Basavaraja Kodagunti
Publisher -
Regular price
Rs. 100.00
Regular price
Rs. 100.00
Sale price
Rs. 100.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಹಯ್ದರಾಬಾದ ಕಾರ್ನಾಟಕ ಪರಿಸರದ ಬಹುತ್ವವು ಬಾಶೆಯ ಬೆಳವಣಿಗೆಯ ಮಹತ್ವದ ಹಿನ್ನೆಲೆಯನ್ನು ಹೊಂದಿದೆ. ಒಕ್ಕಲುತನದ ಆರಂಬದೊಂದಿಗೆ ಸುಮಾರು ಅಯಾರು ಸಾವಿರ ವರುಶಗಳಿಂದ ಕನ್ನಡ ಇಲ್ಲಿ ಬಳಕೆಯಲ್ಲಿದ್ದಿತು ಎನ್ನುವುದಕ್ಕೆ ಅದಾರಗಳು ದೊರೆಯುತ್ತವೆ. ತೆಲುಗಿನ ಬಳಕೆಗೂ ಬಹುದೊಡ್ಡ ಇತಿಹಾಸ ಇದೆ. ಪಾಕುತ, ಸಂಸ್ತುತ, ಅರಾಬಿಕ್, ಪಶ್ಚಿಯನ್ ಇವು ಈ ನೆಲದ ಒಂದು ಕಾಲದ ಮಹತ್ವದ ಬಾಶೆಗಳು, ಪ್ರಾಕ್ರುತ ಮತ್ತು ಅರಾಬಿಕ್ ಕನ್ನಡದೊಂದಿಗೆ ನಡೆಸಿದ ಅನುಸಂದಾನವು ಕ್ರಮವಾಗಿ ಮರಾಟ, ಉರು ಹುಟ್ಟುವುದಕ್ಕೆ ಕಾರಣವಾಯಿತು. ಭಾರತೀಯ ಇಂಗ್ಲೀಶು ರೂಪಗೊಳ್ಳುವಲ್ಲಿ ಈ ಭಾಗದ ಕೊಡುಗೆಯೂ ಮಹತ್ವದ್ದು. ಕನ್ನಡ, ಉರ್ದು, ತೆಲುಗು, ಲಂಬಾಣಿ, ಮರಾಟಿ, ಹಿಂದಿ, ಬೆಂಗಾಲಿ, ಗುಜರಾತಿ, ತಮಿಳು, ಮಾರ್ವಾರಿ, ಕುಳು (ಕೊರವ) ಮೊದಲಾದವು ವರ್ತಮಾನದ ಈ ಪ್ರದೇಶದ ದೊಡ್ಡ ಬಾಶೆಗಳಾಗಿವೆ. ನಡುಗಾಲದ ಉದ್ದಕ್ಕೂ ಈ ನೆಲಕ್ಕೆ ಹರಿದು ಬಂದ ಕುಳು (ಕೊರವ), ಕೊರಚ, ರಾಜಸ್ತಾನಿ, ಮಾರ್ವಾರಿ, ಗುಜರಾತಿ, ಲಂಬಾಣಿ, ಸ್ವತಂತ್ರದ ಆಸುಪಾಸಿನಲ್ಲಿ ಬಂದ ಹಿಂದಿ, ಹಿಂದಿಯ ಹಲವಾರು ಬಗೆಗಳು, ಬೆಂಗಾಲಿ, ನೇಪಾಲಿ ಮೊದಲಾದ ಹಲವು ದೊಡ್ಡ ಬಾಶೆಗಳು, ಬಿಲಿ, ಪಂಜಾಬಿ, ಕಾಂದೇಶದ ಹಲವು ಬಾಶಾ ಬಗೆಗಳು, ಮದ್ಯ ಬಾರತದ ಪಾರ್ದಿ, ಗೊಂಡಿ ಮೊದಲಾದವು ಇಲ್ಲಿ ಬದುಕಿವೆ. ಹಯ್ದರಾಬಾದ ಕರ್ನಾಟಕ ಪ್ರದೇಶದಲ್ಲಿ ಇಂದು ಲೆಕ್ಕಕ್ಕೆ ಸಿಗುವ ಮತ್ತು ಕಾಣುವ ಬಾಶೆಗಳ ಸಂಕೆ ನೂರಕ್ಕೂ ಹೆಚ್ಚು.
