Dr. T. S. Vivekananda
ಹಿಮಾಲಯದ ನರಭಕ್ಷಕಗಳು
ಹಿಮಾಲಯದ ನರಭಕ್ಷಕಗಳು
Publisher - ವೀರಲೋಕ ಬುಕ್ಸ್
Regular price
Rs. 675.00
Regular price
Rs. 675.00
Sale price
Rs. 675.00
Unit price
/
per
- Free Shipping Above ₹250
- Cash on Delivery (COD) Available
Pages - 544
Type - Paperback
...ಬೇಟೆಯನ್ನು ಒಂದು ಕಾಯಕ ಪ್ರಜ್ಞೆಯಲ್ಲಿ ಬಾಳಿದ ಕಾರ್ಬೆಟ್ ನ ಅರಣ್ಯ ಪ್ರೀತಿ ಇರುವೆಂಭತ್ತು ಕೋಟಿ ಜೀವರಾಶಿಗಳನ್ನೂ ಅವುಗಳ ಬದುಕುವ ಹಕ್ಕನ್ನೂ ಮಾನ್ಯ ಮಾಡುವ ಗುಣಗೌರವದಿಂದ ಕೂಡಿದ್ದು....
ಪ್ರತಿಯೊಂದು ನರಭಕ್ಷಕ ಹುಲಿಯನ್ನು ಬೇಟೆಯಾಡಿದಾಗಲೂ ಆದ ಅನುಭವ ವಿವರಗಳನ್ನು ಕಟ್ಟಿಕೊಡುವಾಗ ಅವರು ವಿವರಿಸುವ ಕಾಡಿನ ಬಗೆ ವಿನ್ಯಾಸ ಅವರ ನೆನಪಿನ ತೀಕ್ಷ್ಣತೆಗೆ ಗ್ರಹಿಕೆಯ ಸೂಕ್ಷ್ಮತೆಗೆ ಕನ್ನಡಿ ಹಿಡಿದಂತಿದೆ. ಮೃತ್ಯು ಎದುರಿಗೇ ನಿಂತಾಗಲೂ ಧೃತಿಗೆಡದ ಅವರ ಆತ್ಮವಿಶ್ವಾಸದ ನಿಲುಮೆ ಅನನ್ಯವಾದುದು. ಇದೆಲ್ಲವನ್ನೂ ಅವರ ಬರಹ ತನ್ನ ಎದೆಯಲ್ಲಿ ತುಂಬಿಕೊಂಡಿದೆ. ಯಾವ ಜೀವ ವಿಜ್ಞಾನವೂ ತಿಳಿಸಲಾರದ ಎಷ್ಟೋ ಸೂಕ್ಷ್ಮಾತಿ ಸೂಕ್ಷ್ಮ ವಿಷಯಜ್ಞಾನವನ್ನು ಅನುಭವ ಮಾತ್ರದಿಂದ ಪಡೆದವರಾದ ಕಾರ್ಬೆಟ್ ಒಂದು ಅದ್ಭುತ, ಬೇಟೆಯನ್ನು ನಿಸರ್ಗಧರ್ಮಕ್ಕೆ ಎರವಾಗದ ನಡೆಯಲ್ಲಿ ಜೀವ ಸಂರಕ್ಷಕ ವಿಧಿಯಂತೆ ಪರಿಪಾಲಿಸಿದ ಮಹಾನುಭಾವ ಕಾರ್ಬೆಟ್.
...ಇಂಥ ಬೇಟೆಯ ಸಂತನ ಅನುಭವ ಕಥನವನ್ನು ಓದಿದ್ದೇ ನನ್ನ ಅಕ್ಷರಜ್ಞಾನದ ಅದೃಷ್ಟಭಾಗ್ಯವೆಂದು ನನ್ನ ತಿಳಿವು ಹೇಳುತ್ತಿದೆ.
...ಗೆಳೆಯ ವಿವೇಕಾನಂದನಿಗೆ ಆತ್ಮೀಯ ಕೃತಜ್ಞತೆಗಳು, ಕಾರಣ ಇಷ್ಟು ವಿಸ್ತಾರವಾದ ಈ ಬರಹವನ್ನು ಧ್ಯಾನಸ್ಥಿತಿಯ ಬದ್ಧತೆಯಲ್ಲಿ ಒಳಕ್ಕೆ ತಗೆದುಕೊಂಡು ಅದನ್ನು ಕನ್ನಡೀಕರಿಸಿದ್ದಕ್ಕೆ. ಇದನ್ನು ಕೇವಲ ಅನುವಾದ ಎಂದು ಹೇಳಿದರೆ ಅಪಚಾರವಾಗುತ್ತದೆ. ಕನ್ನಡ ಭಾಷೆಯ ಜಾಯಮಾನಕ್ಕೆ ಕಿಂಚಿತ್ತೂ ಊನವಾಗದ ಪ್ರಜ್ಞೆಯಲ್ಲಿ ಕಾರ್ಬೆಟ್‌ನ ಅನುಭವವನ್ನು ಕನ್ನಡಿಗರಿಗೆ ಕಟ್ಟಿಕೊಟ್ಟಿರುವ ಈ ಕಾರ್ಯ ಗುರುತರವಾದ ಹೊಣೆಗಾರಿಕೆಯಿಂದ ಮಾಡಿದ ಫಲವೇ ಸರಿ. ಈ ಜೀವಲೋಕದ ಬಗೆಗೆ ಕಾರ್ಬೆಟ್ ಪ್ರಜ್ಞೆಯನ್ನು ಬೆಳೆಸಿಕೊಂಡ ಮನಸ್ಸು ಮಾತ್ರ ಇಂಥ ಸಾಹಸಕ್ಕೆ ಶ್ರದ್ದೆ ಗೌರವಗಳಿಂದ ತೊಡಗುತ್ತದೆ.
(ಮುನ್ನುಡಿಯಿಂದ)

Share
Subscribe to our emails
Subscribe to our mailing list for insider news, product launches, and more.