Paalahalli Vishwanath
ಇಲ್ಲಿಂದ ಅಲ್ಲಿಂದ
ಇಲ್ಲಿಂದ ಅಲ್ಲಿಂದ
Publisher -
- Free Shipping Above ₹350
- Cash on Delivery (COD) Available
Pages - 276
Type - Paperback
Couldn't load pickup availability
ಡಾ. ವಿಶ್ವನಾಥ್ ಅವರು ವಿಜ್ಞಾನಿ ಮತ್ತು ಸಾಮಾನ್ಯರಿಗಾಗಿ ವಿಜ್ಞಾನ ಬರಹಗಳನ್ನು ಕನ್ನಡದಲ್ಲಿ ಬರೆದ ವಿಜ್ಞಾನ ಲೇಖಕರಾಗಿ ಕನ್ನಡದಲ್ಲಿ ಚಿರಪರಿಚಿತರು. ಇದು ತಮ್ಮ ಜ್ಞಾನವನ್ನು ಅವರು ಸಮಾಜಕ್ಕೆ ಪ್ರಸರಿಸಿದ ಪರಿ. ಇತ್ತ, ತಮ್ಮ ವೃತ್ತಿ, ಅಧ್ಯಯನಗಳಿಗೆ ಸಂಬಂಧಿಸಿದ ಅನೇಕ ವೈಜ್ಞಾನಿಕ ಸಂಶೋಧನಾ ಲೇಖನಗಳನ್ನು ಬರೆದಿರುವ ಅವರು ತಮ್ಮ ವಿಶಿಷ್ಟ ವೈವಿಧ್ಯಮಯ ಸಾಹಿತ್ಯಾಸಕ್ತಿಗಳ ಫಲವಾಗಿ ರಚಿಸಿದ ಕತೆ, ಪ್ರಬಂಧಗಳನ್ನು 'ಅಲ್ಪ ಸ್ವಲ್ಪ ವುಡ್ ಹೌಸ್ ಮತ್ತು ಕಥೆಗಳು' ಎಂబ ಸಂಕಲನದಲ್ಲಿ ಪ್ರಕಟಿಸಿದ್ದೂ ಇದೆ. ಇದರ ಮುಂದುವರಿಕೆಯಂತೆ ಈಗ ಮತ್ತೊಂದು ವಿಶಿಷ್ಟ ಲೇಖನಗಳು, ಲಲಿತ-ಕಥಾ ಪ್ರಸಂಗಗಳ ಸಂಕಲವನ್ನು ಕನ್ನಡಿಗರಿಗೆ ಅರ್ಪಿಸುತ್ತಿದ್ದಾರೆ.
'ಇಲ್ಲಿಂದ ಅಲ್ಲಿಂದ' ಎಂಬ ಈ ಕೃತಿಯು ಓದುಗರ ಅನುಭವವನ್ನು ಹಲವು ಬಗೆಗಳಿಂದ ಸಮೃದ್ಧಗೊಳಿಸುತ್ತದೆ. ಕನ್ನಡದ ಹಿರಿಯ ಸುಸಂಸ್ಕೃತ ಮನಸ್ಸೊಂದು ಕಟ್ಟಿಕೊಟ್ಟಿರುವ ಬುದ್ದಿ-ಭಾವ-ಸ್ಕೃತಿಗಳ ಸಂಚಿಯವಾಗಿರುವ ಕನ್ನಡಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ. ಈ ಬರಹಗಳನ್ನು ನಮಗೆ ಕೊಟ್ಟಿರುವ ಹಿರಿಯ ಲೇಖಕ ಪಾಲಹಳ್ಳಿ ವಿಶ್ವನಾಥ್ ಅವರಿಗೆ ಅಭಿನಂದನೆಗಳು.
- ಡಾ. ಬಿ. ಜನಾರ್ದನ ಭಟ್
Share


Subscribe to our emails
Subscribe to our mailing list for insider news, product launches, and more.