Skip to product information
1 of 1

Na. D’Souza

ಕಾಡಿನ ಬೆಂಕಿ

ಕಾಡಿನ ಬೆಂಕಿ

Publisher - ರವೀಂದ್ರ ಪುಸ್ತಕಾಲಯ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಪ್ರೇಮ ಮತ್ತು ಕಾಮ ಒಂದೇ ನಾಣ್ಯದ ಎರಡು ಮುಖಗಳು' ಎಂಬುದು ನಮ್ಮ ಮನೋವ್ಯಾವಾರದ ಅತಿಸರಳ ವಿಶ್ಲೇಷಣೆ, ಸುತ್ತು ಮುತ್ತಲಿರುವ ಹುಚ್ಚರ ಮನೋವಿಕಾರಕ್ಕೆ ಕಾರಣಗಳನ್ನ ಹುಡುಕುತ್ತಾ ಹೋದರೆ ಇದು ಅವರ ಪ್ರೇಮ ಕಾಮಗಳ, ಲೈಂಗಿಕತೆಯ ಸುತ್ತ ಹೆಣೆದಿರುಯುವುದನ್ನು ಕಾಣುತ್ತೇವೆ. ಹಳ್ಳಿಯಿರಲಿ ದಿಲ್ಲಿಯಿರಲಿ, ಬಡವರಿರಲಿ ಶ್ರೀಮಂತರಾಗಲಿ ಸಮಸ್ಯೆ ಎಲ್ಲ‌ರದೂ ಒಂದೇ. ನಮ್ಮ ಲೈಂಗಿಕ ಅಜ್ಜಾನವೇ ಕಾರಣ ಎಂಬುದು ಸುಸ್ಪಷ್ಟ. ಇದು ನಾಚಿಕೆಯ, ಅವರಿವರಲ್ಲಿ ಮಾತನಾಡಬಾರದ ವಿಷಯ.

ರಘುರಾಮನ ಸಮಸ್ಯೆಗೆ ಕಾರಣವೇನು ಎಂಬುದನ್ನು ಕಂಡು ಹಿಡಿಯುತ್ತಿದ್ದರೆ ಯಶೋದೆಯ ಬಾಳು ಹೀಗಾಗುತ್ತಿರಲಿಲ್ಲ. ರಘುರಾಮನ ಸಮಸ್ಯೆ ಗುಣಪಡಿಸಲಾರದ್ದೇನಲ್ಲ, ಮನೋವಿಜ್ಞಾನದಲ್ಲ ಅದಕ್ಕೆ ಮದ್ದು ಇದೆ.

ರಘುರಾಮ-ಯಶೋದೆಯರಂತಹ ದುರದೃಷ್ಟ ದಂಪತಿಗಳು ನಮ್ಮ ದೇಶದಲ್ಲಿ ಇನ್ನಷ್ಟು ಮಂದಿ ಇದ್ದಾರೆಯೋ? ಅಂತಹವರಿಗೆ "ಕಾಡಿನ ಬೆಂಕಿ" ಒಂದು ದಾರಿಯನ್ನು ತೋರಿಸುವಲ್ಲಿ ಸಫಲವಾಗಿದೆ ಎಂದು ನಂಬಿದ್ದೇನೆ.

“ಕಾಡಿನ ಬೆಂಕಿ'ಯನ್ನು ನಮ್ಮ ಓದುಗರು ತುಂಬಾ ಮೆಚ್ಚಿಕೊಂಡಿದ್ದಾರೆ. ಕಥಾನಕವನ್ನು ಸೂಕ್ಷ್ಮವಾಗಿ ನವಿರಾಗಿ ಎಲ್ಲಿಯೂ ಬಿಚ್ಚಿ ಹೇಳದೆ ಕಲಾತ್ಮಕವಾಗಿ ನಿರ್ವಹಿಸಿದ ರೀತಿ ಎಲ್ಲರಿಗೂ ಸಮಾಧಾನ ಕೊಟ್ಟಿದೆ. ಈ ರೀತಿಯ ಸಮಸ್ಯೆಯ ಸುಳಿಯೊಳಗೆ ಸಿಲುಕಿದ ದಂಪತಿಗಳು ಡಾಕ್ಟರನ್ನು ಕಂಡು ಮಾತನಾಡುವ ಧೈರ್ಯ ವಹಿಸಿದರೂ ನಮ್ಮ - ನಿಮ್ಮ ಶ್ರಮ ಸಾರ್ಥಕವಾದಂತೆ.

ಇಂತಹ ವಿಶಿಷ್ಟ ಕಾದಂಬರಿಯನ್ನು 'ತರಂಗ'ಕ್ಕೆ ಒದಗಿಸಿದ ನಿಮಗೆ ಧನ್ಯವಾದಗಳು, ನಿಮ್ಮ ಲೇಖನಿಯಿಂದ ಇನ್ನಷ್ಟು, ಇದಕ್ಕಿಂತಲೂ ಉತ್ತಮವಾದ ಮೌಲಿಕ ಕೃತಿಗಳು ಹೊರಬರಲಿ, ನಿಮ್ಮ ಲೇಖನಕಾರ್ಯ ಸಮೃದ್ಧವಾಗಿಮ್ಬೆಳೆಯಲಿ ಎಂದು ಹಾರೈಸುವ

-ಸಂತೋಷಕುಮಾತ ಗುಲ್ವಾಡಿ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)