Dr. Vasundhara Bhupathi
ಇಮ್ಯುನಿಟಿಗಾಗಿ ಆಹಾರ
ಇಮ್ಯುನಿಟಿಗಾಗಿ ಆಹಾರ
Publisher - ವಸಂತ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕೋವಿಡ್-19 ಅವಧಿಯಲ್ಲಿ ಇಮ್ಯುನಿಟಿ ಶಬ್ದ ಹೆಚ್ಚು ಪ್ರಚಲಿತವಾಯಿತು. ಈ ಸಂದರ್ಭದಲ್ಲಿ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಯಾವ ರೀತಿಯ ಆಹಾರ ಸೂಕ್ತ ಯಾವ ನಡವಳಿಕೆ ಒಳ್ಳೆಯದು ಎಂಬುದರ ಬಗ್ಗೆ ಎಲ್ಲರಲ್ಲೂ ಪ್ರಜ್ಞೆ ಹುಟ್ಟಿದ್ದು ಸತ್ಯ. ಭಾರತೀಯ ಆಹಾರ ಪದ್ಧತಿ ವೈಶಿಷ್ಟ್ಯಪೂರ್ಣವಾಗಿದ್ದು ಸ್ವಾಭಾವಿಕ ಇಮ್ಯುನಿಟಿಯನ್ನು ಒದಗಿಸುವಂತಹುದು. ನಾವೆಲ್ಲರೂ ನಮಗೆ ಅರಿವಿಲ್ಲದೇ ಅದೆಷ್ಟೋ ರಾಸಾಯನಿಕಗಳನ್ನು ಒಳಗೊಂಡ ಆಹಾರವನ್ನು ಸೇವಿಸುತ್ತಿದ್ದೇವೆ ಅರ್ಥಾತ್ ವಿಷವನ್ನು ಉಣ್ಣುತ್ತಿದ್ದೇವೆ. ಆ ನಿಟ್ಟಿನಲ್ಲಿ ಎಲ್ಲರೂ ನೀಲಕಂಠರೇ ಸೈ, ಆಹಾರ ಚಿಕಿತ್ಸೆಯೂ ಆಗಬಲ್ಲದು ಎಂಬುದನ್ನು ಆಯುರ್ವೇದ ಹೇಳುತ್ತದೆ. ಎಷ್ಟೋ ಸಂದರ್ಭದಲ್ಲಿ ಇದು ಸಾಬೀತಾಗಿರೋದನ್ನೂ ನೋಡಿದ್ದೇವೆ. ಇಮ್ಯುನಿಟಿ ಚೆನ್ನಾಗಿದ್ದಲ್ಲಿ ನಮ್ಮ ದೇಹ ಎಂಥದ್ದೇ ವೈರಸ್, ಬ್ಯಾಕ್ಟಿರಿಯಾಗಳಿರಲಿ ಎದುರಿಸಲು ಸಜ್ಜುಗೊಂಡಿರುತ್ತದೆ: ಇಮ್ಯುನಿಟಿಗಾಗಿ ಆಹಾರ ಎನ್ನುವ ಮಹತ್ವದ ವಿಷಯದ ಬಗೆಗೆ ಮತ್ತು ಅದರ ವಿವಿಧ ಆಯಾಮಗಳ ಕುರಿತು ನಾಡಿನ ಹೆಸರಾಂತ ಆಹಾರತಜ್ಞೆ, ಲೇಖಕಿ, ಚಾರಣಪ್ರಿಯೆ ಡಾ. ಹೆಚ್.ಎಸ್. ಪ್ರೇಮ ಅವರು ಕೃತಿ ರಚಿಸಿಕೊಟ್ಟಿದ್ದಾರೆ. ನಮ್ಮ ದೇಹದ ಆಂತರಿಕ ಪರಿಸರದಲ್ಲಿರುವ ಜೀವಿಗಳ ಅಂತರ್, ಸಂಬಂಧ, ಆಂಟಿಆಕ್ಸಿಡೆಂಟ್ಸ್ ಸಹಜ ನ್ಯೂಟ್ರಾಸ್ಯುಟಿಕಲ್ಸ್‌ಗಳ ಬಗ್ಗೆ ಸರಳವಾಗಿ ತಮ್ಮ ಎಂದಿನ ಶೈಲಿಯಲ್ಲಿ ಲೇಖಕಿ ವಿವರಿಸಿದ್ದಾರೆ. ಆರೋಗ್ಯಕ್ಕಾಗಿ ಯಾವ ರೀತಿಯಲ್ಲಿ ಮತ್ತು ಹೇಗೆ ಗಿಡಮೂಲಿಕೆಗಳು ಸಹಾಯ ಮಾಡುತ್ತವೆಂಬುದನ್ನು ತಿಳಿಸಿಕೊಟ್ಟಿದ್ದಾರೆ. ನಾವು ದಿನನಿತ್ಯ ಸೇವಿಸುವ ಆಹಾರ ಹೇಗೆ ಮತ್ತು ಯಾಕೆ ವಿಷವಾಗಿ ಪರಿಣಮಿಸುತ್ತದೆ ಮತ್ತು ತಯಾರಿಕಾ ಕ್ರಮದಲ್ಲಿ ಹೇಗೆ ವಿಷವಾಗಿ ಬದಲಾಗುತ್ತದೆಂಬುದನ್ನು ಚರ್ಚಿಸಲಾಗಿವೆ. ಕೊನೆಯ ಅಧ್ಯಾಯ ನಮ್ಮೊಳಗಿನ ಡಾಕ್ಟರ್ ಅತ್ಯಂತ ವಿಶೇಷ ಹಾಗೂ ಮನೋಜ್ಞವಾಗಿದೆ. ಆರೋಗ್ಯದ ಕುರಿತು ತಮ್ಮ ಸ್ವಂತ ಅನುಭವವನ್ನು ಲೇಖಕಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಥೈರಾಯ್ಡ್ ಐಬಿಎಸ್, ಫೈಟ್ರೋಎಪಿಸೋಮಾದಂತಹ ಬೃಹತ್ ಸಮಸ್ಯೆಗಳಿಂದ ಪಾರಾಗಿ ಯಾವುದೇ ಚಿಕಿತ್ಸೆಯ ಗೊಡವೆಯಿಲ್ಲದೇ ಸುರಕ್ಷಿತವಾಗಿ ಔಷಧಿರಹಿತ ಬದುಕು ಸಾಗಿಸುತ್ತಿರುವುದನ್ನು ಹೆಮ್ಮೆಯಿಂದ ಉಣಬಡಿಸಿದ್ದಾರೆ.
ಡಾ. ವಸುಂಧರಾ ಭೂಪತಿ
ಡಾ. ವಸುಂಧರಾ ಭೂಪತಿ
Share
Subscribe to our emails
Subscribe to our mailing list for insider news, product launches, and more.