Skip to product information
1 of 1

S. Rudramurthy Shastry

ಕನಕದಾಸ

ಕನಕದಾಸ

Publisher - ಐಬಿಹೆಚ್ ಪ್ರಕಾಶನ

Regular price Rs. 400.00
Regular price Rs. 400.00 Sale price Rs. 400.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಶ್ರೀ ಸು. ರುದ್ರಮೂರ್ತಿ ಶಾಸ್ತ್ರಿಗಳು ಕನ್ನಡ ನಾಡು ಕಂಡ ಅಪರೂಪದ ಸೃಜನಶೀಲ ಬರಹಗಾರರು. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಾಸ್ತ್ರಿಗಳು, ಈಗಾಗಲೇ ರಚಿಸಿರುವ ಅಶೋಕ, ಔರಂಗಜೇಬ, ಚಾಣಕ್ಯ, ಕುಮಾರರಾಮ ಇವೇ ಮೊದಲಾದ ಐತಿಹಾಸಿಕ ಕೃತಿಗಳು ಫಿಕ್ಷನ್‌ಗಳಾದರೂ, ನಾಡಿನ ಚರಿತ್ರೆಯನ್ನು ಹೊಸದಾಗಿ ನಿರ್ವಚಿಸಿಕೊಳ್ಳುವಲ್ಲಿ ಪೂರಕ ನೆರವು ನೀಡುತ್ತವೆ. ಸದ್ಯ 'ಕನಕದಾಸ' ಕೃತಿಯು ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಮೌಲಿಕ ಸೇರ್ಪಡೆ.

ನೆಲಮೂಲ ಸಂಸ್ಕೃತಿಯಿಂದ ಬಂದ ತಿಮ್ಮಪ್ಪ ಕುರುಬತ್ವವನ್ನು ಮೀರಿ ಕನಕನಾಗಿ, ದಾಸಕೂಟ ಪರಂಪರೆಯಲ್ಲಿ ಎತ್ತರಕ್ಕೆ ಬೆಳೆದು, ಕೊನೆಗೆ ದಾಸತ್ವವನ್ನೂ ಮೀರಿ ಸಾಂಸ್ಕೃತಿಕ ನಾಯಕನಾಗಿ ರೂಪುಗೊಂಡದ್ದು ಕನ್ನಡ ಸಾಂಸ್ಕೃತಿಕ ಇತಿಹಾಸದಲ್ಲಿ ಸೋಜಿಗದ ಕಥನವೇ ಸರಿ. ಈ ಕಥನವನ್ನು ಶಾಸ್ತ್ರಿಗಳು ಅತ್ಯಂತ ಸಂಯಮದಿಂದ, ಎಚ್ಚರದಿಂದ, ಸೂಕ್ಷ್ಮಾತಿಸೂಕ್ಷ್ಮ ಹೊಳಹುಗಳಿಂದ ಕಾದಂಬರಿಯಲ್ಲಿ ಕಟ್ಟಿಕೊಡುವ ಕೌಶಲ್ಯ ಅನನ್ಯವಾದುದು. ಭಕ್ತಕವಿ ಎನಿಸಿಕೊಂಡರೂ ಕೃಷ್ಣಾರಾಧನೆಯ ಜತೆಜತೆಗೆ ಸಮಾಜಮುಖ ಚಿಂತನೆಯನ್ನು ರೂಢಿಸಿಕೊಂಡು, ಶೈಕ್ಷಣಿಕ ಸಾಮಾಜಿಕ ವ್ಯವಸ್ಥೆಯ ಚಲನೆಯ ಪ್ರಕ್ರಿಯೆಯಲ್ಲಿ, ರಾಗಿ ರಾಮಾಯಣವನ್ನು ಬರೆಯುವುದರ ಮುಖಾಂತರ ಕನ್ನಡ ಸಾಹಿತ್ಯದ ಶ್ರೇಷ್ಠತೆಯ ಪೊಳ್ಳುತನವನ್ನು ಸ್ಫೋಟಿಸಿದ ಬಂಡಾಯ ಬರಹಗಾರ ಕನಕ.

ಶಾಸ್ತ್ರಿಗಳಿಗೆ ಗದ್ಯ ಸಿದ್ಧಿಸಿದೆ. ಅವರ ಬರವಣಿಗೆಯು ಸರಾಗವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. ಅನುಭವ ಮತ್ತು ಅನುಭಾವಗಳೆರಡನ್ನು ಹದವಾಗಿ ಮೇಲೈಸುವ ಪರಿ ಅವರದು. ಬರವಣಿಗೆಯನ್ನು ವೃತ್ತಿಯನ್ನಾಗಿಸಿಕೊಂಡು ಬದುಕಿದ ಅ.ನ.ಕೃ., ತ.ರಾ.ಸು. ಪರಂಪರೆಗೆ ಸೇರಿದ ಶಾಸ್ತ್ರಿಗಳಿಂದ 'ಕನಕದಾಸರಂತಹ ಮತ್ತಷ್ಟು ಮೌಲಿಕ ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಲಭಿಸುವಂತಾಗಲೆಂಬ ಆಶಯ ನನ್ನದು.

- ಡಾ. ಚಕ್ಕೆರೆ ಶಿವಶಂಕರ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)