ಕಾವ್ಯ-ಸಾಹಿತ್ಯ ಯಕ್ಷಗಾನ ಸಂಶೋಧನಾ ಲೋಕದಲ್ಲಿ ಮುಳುಗಿದವನು. ಕಮಲಾಬಾಯಿ ಅಪ್ಪಟ ಇಹಲೋಕದವಳು. ಕಾಣದ ಕಲ್ಪನಾ ಲೋಕಕ್ಕಿಂತ, ಕಣ್ಣಿಗೆ ಕಾಣುವ ಐಹಿಕ ಲೋಕವೇ ಶ್ರೇಷ್ಠ ಎಂದು ಗಣಿಸಿದವಳು. ಹಾಗಾಗಿ ಈ ಇಪ್ಲೋಡು ವಿಷಮದಲ್ಲಿ ಕೊನೆಗೊಂಡುದರಲ್ಲಿ ಅಶ್ಚರ್ಯವಿಲ್ಲ. ಮುದ್ದಣನನ್ನು ಮೈ ಮೇಲೆ ಅವಾಹಿಸಿಕೊಂಡು, ಅಪಾರ ಅಧ್ಯಯನ ಚಿಂತನ ಮಂಥನಗಳನ್ನು ನಡೆಸಿ, ಈ ದುರಂತ ಕಥೆಯನ್ನು ನಮ್ಮ ಮುಂದೆ ಇಟ್ಟಿದ್ದಾರೆ. ವಿದ್ವಾನ್ ಬಂಟ್ವಾಳ ಪದ್ಮನಾಭ ಸೋಮಯಾಜಿಯವರು (1917- 1977), ಸಂಸ್ಕೃತ ಮತ್ತು ಕನ್ನಡದಲ್ಲಿ ವಿದ್ವತ್ ಪರೀಕ್ಷೆಯನ್ನು ಪೂರ್ಣಗೊಳಿಸಿ, ಸ್ವಯಂ ಮಹಾರಾಜರ ಕೈಯಿಂದ ಚಿನ್ನದ ಪದಕವನ್ನು ಪಡೆದರು. ಕನ್ನಡ ಕೋಗಿಲೆ ಮುದ್ದಣ ಬಹುಶಃ ಕರ್ಮವೀರದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು ಎಂದು ಕಾಣುತ್ತದೆ. ಮುದ್ದಣನ ಬಗ್ಗೆ ಬೆಳಕು ಚೆಲ್ಲುವ ಈ ಕೃತಿಯು ಈಗ ಮರುಮುದ್ರಣವನ್ನು ಕಂಡು ನಿಮ್ಮ ಕೈಯಲ್ಲಿದೆ. ಮುದ್ದಣನ್ನು ಓದುವ ಸುಖದ ಜೊತೆಗೆ ನಾಲ್ಕು ಹನಿಗಳು ನಿಮ್ಮ ಕಣ್ಣಿಂದ ಉದುರಿದರೆ ಕಾದಂಬರಿಕಾರರ ಶ್ರಮ ಸಾರ್ಥಕವಾಗುತ್ತದೆ.
-ಡಾ. ನಾ. ಸೋಮೇಶ್ವರ
Share
Subscribe to our emails
Subscribe to our mailing list for insider news, product launches, and more.