Krishnamurthy Hanuru
ಕಾಲು ದಾರಿಯ ಕಥನಗಳು
ಕಾಲು ದಾರಿಯ ಕಥನಗಳು
Publisher -
Regular price
Rs. 260.00
Regular price
Rs. 100.00
Sale price
Rs. 260.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕಾಲು ದಾರಿಯ ಕಥನಗಳು
ಕೃಷ್ಣಮೂರ್ತಿಹರು ಅವರು ಕತೆಗಾರ, ಕಾದಂಬರಿಕಾರರೆಂದು ಸೃಜನಶೀಲ ನೆಲೆಯಲ್ಲಿಯೂ, ಜಾನಪದ ಸಂಗ್ರಹಕಾರ-ಸಂಶೋಧಕರೆಂದು ವಿದ್ವತ್ತಿನ ನೆಲೆಯಲ್ಲಿಯೂ ದೊಡ್ಡ ಹೆಸರು ಮಾಡಿರುವ ಅಪರೂಪದ ಲೇಖಕರು, ಕುತೂಹಲದ ಸಂಗತಿಯೆಂದರೆ, ಈ ಎರಡೂ ನೆಲೆಗಳು ಅವರ ಬರವಣಿಗೆಯಲ್ಲಿ ಪರಸ್ಪರ ಪ್ರಭಾವ ಬೀರಿರುವುದು, ಅವರ ಸೃಜನಶೀಲ ಬರವಣಿಗೆ ಜಾನಪದದಿಂದ ಸಾಕಷ್ಟು ಪ್ರೇರಣೆ ಪಡೆದಿದೆ; ಹಾಗೆಯೇ ಅವರ ಜಾನಪದ ಕೆಲಸ ಸೃಜನಶೀಲತೆಯ ಸ್ಪರ್ಶ ಪಡೆದುಕೊಂಡಿದೆ. ಈಗ ಪ್ರಕಟವಾಗುತ್ತಿರುವ 'ಕಾಲು ದಾರಿಯ ಕಥನಗಳು' ಜಾನಪದ ಸಂಶೋಧನೆಯಲ್ಲಿ ಅವರು ವ್ಯಾಪಕವಾಗಿ ನಡೆಸಿದ ಕ್ಷೇತ್ರಕಾರ್ಯದ ಅನುಭವಗಳನ್ನು ನಿರೂಪಿಸುವ ವಿಶಿಷ್ಟವಾದ ಕೃತಿ, ಹನೂರು ಜಾನಪದ ಕ್ಷೇತ್ರವನ್ನು ಪ್ರವೇಶಿಸಿದ್ದೇ ಆಕಸ್ಮಿಕವಾಗಿ ಚಳ್ಳಕೆರೆಯಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾಗ ಸುತ್ತಲಿನ ಪ್ರದೇಶಗಳಲ್ಲಿ ಹರಡಿಕೊಂಡಿದ್ದ ಜನಪದ ಸಾಹಿತ್ಯದತ್ತ ಅವರ ಗಮನ ಹೋಯಿತು. ಒಂದು ಸಲ ಅದರ ಸೆಳವಿಗೆ ಸಿಲುಕಿದ ಮೇಲೆ ಜಾನಪದವ ಅವರ ಪೂರ್ಣಕಾಲಿಕ ಅಧ್ಯಯನ ವಿಷಯವಾಯಿತು. ಹನೂರು ಕೇವಲ ಜನಪದ ಕತೆ ಹಾಡುಗಳ ಸಂಗ್ರಹದಿಂದಷ್ಟೇ ತೃಪ್ತರಾಗಲಿಲ್ಲ. ಆ ಸಾಹಿತ್ಯದ ಹಿಂದಿನ ಪ್ರೇರಣೆಯಾಗಿದ್ದ ಬುಡಕಟ್ಟು ಜನಾಂಗಗಳ ಸಂಸ್ಕೃತಿಯ ಅಧ್ಯಯನದಲ್ಲೂ ಆಸಕ್ತಿ ವಹಿಸಿದ್ದರಿಂದ ಅದು ಮಾನವಶಾಸ್ತ್ರೀಯ ಅಧ್ಯಯನದ ಆಯಾಮವನ್ನೂ ಪಡೆದುಕೊಂಡಿತು. ಹಾಗೆ ಈ ಕೃತಿ ಒಬ್ಬ ಪ್ರಜ್ಞಾವಂತ, ಪ್ರಬುದ್ಧ ವಿದ್ವಾಂಸನ ವೈಜ್ಞಾನಿಕ ವಿಶ್ಲೇಷಣೆಯೂ ಆಗಿದೆ. ಕ್ಷೇತ್ರಕಾರ್ಯ ಸುಲಭದ ಕೆಲಸವಲ್ಲ. ಅದಕ್ಕಾಗಿ ಅವರು ಭೇಟಿಯಾದ ವ್ಯಕ್ತಿಗಳು, ಅವರ ಮನವೊಲಿಸಿ ಹಾಡಲು ಅಥವಾ ಕಥೆ ಹೇಳಲು ಹಚ್ಚುವುದು, ಅವರಿಂದ ವಿವರಗಳನ್ನು ಪಡೆಯುವುದು, ಹಾಗೆ ಕೇಳಿದ್ದನ್ನು ಬರೆದು ಪ್ರಕಟಿಸುವುದು ಇವೆಲ್ಲ ಸರಿಯೆ, ಅದರ ಜೊತೆಗೆ ಹನೂರು ಪಟ್ಟಪಾಡು, ಎದುರಿಸಿದ ಅಪಾಯಗಳು ಯಾರನ್ನಾದರೂ ದಂಗುಬಡಿಸುವಂತಿವೆ. ಪ್ರಸಂಗವಂತೂ ಅದ್ಭುತವಾಗಿದೆ. ತನ್ನ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಇರುವ ವ್ಯಕ್ತಿ ಮಾತ್ರ ಇಂಥದ್ದನ್ನು ಮಾಡಬಲ್ಲ. ಇದನ್ನೆಲ್ಲ ನಿರೂಪಿಸುವ ತಣ್ಣನೆಯ ಶೈಲಿ ಅವರ ಸೃಜನಶೀಲ ಬರವಣಿಗೆಯ ಶಕ್ತಿಯಿಂದ ಬಂದದ್ದು ಹೀಗಾಗಿ ಇದೊಂದು ಅಪರೂಪದ ಕೃತಿಯಾಗಿದೆ. ಜಾನಪದ ವಿದ್ವಾಂಸರಷ್ಟೇ ಅಲ್ಲ, ಎಲ್ಲ ಓದುಗರಿಗೂ ಇದು ಮೆಚ್ಚುಗೆಯಾಗಬಲ್ಲದು. ಕ್ಷೇತ್ರ ಅನುಭವಗಳನ್ನು ನಿರೂಪಿಸುವ ಕೃತಿಗಳು ಕನ್ನಡದಲ್ಲಿ ವಿರಳ. ಹನೂರರ ಈ ಕೃತಿ ಆ ಕೊರತೆಯನ್ನು ಸಮೃದ್ಧವಾಗಿ ತುಂಬಿಕೊಟ್ಟಿದೆ.
ಗಿರಡ್ಡಿ ಗೋವಿಂದರಾಜ

Share
Subscribe to our emails
Subscribe to our mailing list for insider news, product launches, and more.