Dr. Sham. Ba. Jois
ಹಾಲುಮತ ದರ್ಶನ
ಹಾಲುಮತ ದರ್ಶನ
Publisher - ಶಂಬಾ ವಿಚಾರ ವೇದಿಕೆ
- Free Shipping Above ₹250
- Cash on Delivery (COD) Available
Pages - 272
Type - Paperback
Couldn't load pickup availability
ಹಾಲುಮತವು ವೇದಪೂರ್ವ ಕಾಲದ ಭಾರತೀಯ ಸಂಪ್ರದಾಯದ ಅವಶೇಷ. ಸೂರ್ಯೋಪಾಸನೆ ಮತ್ತು ಆಪ(ರಸ)ದ ಆರಾಧನೆ ಎರಡೂ ವಿಚಾರ ಪ್ರಣಾಳಿಗಳು ಒಂದೇ ಬಗೆಯವಲ್ಲ. ಭಿನ್ನ ಜೀವನ ದೃಷ್ಟಿ, ಭಿನ್ನ ಆಚಾರ, ಸಂಪ್ರದಾಯದ ವಾತಾವರಣದಲ್ಲಿ ಅವು ಹುಟ್ಟಿರಲಿಕ್ಕೇ ಬೇಕು. ಹಾಲುಮತದಿಂದಲೇ ಶಾಕ್ತ-ಶೈವ-ವೈಷ್ಣವ ಸಂಪ್ರದಾಯಗಳು ಉಗಮಗೊಂಡಿವೆ.
ರುದ್ರ (ಶಿವ) ಹಾಗೂ ವಿಷ್ಣು (ನಾರಾಯಣ) ಪ್ರತಿಮೆಗಳ ಮೂಲ ಸತ್ವ (ತತ್ವ) ಒಂದೇ ಇದ್ದರೂ ಅವುಗಳ ಅಭಿವ್ಯಕ್ತಿಯಲ್ಲಿ, ದೇವಿಯರ ಪ್ರತಿಮೆಗಳಲ್ಲಿ ಇರುವಷ್ಟು ಹತ್ತಿರದ ಹೋಲಿಕೆ ಒಮ್ಮೆಲೆ ಗಮನಕ್ಕೆ ಬರುವುದಿಲ್ಲ.
ಭಿನ್ನ ಮತ ಪಂಥಗಳ ಸಮನ್ವಯದ ಪ್ರಯತ್ನವು ಋಗ್ವೇದ ಕಾಲದಿಂದಲೇ ಆರಂಭವಾಗಿದೆ. ಪ್ರಜ್ಞಾ (ಮೇಧಾ) ಮತ್ತು ಶ್ರದ್ಧಾ ಇವೆರಡರ ನಡುವಣ ಸಾಮರಸ್ಯವು ಸಾಧಿಸಿದ ಕಾಲದಲ್ಲಿ ಭಾರತೀಯ ಧರ್ಮ-ತತ್ವಜ್ಞಾನವು ಮಾನವ ಕೋಟಿಗೆ ಭೂಮಾ ಸುಖದ ದಾರಿಯನ್ನು ತೋರಿಸಲು ಸಮರ್ಥವಾಗಿದೆ. ಆದರೆ ಅಖಿಲ ಭಾರತೀಯ ಜನತೆಯ ಹೃದಯವನ್ನು ಆಕರ್ಷಿಸಬಲ್ಲ ಪೂಜಾರ್ಹವಾದ ಒಂದೇ ಒಂದು ದೇವತಾಮೂರ್ತಿ (ಸಂಕೇತ) ನಿರ್ಮಾಣ ಮಾಡುವಲ್ಲಿ ಭಾರತವು ಇನ್ನೂ ಯಶಸ್ವಿಯಾಗಬೇಕಾಗಿದೆ. ಪರಮ-ತತ್ವವು ಒಂದೇ ಎಂದು ಒಪ್ಪುವವರು ಅದೇ ಕಾಲಕ್ಕೆ ತಮ್ಮ ವಿಶಿಷ್ಟ ಪ್ರತಿಮಾ ಸಂಕೇತದ ಸರ್ವೋಕ್ತ ಮಹತ್ವದ ಹಟ ಬಿಡರು.
Share


Subscribe to our emails
Subscribe to our mailing list for insider news, product launches, and more.