Skip to product information
1 of 1

Dr. K. N. Ganeshaiah

ಕನಕ ಮುಸುಕು

ಕನಕ ಮುಸುಕು

Publisher - ಅಂಕಿತ ಪುಸ್ತಕ

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

'ಕನಕ ಮುಸುಕು' ಕನ್ನಡದ ಮಟ್ಟಿಗೆ ಹೊಸದೊಂದು ಮೈಲುಗಲ್ಲು ಎನ್ನುವಂತೆ ಈ ಕಾದಂಬರಿಯಲ್ಲಿ ಅನೇಕ 'ಹೊಸತು'ಗಳಿವೆ. ಮೊದಲನೆಯದಾಗಿ ಗ್ರಂಥಕರೇ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸಬರು. ಇನ್ನೂ ವಿಶೇಷವೆಂದರೆ ಇವರು ಕಾರ್ಯನಿರತ ವಿಜ್ಜಾನಿ. ವಾರಕ್ಕೆ ಏಳು ದಿನ ಸಾಲದೆಂಬಂತೆ ಮೈತುಂಬ ಕೆಲಸ ಕಾರ್ಯಗಳನ್ನು ಪೇರಿಸಿಕೊಂಡು ಕ್ಷೇತ್ರ ಸಂಶೋಧನೆ, ಪ್ರಬಂಧ ರಚನೆ, ವಿಶೇಷ ಉಪನ್ಯಾಸ, 'ಏಟ್ರಿ' ಯಂತ ಜನಪರ ಸಂಘಟನೆಯ ಕೆಲಸ, ಅನೇಕ ಸಂಘ ಸಂಸ್ಥೆಗಳಿಗೆ ಸಲಹಾಕಾರ್ಯ ಇವೆಲ್ಲವುಗಳ ಮಧ್ಯೆ ಕನ್ನಡದಲ್ಲಿ ಕಥೆ, ಕಾದಂಬರಿ ರಚನೆಯತ್ತಲೂ ಗಮನ ಕೊಡುವ ವಿಜ್ಞಾನಿ ಎಂಬುದೇ ಅಚ್ಚರಿಯ ಸಂಗತಿ. 

ಸೆಟಲೈಟ್ ಚಾನೆಲ್, ಸೆಲ್‌ಫೋನ್, ಈ-ಮೇಲ್, ನೆಟ್ ಚಾಟ್‌ಗಳ ಈ ಯುಗದಲ್ಲಿ ಕಾದಂಬರಿಯ ನಾಯಕಿಯ ಅಂಥದ್ದೇ ಹೈಟೆಕ್‌ ಸಂಪರ್ಕ ತಂತ್ರಗಳನ್ನು ಬಳಸಿ, ಚೂಟಿಯಾಗಿ ಗ್ಲೋಬ್ ಟ್ರಾಟಿಂಗ್ ಮಾಡುತ್ತ ಭೂತ-ಭವಿಷ್ಯಗಳನ್ನು ಬೆಸೆಯುವ ಹರಿಕಾರ್ತಿಯಾಗಿರುವುದು ಇಂಗ್ಲೀಷ್ ಕಾದಂಬರಿಗಳನ್ನು ಮಡಿಲಲ್ಲಿಟ್ಟುಕೊಂಡೇ ಬೆಳೆಯುವ ಹೊಸ ಕನ್ನಡ ಪೀಳಿಗೆಗೂ ಆಕರ್ಷಕವೆನಿಸುತ್ತದೆ. ನಮ್ಮ ಭಾಷೆಯಲ್ಲೂ ಇಂಥದೊಂದು ಕೃತಿ ಸಾಧ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ಅದನ್ನು ಸಮಕಾಲೀನ ವಿಜ್ಞಾನಿ ಡಾ. ಕೆ.ಎನ್. ಗಣೇಶಯ್ಯ ತೋರಿಸಿಕೊಟ್ಟಿದ್ದಾರೆ. ಮಸುಕಾಗುತ್ತಿರುವ ಕಾದಂಬರಿ ಲೋಕದತ್ತ ಓದುಗರು ಮತ್ತೆ ದೃಷ್ಟಿ ಹಾಯಿಸುವಂತೆ ಹೊಸ ದೀವಿಗೆ ಹಚ್ಚಿದ್ದಾರೆ.

-ನಾಗೇಶ ಹೆಗಡೆ

View full details