1
/
of
2
Vitthal Shenai
ಹನುಕಿಯಾ
ಹನುಕಿಯಾ
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 495.00
Regular price
Rs. 495.00
Sale price
Rs. 495.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 400
Type - Paperback
Couldn't load pickup availability
ಕನ್ನಡದಲ್ಲಿ ಯುದ್ಧ ಕಥಾನಕದ ಇತಿಹಾಸವನ್ನು ಬಳಸಿ ಸಾಹಿತ್ಯ ರಚನೆಯ ಕೆಲಸಕ್ಕೆ ಕೈ ಹಾಕಿದವರು ತುಂಬ ಕಡಿಮೆ. ಅದರಲ್ಲೂ ಸ್ವದೇಶದ್ದಲ್ಲದ, ಲಭ್ಯವಿರುವ ವಿದೇಶದ ಇತಿಹಾಸವನ್ನು ಕೈಗೆತ್ತಿಕೊಂಡು, ಸಾಕ್ಷೀಕೃತ ಘಟನಾವಳಿಗಳ ಮೂಲರೂಪ ಕೆಡದಂತೆ ಪ್ರಯೋಗಕ್ಕೆ ಇಳಿಯುವಾಗ ಅಪಾಯಗಳು ಜಾಸ್ತಿ. ಆಂಥಾ ರಿಸ್ಕನ್ನು ಮೈಮೇಲೆ ಎಳೆದುಕೊಂಡು ದೊಡ್ಡ ಅಳತೆಯ ಕಾದಂಬರಿಗೆ ಕೈ ಹಾಕಿ ಗೆದ್ದಿರುವ ಆತ್ಮೀಯ ಮಿತ್ರ, ಲೇಖಕ ವಿಠ್ಠಲ ಶೆಣೈ ಓದುಗರನ್ನು ಅಕ್ಷರಶಃ ಎರಡನೇ ಮಹಾಯುದ್ಧದ ರಣಾಂಗಣದಲ್ಲಿ ಒಯ್ದು ಕೂರಿಸಿಬಿಡುತ್ತಾರೆ.
ಓದುಗನನ್ನು ಪ್ರಕ್ಷುಬ್ಧಗೊಳಿಸುವಷ್ಟರ ಮಟ್ಟಿಗೆ ಯುದ್ಧಾನುಭವದ ಕಥಾನಕ ಬಿಚ್ಚಿಡುವ, ಕಾದಂಬರಿ ಹನುಕಿಯಾ ಓದಿ ಮುಗಿದ ಮೇಲೂ ಒಳಗೊಳಗೇ, ದೀಪದಂತೆ ಉರಿಯುತ್ತಲೇ ಇರುತ್ತದೆ. ಎಲ್ಲ ಪಾತ್ರಗಳು ಕಾದಂಬರಿಯ ಅಗತ್ಯಕ್ಕೆ ತಕ್ಕಂತೆ ಕಾದಂಬರಿಕಾರನ ಕಲ್ಪನೆಯಲ್ಲಿ ಮೂಡಿದ್ದರೂ, ನಮ್ಮನ್ನು ಎಂಟು ದಶಕಗಳ ಹಿಂದಕ್ಕೆ ಕರೆದೊಯ್ಯುವಲ್ಲಿ ಸಫಲವಾಗುತ್ತವೆ. ಕಥನ ಭಾಗವಾಗಿ ಭಾಷೆಯನ್ನು ಶಕ್ತಿಯುತವಾಗಿ ಬಳಸಿಕೊಂಡಿರುವ ಲೇಖಕರು, ಅಲ್ಲಲ್ಲಿ ನಿರೂಪಕನಾಗಿ ಇಣುಕುವ ಪರಿ ಕೆಲವೊಮ್ಮೆ ಓದುಗನನ್ನು ಮುಖ್ಯವಾಹಿನಿಯ ಆಚೆಗೆ ಎಳೆದೊಯ್ಯುತ್ತದೆ. ಕಲ್ಪನೆ ಇತಿಹಾಸದಷ್ಟೇ ಉದ್ದವಾಗಿಬಿಡುತ್ತದೆ.
ಕನ್ನಡದ ಮಟ್ಟಿಗೆ ಮೂಲ ಇತಿಹಾಸಕ್ಕೆ ಕಲ್ಪನೆಯ ಕಥಾನಕ ಬೆರೆಸಿ ಥ್ರಿಲ್ಲರ್ ಅಥವಾ ರೋಚಕ ಶೈಲಿಯ ಕಾದಂಬರಿಗಳು ಆಗೀಗೊಂದು ಬರುವ ಹೊತ್ತಿಗೆ, ದೊಡ್ಡಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ಧುಮುಕುತ್ತಿರುವ ಹನುಕಿಯಾ ಕಾದಂಬರಿ ಸಾಹಿತ್ಯಲೋಕದಲ್ಲಿ ದಾಂಗುಡಿ ಇಡಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇಂಥದ್ದೆ ಹೊಸ ತಂತ್ರಗಾರಿಕೆ ಮತ್ತು ಹುಡುಕಾಟದ ಹಟಕ್ಕೆ ಬಿದ್ದು, ಪ್ರಿಯ ಮಿತ್ರ ಲೇಖಕ ಇನ್ನಷ್ಟು ಜಿದ್ದಿನಿಂದ ಬರೆಯಲಿ, ನಮ್ಮ ಓದಿನ ಹಸಿವು ತಣಿಸಲಿ ಎಂದು ಹಾರೈಸುವೆ.
-ಸಂತೋಷಕುಮಾರ ಮೆಹೆಂದಳೆ (ಕಾದಂಬರಿಕಾರರು ಮತ್ತು ಅಂಕಣಗಾರರು)

Share

Subscribe to our emails
Subscribe to our mailing list for insider news, product launches, and more.