D. S. Chowgale
ಜನಮಿತ್ರ ಅರಸು
ಜನಮಿತ್ರ ಅರಸು
Publisher - ವೀರಲೋಕ ಬುಕ್ಸ್
Regular price
Rs. 80.00
Regular price
Rs. 80.00
Sale price
Rs. 80.00
Unit price
/
per
- Free Shipping Above ₹250
- Cash on Delivery (COD) Available
Pages - 64
Type - Paperback
ಡಾ. ಡಿ. ಎಸ್. ಚೌಗಲೆಯವರ 'ಜನಮಿತ್ರ ಅರಸು' ನಾಟಕವು 'ಜೀತಪದ್ಧತಿ ಮುಕ್ತಿ, ತಲೆ ಮೇಲೆ ಮಲ ಹೊರುವ ಅನಿಷ್ಟ ಪದ್ಧತಿ, ಉಳುವವನೇ ಹೊಲದೊಡೆಯ ಮತ್ತು ಜನತಾ ವಸತಿ ಗೃಹ' ಈ ನಾಲ್ಕು ಮೂಲಭೂತ ವಿಷಯಗಳ ಕುರಿತು ಚರ್ಚಿಸುತ್ತದೆ. ನಾಗರಿಕತೆಯನ್ನೇ ನಾಚಿಸುವ ಅನಾಗರಿಕ ಸಂಸ್ಕೃತಿಯ ಅತ್ಯಂತ ಹೀನ ಪದ್ಧತಿ ತಲೆ ಮೇಲೆ ಮಲ ಹೊರುವ ಪದ್ಧತಿ'. ಇದು ಜಾತಿ ಮತ ಭೇದದಿಂದ ಉದ್ಭವಿಸಿದ ಒಂದು ಅನಿಷ್ಟ ಪದ್ಧತಿ. ಹಿಂದು ಧರ್ಮ ಒಂದು ಜನಾಂಗವನ್ನೇ ನಾಲ್ಕು ಚಾತುರ್ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರವರ್ಗದವರ ಸೇವೆ ಸಲ್ಲಿಸಲು, ಮೇಲ್ವರ್ಗದವರ ಹೇಸಿಗೆ ಸ್ವಚ್ಛಗೊಳಿಸುವುದು ದೇವ ನಿಯಮದ ಧರ್ಮವೆಂದು ನಂಬಿಸಿ ಗುಲಾಮರನ್ನಾಗಿಸಿತು. ವರ್ಣ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದ ಇಲ್ಲಿನ ಮೂಲನಿವಾಸಿಗಳನ್ನ ಊಳಿಗಮಾನ್ಯ ವ್ಯವಸ್ಥೆ ಕೃಷಿಕ ಕೂಲಿಕಾರ್ಮಿಕರನ್ನಾಗಿ ಉತ್ಪಾದನೆ ಮಾಡುವ ಕಾಯಕದಲ್ಲಿ ತೊಡಗಿಸಿ ಹಸಿವಿನ ವಂಚನೆಯ ಸುಳಿಗೆ ಬಹುಸಂಖ್ಯಾತರನ್ನು ನೂಕಿತು. ಇಂದು ಸಹ ಜಾಗತಿಕ ಅಂಕಿ ಸಂಖ್ಯೆಯಲ್ಲಿ ಹಸಿವಿನಿಂದ ನರಳುವ ಯಾದಿಯಲ್ಲಿ ಭಾರತ ನೂರ ಆರನೇ ಸ್ಥಾನದಲ್ಲಿದೆ ಎಂಬ ಸುದ್ದಿ ಗೌರವ ತರುವ ಸಂಗತಿಯಾಗಿಲ್ಲ. ಈ ರೂಪಕವು ನಮ್ಮಲ್ಲಿ ಸಂಸ್ಕೃತಿ, ಪರ೦ಪರೆಯ ಹೆಸರಲ್ಲಿ ಜೀವಂತವಾಗಿರುವ ಅನಿಷ್ಟ ಪದ್ಧತಿಗಳ ಸಾರ್ವತ್ರಿಕವಾಗಿ ಇಂದಿಗೂ ಸತ್ಯವಾಗಿರುವುದನ್ನು ಗಮನಿಸುವಂತೆ ಪ್ರೇರೇಪಿಸುತ್ತದೆ.
ಸಿ. ಬಸವಲಿಂಗಯ್ಯ (ಮುನ್ನುಡಿಯಿಂದ)
ಸಿ. ಬಸವಲಿಂಗಯ್ಯ (ಮುನ್ನುಡಿಯಿಂದ)
Share
Subscribe to our emails
Subscribe to our mailing list for insider news, product launches, and more.