Skip to product information
1 of 2

Dr. Subhash Pattaji

ಇಹಪರದ ಧ್ಯಾನ

ಇಹಪರದ ಧ್ಯಾನ

Publisher - ಸಾಹಿತ್ಯ ಭಂಡಾರ

Regular price Rs. 285.00
Regular price Rs. 285.00 Sale price Rs. 285.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 232

Type - Hardcover

ಇಹಪರದ ಧ್ಯಾನ

ಡಾ. ನಾ. ಮೊಗಸಾಲೆಯವರು 'ಬಯಲ ಬೆಟ್ಟ' ಎಂಬ ಆತ್ಮಕತೆ, 'ಉಲ್ಲಂಘನೆ' ಮತ್ತು 'ಮುಖಾಂತರ' ಎಂಬ ಬೃಹತ್ ಕಾದಂಬರಿಗಳಲ್ಲಿ ತಾವು ಕಂಡುಂಡ ಜೀವಾನುಭವಗಳನ್ನು ದಾಖಲಿಸಿ ಕಾಸರಗೋಡು ಮತ್ತು ದಕ್ಷಿಣ ಕನ್ನಡದ ಸಾಂಸ್ಕೃತಿಕ ದಾಖಲೆಗಳೆನ್ನಬಹುದಾದ ಕೃತಿಗಳನ್ನು ಸೃಷ್ಟಿಸಿದರು. ಅವರು ತಮ್ಮ ಜೀವನದ ಬಹುಭಾಗವನ್ನು ಕಳೆದಿರುವ ಉಡುಪಿ ಜಿಲ್ಲೆಯ ಬದುಕನ್ನು ದಾಖಲು ಮಾಡಿದರೆ ಅವರ ಜೀವಾನುಭವದ ಮತ್ತೊಂದು ದೊಡ್ಡ ಖಂಡದ ಸಾಂಸ್ಕೃತಿಕ ದಾಖಲೀಕರಣ ಆದಂತೆ ಆಗುತ್ತಿತ್ತು. ಬಹುಶಃ ಉಡುಪಿಯನ್ನು ಕೇಂದ್ರವಾಗಿಸಿಕೊಂಡು ಅಲ್ಲಿನ ಜೀವಾನುಭವಗಳನ್ನು, ಬದುಕಿನ ಸತ್ವವನ್ನು ಸೃಜನಶೀಲ ಕೃತಿಯಲ್ಲಿ ಹಿಡಿದಿಡದಿದ್ದರೆ ತಮ್ಮ ಅನುಭವ ಪ್ರಪಂಚ ಪರಿಪೂರ್ಣವಾಗದು ಎಂದು ನಾ.ಮೊಗಸಾಲೆಯವರು ಯೋಚಿಸಿದ್ದರ ಫಲವಾಗಿ ಸೃಷ್ಟಿಯಾದ ಕಾದಂಬರಿಯೇ 'ಇದ್ದೂ ಇಲ್ಲದ್ದು'.

-ಡಾ. ಬಿ. ಜನಾರ್ದನ ಭಟ್

ಸಂಸ್ಕೃತಿಗೆ ಸಂಬಂಧಿಸಿದ ಎಲ್ಲ ವಿಚಾರಗಳು ಇಂದು ಇದ್ದೂ ಇಲ್ಲದಂತಿವೆ. ದೇವರ ಕುರಿತಾದ ನಂಬಿಕೆಯ ಚಲನೆ ನಿಧಾನಕ್ಕೆ ಕ್ಷೀಣಿಸುವ ಚಿತ್ರಣ ಈ ಕಾದಂಬರಿಯ ಜೀವಾಳ.

-ಡಾ. ಅರುಣಕುಮಾರ್ ಎಸ್. ಆರ್.

ಐತಿಹಾಸಿಕ ಪ್ರಜ್ಞೆಯನ್ನಿಟ್ಟುಕೊಂಡೂ ಸಮಕಾಲೀನ ವಾಸ್ತವಕ್ಕೆ ತೀವ್ರವಾಗಿ ಸ್ಪಂದಿಸುವ ಇದ್ದೂ ಇಲ್ಲದ್ದು' ಇತ್ತೀಚೆಗೆ ಕನ್ನಡದಲ್ಲಿ ಬಂದ ಮಹತ್ವದ ಕಾದಂಬರಿಗಳಲ್ಲೊಂದು. ಇದು ಕರಾವಳಿ ಪ್ರದೇಶದ ಇತಿಹಾಸ ಮತ್ತು ವರ್ತಮಾನದ ಸಾಮಾಜಿಕ ಪಲ್ಲಟಗಳಿಗೆ ಕನ್ನಡಿ ಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡಿದೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದೆ.

-ವಿಕಾಸ ಹೊಸಮನಿ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)