Dr. T. N. Vasudevamurthy
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 175.00
Regular price
Rs. 175.00
Sale price
Rs. 175.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
“ಇಂತಹ ವ್ಯಕ್ತಿ ನನಗೆಲ್ಲಿ ಸಿಗುತ್ತಿದ್ದ ? ಕೊನೆಗೂ ಇವನು ನನಗೆ ಸಿಕ್ಕಿದ, ಬದುಕಿನಲ್ಲಿ ಇಂಥವರು ಸಿಗುವುದು ಅಪರೂಪ'
-ವ್ಯಾಲೆಂಟೈನ್ ಡಿ ಕರ್ವನ್
ಯುಜಿ ಎಂದರೆ ಅದೊಂದು ತರ್ಕದ ಟಗರನ್ನು ಬಗ್ಗಿಸುವ ರಿಂಗ್ ಮಾಸ್ಟರ್, ಬಲಶಾಲಿಯಾಗಿರುವ ಆದರೆ ಮೆಲುನೋಟಕ್ಕೆ ಧಾರ್ಮಿಕ ವಿನಯವಂತಿಕೆಯನ್ನು ಪ್ರದರ್ಶಿಸುವ ಮನಸ್ಸಿಗೆ ಸದಾ ಆಘಾತ ಉಂಟು ಮಾಡುವ ವ್ಯಕ್ತಿತ್ವ, ಸಮಕಾಲೀನರಾದ ಚಿಡ್ಡು ಕೃಷ್ಣಮೂರ್ತಿ, ರಮಣ ಮಹರ್ಷಿ, ಓಶೋ, ಅರವಿಂದರಿಗಿಂತ ಭಿನ್ನವಾಗಿ ಚಿಂತಿಸಿದವರು ಯುಜಿ. ಮನುಷ್ಯ ಕಂಡೀಶನಿಂಗ್‌ಗೆ ಒಳಗಾಗಿ ಹೇಗೆ "ನಾನು ಯಾರು ?" ಎಂಬ ಹುಸಿಪ್ರಶ್ನೆಯ ಬಲೆಯೊಳಗೆ ಸಿಲುಕಿದ್ದಾನೆ ಎಂಬುದನ್ನು ಬೇರೆ ಬೇರೆ ರೀತಿಯ ಮಾತುಗಳಲ್ಲಿ ಯುಜಿ ತಿಳಿಸಿದ್ದಾರೆ. ಅಷ್ಟಕ್ಕೂ ಅವರು ಸಂವಾದ, ವಿವಾದ, ವಾಗ್ವಾದ ಯಾವುದರಲ್ಲೂ ಬಹಳ ಆಸಕ್ತಿ ಇದ್ದವರಲ್ಲ, ನೀವು ಕೇಳುತ್ತಿರುವ ಪ್ರಶ್ನೆಗಳೇ ನನ್ನಲ್ಲಿ ಉತ್ತರ ಹುಟ್ಟಸುತ್ತಿವೆ ಎನ್ನುವ ಮಟ್ಟಗೆ ಅವರಿಗೆ ಅವರ ಸ್ವಂತ ದರ್ಶನ'ದ ಬಗ್ಗೆ ನಿರಾಸಕ್ತಿ, ಮಹಾವೀರ ಮತ್ತು ಬುದ್ಧನ ಕಾಲದಲ್ಲ ಇಂದಿಗೆ ಲುಪ್ತವಾಗಿರುವ ಹಲವಾರು ಚಿಂತನೆಗಳು ಭಾರತದಲ್ಲಿ ಇದ್ದವು ಎಂದು ಕೇಳದ್ದೇವೆ, ಯುಜಿ ಓದಿದರೆ, ಇಂಟರ್ನೆಟ್‌ನಲ್ಲ ಅವರ ಮಾತುಗಳನ್ನು ಕೇಳಿಸಿಕೊಂಡರೆ ಅವೆಲ್ಲ ಯುಜಿಯಲ್ಲಿ ಸೇರಿಕೊಂಡಿವೆ ಎನಿಸುತ್ತವೆ.
ಏಕಕಾಲಕ್ಕೆ ಭಾರತದ ಮತ್ತು ಪಶ್ಚಿಮದ ಇದುವರೆಗಿನ ತತ್ವ ಚಿಂತನೆಗಳನ್ನು ಸಮಗ್ರವಾಗಿ ಪ್ರಶ್ನಿಸುವ ದಾರಿ ಯುಜಿಯದು. ಇಷ್ಟಾದರೂ ಅವರನ್ನು ಕೇವಲ ಭೌತವಾದಿ ಎನ್ನಲು ನನಗೆ ಮನಸ್ಸಿಲ್ಲ. ಏಕೆಂದರೆ ಅವರು ಮನುಷ್ಯ ಚೇತನದ ಅಪಾರ ಸಾಧ್ಯತೆಗಳನ್ನು ಮುಕ್ತವಾಗಿ ಹುಡುಕುತ್ತಲೇ ಹೋದ ಅವಧೂತ ಎನ್ನುವುದು ನನ್ನ ತಿಳುವಳಿಕೆ. ಬೇರೆಯ ಅನುಭಾವಿಗಳ ಮೂಲಕ ದೊರಕದ ಅಪರೂಪದ ಮತ್ತು ಅಮೂಲ್ಯವಾದ ವಿಚಾರ ಪ್ರಪಂಚವೊಂದನ್ನು ಗೆಳೆಯ ಟಿ.ಎನ್.ವಾಸುದೇವಮೂರ್ತಿ ಕನ್ನಡಕ್ಕೆ ತರುವ ಸಾಹಸ ಮಾಡಿದ್ದಾರೆ.
-ಜಿ.ಬಿ.ಹರೀಶ್