1
/
of
1
Chidananda Sali
ಹೊಗೆಯ ಹೊಳೆಯಿದು ತಿಳಿಯದು
ಹೊಗೆಯ ಹೊಳೆಯಿದು ತಿಳಿಯದು
Publisher - ಅಂಕಿತ ಪುಸ್ತಕ
Regular price
Rs. 175.00
Regular price
Rs. 175.00
Sale price
Rs. 175.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಈ ಕಥೆಗಳ ವಿಶಿಷ್ಟತೆ ಅವುಗಳ ಪ್ರಾದೇಶಿಕತೆಯಷ್ಟೇ ಅಲ್ಲದೆ ಅವು ಕೊಡಮಾಡುವ ಒಳನೋಟವೂ ಆಗಿದೆ. ಸಮುದಾಯದ ಮತ್ತು ವ್ಯಕ್ತಿಗಳ ಸಂಘರ್ಷ ವನ್ನು ಚಿತ್ರಿಸುತ್ತಲೇ, ಅಲ್ಲಿ ಸುಳಿಯುವ ಒಳತುಡಿತಗಳಿಗೂ ಇವು ಮಿಡಿಯುವುದರಿಂದ ಕಾಲದೇಶಾ ತೀತವಾಗಿ ನಿಲ್ಲುತ್ತವೆ. ಸಾಂದ್ರ ವಿವರಗಳ ಚಿತ್ರಕ ಶೈಲಿ ಮತ್ತು ರಾಯಚೂರಿನ ಪ್ರಾದೇಶಿಕ ಭಾಷೆಯ ಸೊಗಡುಗಳಿಂದಾಗಿ ಒಂದು ದಿಕ್ಕಿನಿಂದ ದೈನಂದಿಕದಲ್ಲೇ ಕಾಲೂರಿದಂತೆ ಕಂಡರೂ; ಮತ್ತೊಂದು ದಿಕ್ಕಿನಿಂದ ಅವೇ ದೈನಂದಿಕಗಳು ಬೇರೊಂದು ಲೋಕ ಗ್ರಹಿಕೆಯನ್ನು ಹೊಮ್ಮಿಸುತ್ತಿರುವುದು ಕಾಣಿಸುತ್ತದೆ.
'ಜಡ್ಡು' ಕಥೆಯಲ್ಲಿ ವೈದ್ಯಕೀಯ ಜಗತ್ತು ಮತ್ತು ನಂಬಿಕೆಯ ಜಗತ್ತುಗಳ ಪರಿಚಿತ ಕಥಾಹಂದರವೇ ತನ್ನ ಜೋಡಣಾಕ್ರಮದಿಂದ ಹೊಸ ಬೆಳಕನ್ನು ಸೂಸುತ್ತಿದೆ. 'ವೈಜ್ಞಾನಿಕ'ವಾದ ವೈದ್ಯಪದ್ಧತಿ, ಸಾಂಪ್ರದಾಯಿಕವಾದ 'ಅವೈಜ್ಞಾನಿಕ ವೈದ್ಯ ಪದ್ಧತಿ ಮತ್ತು ದೈವಭೀರುಗಳ ನಂಬಿಕೆಯ ಚಿಕಿತ್ಸಕ ಗುಣ- ಇವುಗಳನ್ನು ಒಂದರ ವಿರುದ್ಧ ಇನ್ನೊಂದು ಎಂದು ಜೋಡಿಸದೆ; ಸಮಾನಾಂತರವಾಗಿ ಜೋಡಿಸಿರುವ ಬಗೆಯಿಂದಾಗಿ, ಇಲ್ಲಿಯ ನಿರೂಪಣಾ ಕ್ರಮವು ಅತ್ತ ಬೈನರಿಗಳನ್ನೂ ಸೃಷ್ಟಿಸದೆ, ಇತ್ತ ಡೈಡ್ಯಾಕ್ಟಿಕ್ಕೂ ಆಗದೆ ಕಥೆಗೊಂದು ಮುಕ್ತತೆಯ ಗುಣವನ್ನು ನೀಡಿದೆ. ಅಲ್ಲದೆ ಕಥೆಗಾರ ಈ ಸಂಘರ್ಷಗಳಿಗೆ ನಿರ್ದಿಷ್ಟ ಉಪಸಂಹಾರ ನೀಡದೆ ಇರುವುದರಿಂದ ಹೆಚ್ಚಿನ ಮಂಥನಕ್ಕೂ ಆಸ್ಪದವಾಗಿದೆ. ಓದಿನ ಅಹಂಕಾರ'ದ ನಿರೂಪಕ ಕೆಲವೊಮ್ಮೆ ಸಿನಿಕಲ್ ಆಗುತ್ತಾ, ಮತ್ತೆ ಕೆಲವೊಮ್ಮೆ ತನ್ನ ಬಗ್ಗೆಯೇ ಸಂಶಯಪಡುತ್ತಾ, ವರದಿ ಮಾಡುತ್ತಿರುವುದರಿಂದ ಕಥೆಯು ಹಲವು ಮಗ್ಗಲುಗಳಿಂದ ವ್ಯಾಖ್ಯಾನಕ್ಕೆ ತೆರೆದುಕೊಳ್ಳುತ್ತದೆ.

Share

Subscribe to our emails
Subscribe to our mailing list for insider news, product launches, and more.