Skip to product information
1 of 1

Dr. Gajanana Sharma

ಕೈಲಾಸ ಮಾನಸ

ಕೈಲಾಸ ಮಾನಸ

Publisher - ಅಂಕಿತ ಪುಸ್ತಕ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಡಾ| ಗಜಾನನ ಶರ್ಮ ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ನಟ-ನಾಟಕಕಾರ-ನಿರ್ದೇಶಕ, ಅವರ ಹಲವಾರು ಮಕ್ಕಳ ನಾಟಕಗಳು ಪ್ರಕಟವಾಗಿದೆ. ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಇವರಿಗೆ ಅಪಾರ ಗೌರವ, ಅವರ ಜೀವನ ಚರಿತ್ರೆಯನ್ನು 'ನನ್ನ ವೃತ್ತಿ ಜೀವನದ ನೆನಪುಗಳು' ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಶರ್ಮರ ಮತ್ತೊಂದು ಹವ್ಯಾಸ ಚಾರಣ. ಈಗ ಕೈಲಾಸ ಮಾನಸಕ್ಕೆ ಕಿಂಚಿತ್ತೂ ಆಯಾಸಪಟ್ಟುಕೊಳ್ಳದೆ ಭೇಟಿ ನೀಡಿ ಬಂದಿದ್ದಾರೆ. ತಮ್ಮ ಅನುಭವವನ್ನು ಈ ಕೃತಿಯ ಮೂಲಕ ಹಂಚಿಕೊಂಡಿದ್ದಾರೆ.

ಇದು ಕೇವಲ ಪ್ರವಾಸ ಕಥನವಾಗಿಲ್ಲ. ಜೊತೆಗೆ ಸ್ಥಳೀಯ ಐತಿಹ್ಯ-ಪುರಾಣಗಳನ್ನು ಪರಿಚಯಿಸುತ್ತಾ ಓದುಗರಿಗೆ ಒಂದಿಷ್ಟೂ ಬೇಸರ-ಆಯಾಸವಾಗದಂತೆ ಹಿಮಾಲಯ-ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳ ಪರಿಚಯ ಮಾಡಿಕೊಡುತ್ತಾರೆ.

ಶರ್ಮರ ಎದುರಿಗೆ ಹಿಮಾಲಯದ ಸುದ್ದಿ ಎತ್ತಿದರೆ 'ಆ ಪ್ರಪಂಚವೇ ಬೇರೆ, ಅದು ದೇವಲೋಕವೇ ಸರಿ. ಬೇಕೆಂದರೆ ನಮ್ಮ ಅನುಕೂಲಕ್ಕೆ ದೇವ ಭೂಮಿಯೆಂದರೂ ಆದೀತು. ಆ ತಣ್ಣನೆಯ ಮೌನ...ಬೆಳ್ಳನೆಯ ಹಿಮ..ಆಹಾ' ಎನ್ನುತ್ತಾ ತಮ್ಮದೇ ಭಾವ ಪ್ರಪಂಚಕ್ಕಿಳಿದು ಬಿಡುತ್ತಾರೆ.

ನೀವೊಮ್ಮೆ ಈ ಕೃತಿ ಓದಿ ನೋಡಿ, ಖಂಡಿತ ಹಿಮಾಲಯವನ್ನೇರುವ ಸ್ಪೂರ್ತಿ ಬರದಿದ್ದರೆ ಕೇಳಿ.

- ಪ್ರಕಾಶ್ ಕಂಬತ್ತಳ್ಳಿ
View full details