Skip to product information
1 of 1

Nemichandra

ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು

ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು

Publisher - ಅಂಕಿತ ಪುಸ್ತಕ

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ಹಗುರವಾದ ಕನಸುಗಾರಿಕೆ ಅಥವಾ ತೀವ್ರವಾದ ಪುರುಷದ್ವೇಷ -ಇಂಥ ವೈಪರೀತ್ಯಗಳಿಂದ ಮುಕ್ತರಾಗಿ, ಕೇವಲ ಅನುಭವದ ಸಾಚಾತನವನ್ನೇ ನಂಬಿ ಸಾಹಿತ್ಯ ರಚನೆಗೆ ಕೈ ಹಾಕಿರುವ ನೇಮಿಚಂದ್ರರ ಕಥಾಸಂಕಲನ ಒಂದು ಮಹತ್ವದ ಕೃತಿ, ಈ ಕತೆಗಳಲ್ಲಿ ಸ್ತ್ರೀಮುಕ್ತಿ ಒಂದು ಘೋಷಣೆಯಾಗಿ ವಿಜೃಂಭಿಸದೆ ವಾಸ್ತವದ ಒರೆಗೆ ಹಚ್ಚಿದ ಮಾನವೀಯ ಸಾಧ್ಯತೆಯಾಗಿ ಬರುತ್ತದೆಯೆನ್ನುವುದು ಅವುಗಳ ವೈಶಿಷ್ಟ್ಯವಾಗಿದೆ.

-ಡಾ. ಜಿ.ಎಸ್ ಆಮೂರ (ಅರ್ಥಲೋಕ, ಸಣ್ಣಕತೆ: ಕೆಲವು ಮಹತ್ವದ ಸಂಗ್ರಹಗಳು)

ಕನ್ನಡದ ಹೊಸ ಪೀಳಿಗೆಯ ಕಥೆಗಾರ್ತಿಯರಲ್ಲಿ ಗಮನಾರ್ಹರಾದ ನೇಮಿಚಂದ್ರ ಅವರ ಬರವಣಿಗೆ ಹೆಣ್ಣಿನ ಮನಸ್ಥಿತಿ-ಆಶೋತ್ತರಗಳ ಧ್ಯಾನವೇ ಆಗಿದ್ದರೂ, ಅದೆಂದೂ ಸರಳವಾದ ಸ್ತ್ರೀಪರ ಪುರುಷವಿರೋಧಿ ಘೋಷಣೆ ಅಥವಾ ತೀರ್ಮಾನಗಳಲ್ಲಿ ಸಡಿಲವಾಗಿಲ್ಲ. ಗಂಡು-ಹೆಣ್ಣಿನ ನಡುವಣ ಗೋಡೆಗಳು ಕರಗಿ ಅವರಿಬ್ಬರೂ ಪ್ರಬುದ್ಧವಾದ ಸಮಾನಸ್ತರದ ಬದುಕು ನಡೆಸಬೇಕಾದ ಕ್ಷಣಗಳಿಗಾಗಿ ಅವರು ಹುಡುಕುತ್ತಿದ್ದಾರೆ, ಈ ಸೃಜನಶೀಲ ಹುಡುಕಾಟವೇ ನೇಮಿಚಂದ್ರರ ಬರವಣಿಗೆಯನ್ನು ಪ್ರಭಾವಿಸಿದೆ.

ಟಿ. ಪಿ. ಅಶೋಕ (ಮಯೂರ, ಕೃಷಿ ಕರ್ತೃ)

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)