D. V. G.
ಇಂದ್ರವಜ್ರ
ಇಂದ್ರವಜ್ರ
Publisher - ಸಾಹಿತ್ಯ ಭಂಡಾರ
Regular price
Rs. 75.00
Regular price
Rs. 75.00
Sale price
Rs. 75.00
Unit price
/
per
- Free Shipping Above ₹250
- Cash on Delivery (COD) Available
Pages - 68
Type - Paperback
“ಪುರಾತನ ಗ್ರೀಕರು ತಮಗೆ ಪ್ರಿಯರೂ ಪೂಜ್ಯರೂ ಆಗಿದ್ದವರ ಸಮಾಧಿಯ... ಚಿತಾಭಸ್ಮವನ್ನು, ಒಂದು ಸೊಗಸಾದ ಪಾತ್ರೆಯಲ್ಲಿ ಜ್ಞಾಪಕಾರ್ಥವಾಗಿ ತೆಗೆದಿರಿಸಿಕೊಳ್ಳುತ್ತಿದ್ದರು... ಕೀಟ್ಸ್ ಕಂಡ ಇಂಥ ಒಂದು ಸ್ಮಾರಕ ಕರಂಡದ ಮೇಲೆ ಶೃಂಗಾರ ಲಾವಣ್ಯಗಳ ರೇಖಾಚಿತ್ರಗಳು ಎದ್ದು ಕಾಣುತ್ತಿದ್ದವು... ಏನಿದರ ತಾತ್ಪರ್ಯ ಕರಡಿಗೆಯ ಒಳಗಡೆ ಮೃತ್ಯುಪ್ರಸಾದ, ಹೊರಗಡೆ ಮನ್ಮಥಕೋಲಾಹಲ, ಈ ಸಂದರ್ಭವೈಷಮ್ಯವು ಕವಿಯ ಅಂತರಂಗವನ್ನು ಕೆಣಕಿ ಭಾವತರಂಗಗಳನ್ನೆಬ್ಬಿಸಿತು. ಆಗ ಅವನ ಕಿವಿಗೆ ಕೇಳಬಂದ ಸಂದೇಶ ಇದಂತೆ: 'ಸೌಂದರ್ಯ ತಾಂ ಸತ್ಯ ಸತ್ಯ ತಾಂ ಸೌಂದರ್ಯ'; ಇದಕ್ಕಿಂತ ಹೆಚ್ಚಿನ ತಿಳಿವಳಿಕೆ ನಮಗೆ ಸಾಧ್ಯವಲ್ಲವಂತೆ; ಅದು ಅವಶ್ಯವೂ ಅಲ್ಲವಂತೆ. ಸತ್ಯ, ಸೌಂದರ್ಯ ಈ ಎರಡರ ಒಳಗಡೆ, ಆ ಎರಡಕ್ಕೂ ನಡುವೆ ತುಂಬಿಕೊಂಡಿದೆಯಂತೆ ಜೀವನದ ಮರ್ಮವೆಲ್ಲ. ಅದು ಹೇಗೆ?
ಈ ಕಾವ್ಯ ಮೇಲಿನ ಮರ್ಮದ, ತತ್ತ್ವದ ಅರ್ಥವನ್ನು `ಪೀಠಿಕೆ'ಯಿಂದ ಮೊದಲ್ಗೊಂಡು, 'ಜಗದೃಷ್ಟಿ, ಮಹರ್ಷಿ ಸಾಕ್ಷ್ಯ', 'ಜಗದ್ವಿಕಾಸ ಮಹರ್ಷಿಸಾಕ್ಷ್ಯ', ಸತ್ಯಸುಂದರತತ್ತ್ವ: ಕೀಟ್ಸನಸಾಕ್ಷ್ಯ', 'ಪ್ರೇಮಾದೈತ: ಷೇಕ್ ಸ್ಪಿಯರನ ಸಾಕ್ಷ್ಯ', 'ವಿರಹಿಯ ಅನುಭವ: ಅನಾಮಧೇಯ ಸಾಕ್ಷ್ಯ' -ಎಂಬ ಐದು ಪ್ರಕರಣಗಳಲ್ಲಿಯೂ, 'ಸತ್ಯ ಮತ್ತು ಸೌಂದರ್ಯ' ಎಂಬ ಅನುಬಂಧದಲ್ಲಿಯೂ ವಿವರಿಸುತ್ತದೆ. ಈ ಕವಿಯ ಅನುಭವೈಕಜನ್ಯವಾದ ಅಂತರ್ದೃಷ್ಟಿಯೂ ತತ್ವಾನ್ವೇಷಣ ಪಟುತ್ವವೂ ಮೇಳವಿಸಿ ಕಾವ್ಯದಲ್ಲಿ ಅದು ಎಂಥ ರಸಪಾಕವಾಗಿ ಪರಿಣಮಿಸಿದೆಯೆಂಬುದನ್ನು ಕಂಡು ವಾಚಕರು ಹರ್ಷಿಸದೆ ಇರಲಾರರು. 'ಮಂಕುತಿಮ್ಮನ ಕಗ್ಗ', 'ಉಮರನ ಒಸಗೆ' ಇವುಗಳ ಜೊತೆಗೆ ಓದಬೇಕಾದ ಗ್ರಂಥವಿದು.

Share
Subscribe to our emails
Subscribe to our mailing list for insider news, product launches, and more.