S. Malati
ಹಕ್ಕಿಗೊಂದು ಗೂಡುಕೊಡಿ
ಹಕ್ಕಿಗೊಂದು ಗೂಡುಕೊಡಿ
Publisher - ರವೀಂದ್ರ ಪುಸ್ತಕಾಲಯ
Regular price
Rs. 40.00
Regular price
Rs. 40.00
Sale price
Rs. 40.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕಾಡಿನಲ್ಲಿ ತಮ್ಮ ಪಾಡಿಗೆ ತಾವು ವಾಸ ಮಾಡಿಕೊಂಡಿದ್ದ ಹಕ್ಕಿಗಳ ಮೇಲೆ ಕಾಡು ಬೆಕ್ಕು, ಗಿಡುಗ ದಾಳಿ ಮಾಡುತ್ತವೆ. ಇದನ್ನ ಕಾಡಿನ ಸಹಜ ಕ್ರಿಯೆ ಅನ್ನುವ ಹಾಗೆ ಹಕ್ಕಿಗಳು ತಿಳಿದು ಬದುಕುತ್ತವೆ, ಆದರೆ ಯಾವಾಗ ಮನುಷ್ಯ ಅವುಗಳ ಮೇಲೆ ವಿವಿಧ ರೀತಿಯಲ್ಲಿ ಆಕ್ರಮಣ ಮಾಡಲಿಕ್ಕೆ ತೊಡಗುತ್ತಾನೆ ಆಗ ಹಕ್ಕಿಗಳು ಆತಂಕಕ್ಕೆ ಒಳಗಾಗುತ್ತವೆ, ಗೂಡು ಕಟ್ಟುವ ತಮ್ಮ ಕಾಯಕವನ್ನ ಮುಂದುವರೆಸುತ್ತವೆ. ಒಂದೆಡೆಯಿ0ದ ಇನ್ನೊಂದೆಡೆಗೆ ವಲಸೆ ಹೋಗುವ ತಮ್ಮ ಪ್ರಯತ್ನವನ್ನು ಅವು ಬಿಟ್ಟುಕೊಡುವುದಿಲ್ಲ. ಮತ್ತೆ ಮತ್ತೆ ತಮ್ಮ ಬದುಕಿಗೆ ಅಪಾಯ ಬಂದರೂ ಗೂಡು ಕಟ್ಟುವ ಅವುಗಳ ಕ್ರಿಯೆ ನಿಲ್ಲುವುದಿಲ್ಲ. ಕೊನೆಗೆ ಅವು ತಮ್ಮ ಈ ದುರವಸ್ಥೆಗೆ ಕಾರಣನಾದ ಮನುಷ್ಯನನ್ನೇ ಮೊರೆ ಹೋಗುತ್ತವೆ. ತಮ್ಮ ಗೂಡುಗಳನ್ನು ಉಳಿಸಿ ಎಂದು ಬೇಡುತ್ತವೆ.
ರಂಗಭೂಮಿಯ ಮೇಲೆ ಅಪಾರ ಕೆಲಸ ಮಾಡಿರುವ ಶ್ರೀಮತಿ ಮಾಲತಿಯವರು ಕಾದಂಬರಿಯ ರಂಗರೂಪವನ್ನ ಉತ್ತಮವಾಗಿ ಸಿದ್ಧಪಡಿಸಿದ್ದಾರೆ. ನಡುವೆ ಹಾಡುಗಳ ಮೂಲಕ, ನೃತ್ಯಗಳ ಮೂಲಕ ಕಾದಂಬರಿಯ ಆಶಯವನ್ನ ಪ್ರೇಕ್ಷಕರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಈ ನೃತ್ಯ ಹಾಡು ಕೆಲ ಸನ್ನಿವೇಶಗಳಿಗೆ ಜೀವ ಕೊಟ್ಟಿದೆ, ಬಿಳಿಕಂದ ತನ್ನ ಪರಿವಾರದ ಜೊತೆಯಲ್ಲಿ ಮಕ್ಕಳ ಮನಸ್ಸನ್ನ ಸೆಳೆಯುವಲ್ಲಿ ಸಾರ್ಥಕವಾಗಿದೆ, ಕಾದಂಬರಿಕಾರನ ಆಶಯ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಮಾಲತಿಯವರು ಯಶಸ್ವಿಯಾಗಿದ್ದಾರೆ ಕೂಡ.
-ನಾ. ಡಿಸೋಜಾ
(ಮುನ್ನುಡಿಯಿಂದ)
ಒಂದು ಪಕ್ಷಿ ಸಮೂಹಕ್ಕೆ ಗಿಡುಗ, ಕಾಡುಬೆಕ್ಕುಗಳಿಂದ, ಕಾಡುಗಳ ನಾಶದಿಂದ, ಕಾರ್ಖಾನೆಗಳ ಆರಂಭದಿಂದ, ಜಲಪ್ರವಾಹದಿಂದ, ಬೇಟೆಗಾರರಿಂದ ಅಪಾಯಗಳಿವೆ. ಪ್ರತಿಯೊಂದು ವಿನಾಶವನ್ನು ಎದುರಿಸುತ್ತಲೇ ಪಕ್ಷಿ ಸಮೂಹ ಬೇರೊಂದು ಕಾಡಿಗೆ ವಲಸೆ ಹೋಗುತ್ತದೆ. ಮತ್ತೆ ಮತ್ತೆ ಗೂಡು ಕಟ್ಟುತ್ತದೆ. ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಇವುಗಳ ಜೀವನೋತ್ಸಾಹ ಸಾಟಿಯಿಲ್ಲದ್ದು, ಮನುಷ್ಯರೇ ಪಕ್ಷಿಗಳ ಮೊದಲ ಶತ್ರು, ಮನುಷ್ಯನ ಕ್ರೌರ್ಯಕ್ಕೆ ಕೊನೆಯೇ ಇಲ್ಲ. ಆದರೆ, ಪ್ರೀತಿಯನ್ನು, ಮಾನವೀಯತೆಯನ್ನು ಬೆಳೆಸಿಕೊಳ್ಳ ಬೇಕೆಂದರೆ ಅದಕ್ಕೊಂದು ಕೊನೆಯೇ ಇಲ್ಲ-ಪಕ್ಷಿಗಳನ್ನು ಪ್ರೀತಿಸಬಹುದು, ಮರ- ಹೂವ-ಹಣ್ಣು-ಆಕಾಶ- ನಕ್ಷತ್ರ-ಚಂದ್ರ-ಸೂರ್ಯ-ಪಶು-ಪ್ರಾಣಿ ಎಲ್ಲವನ್ನೂ ಪ್ರೀತಿಸಬಹುದು. ಇಂತಹ ಪ್ರೀತಿಯನ್ನು ನಿಮ್ಮ ಹೃದಯಗಳಲ್ಲಿ ಈ ನಾಟಕ ಹುಟ್ಟುಹಾಕಿದರೆ ನಮ್ಮ ಶ್ರಮ ಸಾರ್ಥಕ.
-ಎಸ್, ಮಾಲತಿ, ಸಾಗರ

Share
Subscribe to our emails
Subscribe to our mailing list for insider news, product launches, and more.