T. G. Prabhashankara 'Premi'
ಗುಂತೇರ್ ನ ಶಿಶಿರ ಋತು
ಗುಂತೇರ್ ನ ಶಿಶಿರ ಋತು
Publisher - ಐಬಿಹೆಚ್ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
'ಗುಂಟರ್ಸ್ ವಿಂಟರ್' (ಗುಂತೇರ್‌ನ ಶಿಶಿರ ಋತು) ಕಾದಂಬರಿಯ ರಚನಾಕಾಲ ಫಾಲ್ಕಲ್ಯಾಂಡ್ಸ್ ಯುದ್ಧ (1982) ದ ಸಮಯ. ಅದು ಪ್ರಾರಂಭದ ಮುಖ್ಯ ಸೆಟ್ಟಿಂಗ್ ಕೋರಿಯಂತಸ್‌ನಗರ (ಅರ್ಜೆಂಟೈನಾ) ಅಥವಾ ಅಸುನಸಿಯೋನ್ (ಪರಗ್ವೆ) ಮತ್ತು ಕೆಲವು ಸೆಕಂಡರಿ ಸೆಟಿಂಗ್-ವಾಶಿಂಗ್‌ಟನ್ ಡಿಸಿ, ನ್ಯೂಯಾರ್ಕ್ ಮತ್ತು ಸ್ಟಿಲ್ ವಾಟರ್, ಓಕ್ಲಾಹಾಮಾ (ಸಂಯುಕ್ತ ಅಮೆರಿಕಾ), ಮಾಂಡ್ರಿಡ್' (ಸ್ಪೆಯಿನ್), ಪ್ಯಾರಿಸ್ (ಫ್ರಾಂಸ್ ) ಮತ್ತು ಬುಚರೆಸ್ಟ್ (ರೊಮಾನಿಯಾ). ಹಾಗೆಯೇ, ಕೆಲವು ದೃಶ್ಯಗಳು ವಿಮಾನದಲ್ಲಿ ಅಥವಾ ಬೋಟ್‌ಟ್ರಿಪ್‌ನಲ್ಲಿನವು.
ಸೋಲೆದಾದ್ ಸಾನಾಬ್ರಿಯಾ ಗುಂಟರ್ ಮುಖ್ಯ ಪಾತ್ರ. ಆಕೆ ಸುಂದರಿಯೂ ಆದರ್ಶವಾದಿಯೂ ಆದ 17 ವರ್ಷದ ಕೆಳಹಂತದ ಕವಯಿತ್ರಿ, ಆಕೆಯನ್ನು 17 ನಿರಂಕುಶತ್ವವನ್ನು ವಿರೋಧಿಸಿದಳೆಂಬ ಆರೋಪದ ಮೇಲೆ ಬಂಧಿಸಿ ಹಿಂಸಿಸಲಾಗುತ್ತದೆ. ಜೊತೆಗೆ, ಆಕೆ ವೇಶ್ಯ ಮಾಲೆನಾ ಪಾತ್ರವನ್ನೂ ಮತ್ತು ದೈವಿ ಜಾಗ್ವಾರ್ ಪಾತ್ರವನ್ನೂ ನಿಭಾಯಿಸುತ್ತಾಳೆ.
ವೆರೋನಿಕಾ ಸಾರಿಯಾ ಕಿರಾಗೊ, ಆಕೆ ಶ್ರೀಮಂತ ಕುಟುಂಬದವಳು. ಸೋಲೆದಾದ್ ಅವಳ ಅಪ್ತಸ್ನೇಹಿತೆ ಮತ್ತು ಕ್ಲಾಸ್‌ಮೇಟ್, ವೆರೋನಿಕಾ ತನ್ನ ಆದರ್ಶಗಳನ್ನು ಮತ್ತು ಜೀವನದ ಗುರಿಯನ್ನು ಅವಳೊಡನೆ ಹಂಚಿಕೊಳ್ಳುತ್ತಾಳೆ.
ಆಲ್ಬೆರ್ತೊ ಸಾರಿಯಾ ಕಿರಾಗೊ ವೆರೋನಿಕಾಳ ಸೋದರ ಮತ್ತು ಸೋಲೆದಾದ್‌ಳ ಪ್ರಿಯತಮ. ಮಾಲೇನಾ ಪಾತ್ರದಲ್ಲಿ.
ಫ್ರಾಂಸಿಸ್ ಜೇವಿಯರ್ ಗುಂತೇರ್ ಸೋಲೆದಾದ್ ಸೋದರಮಾವ. ಆತ 62 ವರ್ಷದ ಅರ್ಥಶಾಸ್ತ್ರಜ್ಞ ಮತ್ತು ವಾಶಿಂಗ್‌ಟನ್‌ನಲ್ಲಿ ವರ್ಲ್ಡ್ ಬ್ಯಾಂಕ್‌ನ ಅಧ್ಯಕ್ಷ. ಅತ ಕೋರಿಯೆಂತಸ್ / ಅಸುನಸಿಯೋನ್‌ಗೆ ಸೋದರಿಯ ಮಗಳನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುವ ಸಲುವಾಗಿ ಪ್ರಯಾಣ ಮಾಡುತ್ತಾನೆ.
ಎಲೀಸಾ ಗುಂತೇರ್‌ನ ಹೆಂಡತಿ, ಆಕೆ ಅಮೆರಿಕನ್ ಪ್ರೊಫೆಸರ್, ತಂದೆ ಐರೀಷ್ ಮೂಲದವರು ಮತ್ತು ತಾಯಿ ಆಫ್ರೋ ಅಮೆರಿಕನ್. ಆಕೆ ಗಂಡನ ಜೊತೆ ದಕ್ಷಿಣ ಅಮೆರಿಕಾಗೆ ಹೋಗುತ್ತಾಳೆ.
ರೋಬೆರ್ತೊ 'ತೋತೋ' ಅಸ್ವಾಗಾ ಎಲೀಸಾಳ ಅರ್ಜೆಂಟೈನಾದ ಸ್ನೇಹಿತ, ಆತ ಆಕೆಯನ್ನು ಅಸುನಸಿಯೋನ್ / ಕೋರಿಯೆಂತೆಸ್‌ನಲ್ಲಿ ಭೇಟಿಯಾಗುತ್ತಾರೆ.
Share
Subscribe to our emails
Subscribe to our mailing list for insider news, product launches, and more.