Skip to product information
1 of 1

Dr. D. N. Shankara Batt

ಹವ್ಯಕ ಕನ್ನಡ

ಹವ್ಯಕ ಕನ್ನಡ

Publisher - ಡಿ. ಎನ್. ಶಂಕರ ಬಟ್

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಈ ಪುಸ್ತಕದಲ್ಲಿ ದಕ್ಶಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹವ್ಯಕರಲ್ಲಿ ಬಳಕೆಯಲ್ಲಿರುವ ಕನ್ನಡ ಒಳನುಡಿಯ ಪರಿಚಯವನ್ನು ಮಾಡಿಕೊಡಲಾಗಿದೆ. ಬರಹ ಕನ್ನಡಕ್ಕೂ ಈ ಒಳನುಡಿಗೂ ನಡುವೆ, ಹಳೆಗನ್ನಡಕ್ಕೂ ಈ ಒಳನುಡಿಗೂ ನಡುವೆ, ಕರಾವಳಿಯ ಬೇರೆ ಒಳನುಡಿಗಳಿಗೂ ಈ ಒಳನುಡಿಗೂ ನಡುವೆ, ಮತ್ತು ಕುಮಟಾ, ಶಿರಸಿ, ಸಿದ್ದಾಪುರ, ಹಾಗೂ ಸಾಗರದ ಹವ್ಯಕ ಒಳನುಡಿಗಳಿಗೂ ಈ ಒಳನುಡಿಗೂ ನಡುವೆ ಎಂತಹ ಹೋಲಿಕೆ ಮತ್ತು ಬೇರ್ಮೆಗಳಿವೆ ಎಂಬುದನ್ನು ತಿಳಿಸುವ ಮೂಲಕ ಈ ಕೆಲಸವನ್ನು ನಡೆಸಿಕೊಡಲಾಗಿದೆ.

ಕನ್ನಡ ನುಡಿಯ ಹಿನ್ನಡವಳಿ(ಚರಿತ್ರೆ)ಯನ್ನು ತಿಳಿಯುವಲ್ಲಿ ಹವ್ಯಕ ಕನ್ನಡದ ಪರಿಚಯವನ್ನು ಮಾಡಿಕೊಳ್ಳುವುದು ತುಂಬಾ ಮುಕ್ಯವೆಂದು ಹೇಳಬಹುದು. ಯಾಕೆಂದರೆ, ಕನ್ನಡದ ಯಾವ ಬರಹದಲ್ಲೂ ಕಾಣಿಸಿಕೊಳ್ಳದಂತಹ ಕೆಲವು ಮುಂದ್ರಾವಿಡ ಪರಿಚೆಗಳನ್ನು ಹವ್ಯಕ ಕನ್ನಡ ಉಳಿಸಿಕೊಂಡಿದೆ. ಹಾಗಾಗಿ, ಕನ್ನಡದ ಹಿನ್ನಡವಳಿಯನ್ನು ತೀರಾ ಹಳೆಯ ಕನ್ನಡ ಬರಹಗಳಿಗಿಂತಲೂ ಹಿಂದಕ್ಕೆ ತೆಗೆದುಕೊಂಡು ಹೋಗುವಲ್ಲಿ ಈ ಒಳನುಡಿ ನೆರವಾಗುತ್ತದೆ.

ಕರಾವಳಿಯ ಬೇರೆ ಒಳನುಡಿಗಳ ಹಾಗೆ, ಹವ್ಯಕ ಕನ್ನಡವೂ ಹಳೆಗನ್ನಡದ ಹಲವು ಪರಿಚೆಗಳನ್ನು ತೋರಿಸುತ್ತಿದೆ; ಆದರೆ, ಇದಕ್ಕೆ ಹವ್ಯಕ ಕನ್ನಡ ಹಳೆಗನ್ನಡವಾಗಿ ಉಳಿದಿರುವುದು ಕಾರಣವಲ್ಲ; ಕನ್ನಡದ ಬೇರೆ ಒಳನುಡಿಗಳ ಹಾಗೆ ಹವ್ಯಕ ಕನ್ನಡವೂ ತಲೆಮಾರಿನಿಂದ ತಲೆಮಾರಿಗೆ ಮಾರ‍್ಪಡುತ್ತಾ ಬಂದಿದೆ. ಅದರಲ್ಲಿ ಬೇರೆಯವಕ್ಕಿಂತ ಹೆಚ್ಚು ಹಳೆಗನ್ನಡದ ಪರಿಚೆಗಳು ಕಾಣಿಸಿಕೊಳ್ಳುವುದಕ್ಕೆ ಬೇರೆಯೇ ಕಾರಣಗಳಿವೆ ಎಂಬುದನ್ನೂ ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ವಿವೇಕ್ ಶಂಕರ್
ಒಳನುಡಿ ಕೆಲಸಗಳಿಗೆ ಮಾದರಿ ಹೊತ್ತಗೆ

ಕನ್ನಡ ನುಡಿಯೊಳಗೇ ಹಲವು ಒಳನುಡಿಗಳಿವೆ ಅಂದರೆ ಒಂದೂರಿನ ಕನ್ನಡ ಇನ್ನೊಂದೂರಿಗೆ ಹೋಲಿಸಿದರೆ ಅದರಲ್ಲಿ ಕೆಲವು ಬೇರ‍್ಮೆಗಳು ಕಾಣುತ್ತವೆ. ಕರ್ನಾಟಕದ ಹಲವು ಊರುಗಳಲ್ಲಿ ಹಲವು ಕನ್ನಡಗಳಿವೆ ಎಂದು ನುಡಿಯಬಹುದು. ಕರಾವಳಿಯ ಒಳನುಡಿಗಳಲ್ಲಿ ಹವ್ಯಕ ಕನ್ನಡ ಕೂಡ ಒಂದು. ಈ ಒಳನುಡಿ ನೋಡಿದರೆ ಹಳಗನ್ನಡದ ಕೆಲವು ಕುರುಹು ಕಂಡರು ಈಗಿನ ಕನ್ನಡಕ್ಕು ಹಲವು ಸಾಟಿ ಕುರುಹುಗಳು ಕಾಣುತ್ತವೆ. ಕನ್ನಡ ನುಡಿಯ ಬೆಳವಣಿಗೆ ತಿಳಿದುಕೊಳ್ಳಬೇಕೆಂದರೆ ಕನ್ನಡದ ಒಳನುಡಿಗಳ ತಿಳಿವಳಿಕೆ ಬೇಕು ಅದರಲ್ಲು ಹವ್ಯಕ ಕನ್ನಡ. ಹಾಗಾದರೆ ಈಗಿನ ಬರಹ ಕನ್ನಡಕ್ಕು ಇಲ್ಲ ಹಳಗನ್ನಡಕ್ಕು ಇಲ್ಲ ಬೇರೆ ಕರಾವಳಿ ಒಳನುಡಿಗಳಿಗು ಹೋಲಿಸಿ ನೋಡಿದಾಗ ಹವ್ಯಕ ಕನ್ನಡ ಎಲ್ಲಿ ನಿಲ್ಲುತ್ತದೆಂದು ಈ ಹೊತ್ತಗೆ ಓದಿದರೆ ತಿಳಿಯುತ್ತದೆ. ಹೀಗೆ ಕನ್ನಡದ ಒಳನುಡಿಗಳ ಸಲುವಾಗಿ ಅರಕೆ ಮಾಡುವ ನುಡಿಯರಿಗರಿಗು ಇದೊಂದು ಒಳ್ಳೆ ಹೊತ್ತಗೆ.