Skip to product information
1 of 2

Jee. Sham. Paramashivaiah

ಕನ್ನಡ ಜನಪದ ಕಥೆಗಳು

ಕನ್ನಡ ಜನಪದ ಕಥೆಗಳು

Publisher -

Regular price Rs. 240.00
Regular price Rs. 240.00 Sale price Rs. 240.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 317

Type - Paperback

ಅಪ್ಪಟ ಹಳ್ಳಿಯ ಮುಗ್ಧ ಕುಟುಂಬದಲ್ಲಿ ಬಡತನದ ಬವಣೆಯಲ್ಲಿ ಹುಟ್ಟಿದ ಜೀಶಂಪ ಆ ಗುಡಿಸಿಲಿನಿಂದ ಜಾನಪದ ಅಕಾಡೆಮಿಯ ಅಧ್ಯಕ್ಷಗಿರಿಗೇರಿದ್ದು ಒಂದು ರೋಚಕ ಇತಿಹಾಸ... ಸ್ವಪ್ರಯತ್ನದಿಂದ ದಣಿವರಿಯದ ದುಡಿಮೆಯಿಂದ, ಕೊನೆಗಾಣದ ಕುತೂಹಲದಿಂದ, ಅಂತ್ಯವಿಲ್ಲದ ಆಸಕ್ತಿಯಿಂದ ಈ ಸಾಮಾನ್ಯ ಹುಡುಗ ಪ್ರಾಥಮಿಕ ಶಾಲಾ ಉಪಾಧ್ಯಾಯಗಿರಿಯಿಂದ ತೊಡಗಿ ಗುಮಾಸ್ತನಾಗಿ ಸಣ್ಣಪುಟ್ಟ ಕೆಲಸಗಳನ್ನು ಹೊಟ್ಟೆಪಾಡಿಗಾಗಿ ನಿರ್ವಹಿಸಿ ಬವಣೆಯ ಬುತ್ತಿಯನ್ನುಂಡು ತನ್ನ ಧೀಶಕ್ತಿಯನ್ನು ಸೃಜನಶೀಲ ಸಾಮರ್ಥ್ಯವನ್ನು ಪೋಷಿಸಿಕೊಂಡು ಏರಿದ ಹುದ್ದೆಗಳು ಹಲವು, ಮಾಡಿದ ಕೆಲಸಗಳು ನೂರಾರು, ಗಳಿಸಿದ ಸ್ನೇಹಿತರು ಸಾವಿರಾರು. ತೊಟ್ಟಿಲಲ್ಲಿ ಇದ್ದಾಗಲೇ ಹಳ್ಳಿಯ ಹಾಡನ್ನು ಕಿವಿಯ ಮೂಲಕ ಹೃದಯದಲ್ಲಿ ಧಾರಣೆ ಮಾಡಿಕೊಂಡ ಈ ವ್ಯಕ್ತಿ ಆನಂತರದ ದಿನಗಳಲ್ಲಿ ಈ ಜನಪದ ಸಂಸ್ಕೃತಿಯ ವಿರಾಟ್ ಸ್ವರೂಪವನ್ನು ಅರಸುತ್ತ, ಅರಗಿಸಿಕೊಳ್ಳುತ್ತ, ಆರಳಿಸುತ್ತಾ ಸುತ್ತಮುತ್ತ ಪರಿಮಳಿಸುತ್ತ ನಡೆದು ಜಾನಪದ ಜಗತ್ತಿನಲ್ಲಿ ಒಂದು ದಂತಕತೆಯ ನಾಯಕನ ಮಟ್ಟಕ್ಕೆ ಬೆಳೆದರು. ಇವರಿಲ್ಲದಿದ್ದರೆ ಈ ಕರ್ನಾಟಕ ಜಾನಪದ ಕ್ಷೇತ್ರ ಹೇಗಿರುತ್ತಿತ್ತು ಎಂಬುದನ್ನು ಊಹಿಸಿಕೊಳ್ಳುವುದು ಕೂಡ ಕಷ್ಟದ ಮಾತು.

-ಪ್ರೊ. ಎಚ್‌. ಜೆ. ಲಕ್ಕಪ್ಪಗೌಡ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)