V. Shreenivasa Vanigarahalli
ಜಾಲಿರೈಡ್
ಜಾಲಿರೈಡ್
Publisher - ವೀರಲೋಕ ಬುಕ್ಸ್
- Free Shipping Above ₹250
- Cash on Delivery (COD) Available
Pages - 136
Type - Paperback
ನಮ್ಮ ಕಾಲ ಹಿಂಗ್ ಇರ್ಲಿಲ್ಲಪ್ಪ.." ಅನ್ನೋ ಆಪಾದನೆ ಇಂದಿನ ಜನರೇಶನ್ನಿನ ಮೇಲಿದೆ. ಅದನ್ನು ಒಪ್ಪುವಂತೆಯೇ ಇಂದಿನ ಜನರೇಶನ್ನಿನ ವರ್ತನೆ ಕೂಡ ಇದೆ. ವ್ಯವಹಾರಗಳಷ್ಟೇ ಮುಖ್ಯ, ದುಡ್ಡಿದ್ರೆ ದುನಿಯಾ ಅನ್ನೋ ಮನಸ್ಥಿತಿಯವರೇ ಹೆಚ್ಚು. ವಿಜ್ಞಾನ ತಂತ್ರಜ್ಞಾನಗಳು ಪ್ರಾಯೋಗಿಕವಾಗಿ ಎಷ್ಟೊಂದು ವಿಷಯಗಳನ್ನು ಜನರಿಗೆ ಹತ್ತಿರದಿಂದ ಅರ್ಥ ಮಾಡಿಸಿದರೂ.. ಬದುಕಿನ ಶಿಸ್ತು, ಪ್ರೀತಿ, ಸ್ನೇಹ, ಸಂಬಂಧಗಳನ್ನು ಮನುಷ್ಯನಿಗೆ ಯಾರೂ ಸಂಪಾದಿಸಿಕೊಡುವುದಿಲ್ಲ. ಉನ್ನತ ಸ್ಥಾನವನ್ನೇರಲು ಯಾರೂ ಸಹಕರಿಸುವುದಿಲ್ಲ. ನಮಗೆ ನಾವೇ ಧೈರ್ಯ ತುಂಬಿಕೊಳ್ಳಬೇಕು, ನಮಗೆ ನಾವೇ ಆತ್ಮಸ್ಥೆರ್ಯ ಹುಡುಕಿಕೊಳ್ಳಬೇಕು, ನಮಗೆ ನಾವೇ ಸಮಾಧಾನ ಹೇಳಿಕೊಳ್ಳಬೇಕು. ಸರಿ ಯಾವುದು? ತಪ್ಪು ಯಾವುದು? ಸಮಾಜದಲ್ಲಿ ನಾನು ಹೇಗಿರಬೇಕು? ನನಗೊಂದು ಅಸ್ತಿತ್ವ ಇದೆಯಾ? ನನ್ನ ಬದುಕಿಗೆ ಅರ್ಥ ಇದೆಯಾ? ಇವೆಲ್ಲಾ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ? ನಾವೇ! ಹೇಗೆ? ಗೊತ್ತಿಲ್ಲ!
ಅರ್ಥಪೂರ್ಣ ಬದುಕಿಗೆ ವ್ಯಕ್ತಿತ್ವ ವಿಕಸನದ ಪಾಠಗಳು ಅತ್ಯಗತ್ಯ. ಅವುಗಳನ್ನು ಎಲ್ಲಿಂದ ಬೇಕಾದರೂ ಕಲಿಯಬಹುದು. 'ಜಾಲಿರೈಡ್ ಎಂಬಂತಹ ಪುಸ್ತಕಗಳಿಂದಲೂ ಹಿರಿಯರ ಅನುಭವಗಳನ್ನು ಓದಿ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದು.
- ಅನಂತ ಕುಣಿಗಲ್
Share
Subscribe to our emails
Subscribe to our mailing list for insider news, product launches, and more.