Skip to product information
1 of 1

Aravind Chokkadi

ಜೀವನ ವಿಜ್ಞಾನ ಶಿಕ್ಷಣ

ಜೀವನ ವಿಜ್ಞಾನ ಶಿಕ್ಷಣ

Publisher -

Regular price Rs. 85.00
Regular price Rs. 85.00 Sale price Rs. 85.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ವಿಜ್ಞಾನಕ್ಕಿರುವ ವಿಶಿಷ್ಟ ಲಕ್ಷಣವೆಂದರೆ ಅದರ ಸಮರ್ಥನೆಯ ಗುಣ. ವಿಚಾರಗಳನ್ನು ಸಮರ್ಥಿಸಲು ಅದು ಖಚಿತ ಮಾನದಂಡ ಗಳನ್ನು ಇಟ್ಟುಕೊಂಡಿರುತ್ತದೆ. ವಿಜ್ಞಾನದ ಗ್ರಹಿಕೆಗಳು ಪ್ರಯೋಗ ಮತ್ತು ಪ್ರಮಾಣೀಕರಿಸಿದ ಸೂತ್ರಕ್ಕೆ ಒಳಪಟ್ಟಿರುತ್ತದೆ. ಹೊಸ ಪ್ರಯೋಗದಿಂದ ಹಿಂದಿನ ಫಲಿತಾಂಶ ಸರಿಯಲ್ಲವೆಂದು ಸಾಬೀತಾದಾಗ, ಹಳೆಯದನ್ನು ಕೈಬಿಟ್ಟು ಹೊಸತನ್ನು ಸ್ಥಾಪಿಸಲು ವಿಜ್ಞಾನ ಹಿಂದೆ-ಮುಂದೆ ನೋಡುವುದಿಲ್ಲ!

ಜೀವನ ವಿಜ್ಞಾನ ಸಹ ಹೀಗೆಯೇ, ಶಿಕ್ಷಣದ ವಿಷಯ ಬಂದಾಗ ಅದು ವೈಜ್ಞಾನಿಕವಾಗಿರಬೇಕಾದ್ದು ಅನಿವಾರ್ಯ. ಯಾಕೆಂದರೆ, ಕಲಿಸುವ ವಿಚಾರಗಳು ಎಲ್ಲರ ಅನುಭವಕ್ಕೂ ಸಿಗುವ, ತಾರ್ಕಿಕವಾಗಿ ಸರಿ ಇರುವ ಪ್ರಮಾಣೀಕರಣಕ್ಕೆ ಒಳಪಡುವ ಸಂಗತಿಗಳಾಗಿರ ಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಮಕ್ಕಳಿಗೆ ಜೀವನ ಶಿಕ್ಷಣ ನೀಡಲು ಅನುಸರಿಸ ಬೇಕಾದ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಡಿ.ಎಸ್.ಇ.ಆರ್.ಟಿ. ನಿಗದಿಪಡಿಸಿದೆ. ಆ ಸೂತ್ರಗಳನ್ನು ಅನುಸರಿಸಿ ಶ್ರೀ ಅರವಿಂದ ಚೊಕ್ಕಾಡಿಯವರು ಶಿಕ್ಷಕರಿಗೆ ಉಪಯುಕ್ತವಾಗುವ ಈ ಕೃತಿಯನ್ನು ರಚಿಸಿದ್ದಾರೆ. ಎಲ್ಲವನ್ನು ವೈಜ್ಞಾನಿಕ ಒರೆಗಲ್ಲಿಗೆ ಹಚ್ಚುವ, ಕಲಿಕೆಯನ್ನು ಪ್ರಾಯೋಗಿಕವಾಗಿ ಅಭ್ಯಸಿಸಿ ಅದರ ಉಪಯುಕ್ತತೆಯನ್ನು ಅಳೆಯುವ ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣವನ್ನು ಹೇಗೆ ವೈಜ್ಞಾನಿಕವಾಗಿ ನೀಡಿ ಬದುಕಿಗೆ ಉಪಯುಕ್ತವಾಗಿಸಬಹುದು ಎನ್ನುವುದನ್ನು ಇಲ್ಲಿ ಚರ್ಚಿಸಲಾಗಿದೆ. ಸ್ವತಃ ಯಶಸ್ವಿ ಶಿಕ್ಷಕರಾಗಿರುವ ಈ ಲೇಖಕರ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)