1
/
of
2
K. Shreenath
ಕನಸು ಸೊಗಸು
ಕನಸು ಸೊಗಸು
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 450.00
Regular price
Rs. 450.00
Sale price
Rs. 450.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 394
Type - Paperback
Couldn't load pickup availability
ಕನಸುಗಳನ್ನು ಶೃಂಗರಿಸುವ ಜರೂರನ್ನು ಕಾಪಾಡಿಕೊಳ್ಳುವುದು. ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆಯನ್ನು ಮುಟ್ಟಲು ಕಾದಂಬರಿ ಮೇರೆ ಮೀರಿ ಪ್ರಯತ್ನಿಸಿದೆ ಮತ್ತು ಆ ಮೂಲಕ ಸರ್ವಾಂಗೀಣ ಬೆಳವಣಿಗೆ ಸಾಧ್ಯತೆಯನ್ನು ಸಾರಲು ಪರಿಕ್ರಮಿಸಿದೆ. ಎಲ್ಲಾ ತಾರತಮ್ಯವನ್ನು ತಿರಸ್ಕರಿಸಿ ಸಾಮಾಜಿಕ ಕಳಕಳಿಯ ಅಂಶವನ್ನು ಎತ್ತಿಹಿಡಿಯುವ ಮಾರ್ಗದಲ್ಲಿ ಸಾಗಿದೆ. ಲೇಖಕರೊಬ್ಬರ ಲೇಖನಿಯಲ್ಲಿ ಎಲ್ಲವೂ ಶುಭಂ ಆಗುವ ಸಂಭವವಿರುವುದರಿಂದ, ಕಾದಂಬರಿಯೂ ಸಹ ಆತಂಕ, ತಲ್ಲಣಗಳನ್ನು ಹೊತ್ತು ಕೊಂಡೇ, ಆದಷ್ಟೂ ಬದುಕಿನ ಸಹಜತೆಯನ್ನು ಕಾಯ್ದುಕೊಳ್ಳಲು ಯತ್ನಿಸಿದೆ. ಕಥೆಯಲ್ಲಿ ಹೆಚ್ಚು ಕಡಿಮೆ ಎಲ್ಲಾ ಪಾತ್ರಗಳಿಗೂ ಅವಕಾಶವಿದೆ. ಅಧ್ಯಾಯದ ಉಪಕತೆಗಳಲ್ಲಿ ಕನೆಕ್ಟಿವಿಟಿ ಇದೆ.
ಒಟ್ಟು ಮುನ್ನೂರಕ್ಕೂ ಹೆಚ್ಚು ಪುಟಗಳ ಕಾದಂಬರಿ ಮೂವತ್ತು ಅಧ್ಯಾಯಗಳನ್ನು ಒಳಗೊಂಡಿದೆ. ಸಾದಾಸೀದವಾಗಿ ಯಾವುದೇ ಭಾರವಿಲ್ಲದೇ ಸರಳವಾಗಿ ಓದಿಸಿಕೊಳ್ಳುತ್ತದೆ. ಉದ್ವಿಗ್ನತೆ, ಒತ್ತಡದ ಸನ್ನಿವೇಶಗಳನ್ನು ಬರೆಯುವಾಗ ತೀರಾ ಒದ್ದಾಡದೆ, ನಿರುದ್ವಿಗ್ನವಾಗಿ ನಿರೂಪಿಸುತ್ತಾ ನೇರ ಮಾರ್ಗಕ್ಕೆ ತಂದು ಬಿಡುತ್ತಾರೆ. ಶೃಂಗಾರದ ಸಮಯ ತೀರಾ ಕಡಿಮೆಯಿವೆ. ಧಾರಾವಾಹಿಗಳಂತೆ ಅಸಹಜತೆಗಳಿಲ್ಲದೆ, ಕೃತಕ ಅಲಂಕಾರಗಳಿಲ್ಲದೆ, ನಿರಾಡಂಬರವಾಗಿ ವಿನ್ಯಾಸಿಸಿದ್ದಾರೆ. ಒಂದು ಸಿನೆಮಾವನ್ನು ಕುಟುಂಬ ಸಮೇತವಾಗಿ ನೋಡಬಹುದು ಅನ್ನುತ್ತಾರಲ್ಲ ಹಾಗೆ ಕನಸು ಸೊಗಸು ಎಲ್ಲಾ ವರ್ಗದ, ವಯೋಮಾನದ ಮಂದಿಯೂ ಓದಬಹುದಾದ ವಸ್ತು ವಿಷಯ ಹೊಂದಿದೆ. ಶ್ರೀನಾಥರಿಗೆ ಒಳಿತಾಗಲಿ, ಅವರು ಹಲವಾರು ಪ್ರಕಾರಗಳಲ್ಲಿ ಬರೆಯುವಂತಾಗಲಿ. ಈ ಕಾದಂಬರಿಯ ಸೊಗಡು ಸಾಹಿತ್ಯಕವಾಗಿ ಸಾಕಷ್ಟು ಹರಡಲಿ ಎಂಬ ಸದಾಶಯದೊಡನೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
- ಮಮತ ಅರಸೀಕೆರೆ (ಮುನ್ನುಡಿಯಿಂದ)

Share

Subscribe to our emails
Subscribe to our mailing list for insider news, product launches, and more.