Ravi Belagere
ಹಗರೀ ತೀರದ ಹಂತಕರು
ಹಗರೀ ತೀರದ ಹಂತಕರು
Publisher - ಭಾವನಾ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 104
Type - Paperback
Pickup available at 67, South Avenue Complex, DVG Road, Basavanagudi
Usually ready in 24 hours
ಆತ ಕುಳಿತಿದ್ದ ಕಾರು ಹಗರಿ ಸೇತುವೆಗೆ ತೀರ ಹತ್ತಿರದಲ್ಲಿ ನಿಂತಿತ್ತು. ಆನತಿ ದೂರದಲ್ಲಿ ಗಿಳಿ ಮಾರ್ಕಿನ ಗವರ್ನಮೆಂಟು ಬಸ್ಸು ಬರುತ್ತಿದೆಯೆಂದು ಖಚಿತವಾದ ತಕ್ಷಣ, ಆತ ಇಶಾರೆ ಮಾಡಿದ. ಕಾರು ಸೇತುವೆಗೆ ಅಡ್ಡವಾಗಿ ನಿಂತುಬಿಟ್ಟಿತು. ಗಿಳಿ ಮಾರ್ಕಿನ ಸರ್ಕಾರಿ ಬಸ್ಸು ಗಕ್ಕನೆ ನಿಂತಿತು. ಆತ ಸರಕ್ಕನೆ ಬಸ್ಸಿನೊಳಕ್ಕೆ ಹತ್ತಿ ಏನೇನೂ ಅವಸರವಿಲ್ಲದೆ ಸರಿಸುಮಾರು ಒಂದೂ ಕಾಲು ಗಂಟೆ ಬಡಿದಾಡಿದ. ಮತ್ತು ನಾಲ್ಕು ಹೆಣಗಳನ್ನು ನೆಲಕ್ಕೆ ಕೆಡವಿದವನೇ ಬಸ್ಸಿಳಿದು ಹೊರಟು ಹೋದ. ಇವತ್ತಿಗೂ ಅವನ ಕಣ್ಣುಗಳಲ್ಲಿ ಹಳೆಯ ನೆತ್ತರು ಹೆಪ್ಪುಗಟ್ಟಿದಂತಿದೆ. ಆ ಹುರಿಮೀಸೆಯ ಆಳದಲ್ಲೆಲ್ಲೋ ಒಂದು ಆಕಳಿಕೆ ಬಾಕಿ ಉಳಿದಂತಿದೆ. ಈತನ ಕೈಗಳಲ್ಲಿ ಕುಡುಗೋಲು ಒಂದು ರಾತ್ರಿಯಿಡೀ ರುದ್ರವೀಣೆಯಂತೆ ನುಡಿದಿತ್ತು. ಬೆಳಕು ಹರಿದಾಗ ಎಣಿಕೆಗೆ ಸಿಕ್ಕ ಶವಗಳ ಸಂಖ್ಯೆ ಆರು! ಅವತ್ತು ಗಣೇಶ ಹಬ್ಬ. ಅಂದ ಹಾಗೆ, ಈತನ ಹೆಸರು ಸುಗ್ರೀವುಡು! ಕಣ್ಣೊಂದು ಅಲ್ಲೇ ಕಳಚಿ ಬೀಳದೆ ಹೋಗಿದ್ದಿದ್ದರೆ, ಈ ಹುಡುಗ ಖಂಡಿತವಾಗ್ಯೂ ಬಡಿದಾಡಿ ಬದುಕುಳಿಯುತ್ತಿದ್ದ. ಆದರೆ ಜೀಪಿನ ಮೇಲೆಯೇ ಸಿಡಿದ ಬಾಂಬು ಈ ಹುಡುಗನ ಕಣ್ಣುಗಳೆರಡನ್ನೂ ಕಳಚಿ ಹಾಕಿತು. ಆಮೇಲೂ ಕುರುಡುಗಣ್ಣಲ್ಲೇ ಶತಾಯಗತಾಯ ಬಡಿದಾಡಿದ ಈ ಹುಡುಗ ತೀರ ಪ್ರಾಣ ಹೋಗುವ ಘಳಿಗೆಯಲ್ಲಿ ಶತ್ರುವಿನ ತಲೆಗೂದಲನ್ನು ಗಪ್ಪನೆ ಹಿಡಿದಿದ್ದ. ಪ್ರಾಣ ಹೋದ ಮೇಲೂ ತನ್ನ ಹಿಡಿತ ಸಡಿಲಿಸಲಿಲ್ಲ. ಹಂತಕ ತನ್ನ ತಲೆಗೂದಲನ್ನು ಕುಯ್ದುಕೊಂಡು, ತಲೆ ಬಿಡಿಸಿಕೊಂಡು ಹೋಗಬೇಕಾಗಿ ಬಂತು!
| ರವಿ ಬೆಳಗೆರೆ
Share
Subscribe to our emails
Subscribe to our mailing list for insider news, product launches, and more.