Mahadeva Basarkod
ಇರುವ ಭಾಗ್ಯವ ನೆನೆದು
ಇರುವ ಭಾಗ್ಯವ ನೆನೆದು
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹300
- Cash on Delivery (COD) Available
Pages - 124
Type - Paperback
Couldn't load pickup availability
"ಬದುಕು ಹೀಗಿದ್ದರೆ ಚಂದ, ಜೀವನಕ್ರಮ ಹೀಗೆ ಸಾಗಿದರೆ ಅಂದ" ಎಂಬ ಆಶಯವುಳ್ಳವರು ಅಂಥ ನಿರೀಕ್ಷೆಯಿಟ್ಟುಕೊಂಡು ಮತ್ತೊಬ್ಬರಿಗೆ ತಿಳಿ ಹೇಳುವಾಗ ಒಂದೋ ಆಜ್ಞಾರೂಪದಲ್ಲಿ ಹೇಳುವುದಿದೆ, ಇಲ್ಲವೇ ಕೋರಿಕೊಳ್ಳುವುದಿದೆ.
ಇವೆರಡಕ್ಕೂ ಹೊರತಾದ ಮತ್ತೊಂದು ಮಾರ್ಗವಿದೆ, ಅದೇ- ಹಿರಿಯಣ್ಣರಂಥವರು ಕಿರಿಯರ ಹೆಗಲ ಮೇಲೆ ಕೈಯಿಟ್ಟು, "ನೋಡಯ್ಯಾ, ಇದು ಹೀಗಲ್ಲ ಹೀಗೆ; ಈ ರೀತಿ ಹೆಜ್ಜೆ ಹಾಕುತ್ತಾ ಹೋಗು, ಆಗ ನಿನ್ನ ಒಂದಿಡೀ 'ಜೀವನ ಪಥ' ಮಾತ್ರವೇ ಅಲ್ಲ, ನೀನು ಆಯ್ದುಕೊಂಡಿರುವ 'ಸಾಧನಾಪಥ'ದಲ್ಲೂ ಯಶಸ್ಸು ಸಾಧಿಸುತ್ತೀಯ" ಎಂದು ಹೇಳುವ ಪರಿ. ಹೀಗೆ ಬುದ್ದಿವಾದ ಹೇಳುವ ಪರಿಯಲ್ಲಿ 'ಇದನ್ನು ನೀನು ಮಾಡಲೇಬೇಕು' ಎಂದು ಆಜ್ಞಾಪಿಸುವ ಅಹಮಿಕೆಯಾಗಲೀ, 'ದಯವಿಟ್ಟು ಹೀಗೆ ನಡೆದುಕೊಂಡು ಹೋಗಪ್ಪಾ' ಎಂಬ ದೈನ್ಯತೆಯಾಗಲೀ ಇರುವುದಿಲ್ಲ. ನನ್ನ ಸನ್ಮಿತ್ರರಾದ ಶ್ರೀಯುತ ಮಹಾದೇವ ಬಸರಕೋಡ ಅವರು ಈ ಕೃತಿಯ ನಿರೂಪಣೆಯಲ್ಲಿ ಆಯ್ದುಕೊಂಡಿರುವುದು 'ಕಿರಿಯರ ಹೆಗಲ ಮೇಲೆ ಹಿರಿಯಣ್ಣನಂತೆ ಕೈಯಿಟ್ಟು' ಜೀವನ ಕ್ರಮವನ್ನು ಮನವರಿಕೆ ಮಾಡಿಕೊಡುವ ಹಾದಿಯನ್ನೇ. ಇದು ಈ ಕೃತಿಯನ್ನು ಮಡಿಲಲ್ಲಿಟ್ಟುಕೊಂಡು ಆಸ್ವಾದಿಸುವವರ ಅನುಭವಕ್ಕೂ ಬರುತ್ತದೆ ಎಂಬುದು ನನ್ನ ನಂಬಿಕೆ.
-ಯಗಟಿ ರಘು ನಾಡಿಗ್
ಹಿರಿಯ ಉಪಸಂಪಾದಕ, ವಿಶ್ವವಾಣಿ ದಿನಪತ್ರಿಕೆ
Share


Subscribe to our emails
Subscribe to our mailing list for insider news, product launches, and more.