Samyukta Puligal
ಗೂಡಿನಿಂದ ಬಾನಿಗೆ
ಗೂಡಿನಿಂದ ಬಾನಿಗೆ
Publisher -
Regular price
Rs. 350.00
Regular price
Rs. 350.00
Sale price
Rs. 350.00
Unit price
/
per
- Free Shipping Above ₹250
- Cash on Delivery (COD) Available
Pages -
Type -
- ಒಂದು ಸಾಮಾನ್ಯ ಕುಟುಂಬದಲ್ಲಿ ನಾಲ್ಕು ಮಕ್ಕಳಲ್ಲಿ ಕೊನೆಯವರಾಗಿ ಹುಟ್ಟಿದ ಹೇಮಾ ಅವರು ಕನ್ಸರ್ವ್ ಅನ್ನುವ ಡಿಜಿಟಲ್ ವಿದ್ಯುತ್ ಮೀಟರುಗಳ ಕಂಪನಿಯನ್ನು ಕಟ್ಟಿ, ಬೆಳೆಸಿದ ಕತೆ ಗೂಡಿನಿಂದ ಬಾನಿಗೆ
- ವಿದ್ಯುತ್ ಉದ್ದಿಮೆಯಂತಹ ಭ್ರಷ್ಟಾಚಾರದ ಆಗರದಲ್ಲಿ ಭ್ರಷ್ಟಾಚಾರಕ್ಕೆ ಚೂರು ಅವಕಾಶ ಕೊಡದೇ ಅತ್ಯಂತ ಯಶಸ್ವಿಯಾದ, ಪಾರದರ್ಶಕವಾದ ಸಂಸ್ಥೆಯೊಂದನ್ನು ಕಟ್ಟಿ ಗೆಲುವು ಸಾಧಿಸಿದ ಕತೆ ಗೂಡಿನಿಂದ ಬಾನಿಗೆ
- ಧಾರವಾಡದಲ್ಲಿ ಓದಿ, ಬೆಳೆದು, ಕಲ್ಕತ್ತೆಯ ಐಐಎಂನಲ್ಲಿ ಎಂಬಿಎ ಪದವಿ ಪಡೆದು ಎರಡು ದಶಕಗಳಲ್ಲಿ ಭಾರತದಲ್ಲೇ ಹೆಸರುವಾಸಿಯಾದ ಸಂಸ್ಥೆ ಕಟ್ಟಿ ಜಗತ್ತಿನ ಖ್ಯಾತ ಬಿಸಿನೆಸ್ ಸ್ಕೂಲ್ಸ್ ಅಲ್ಲಿ ಪಠ್ಯವಾಗುವಂತಹ ಯಶೋಗಾಥೆ ನಿರ್ಮಿಸಿದ ಛಲಗಾತಿ ಹೆಣ್ಣಿನ ಕತೆ ಗೂಡಿನಿಂದ ಬಾನಿಗೆ
- ಸಂಸ್ಥೆಯೆಂದರೆ ಮಾಲೀಕ, ನೌಕರ ಅನ್ನುವ ಸಂಬಂಧವಲ್ಲ, ಅದೊಂದು ಕುಟುಂಬದ ಸಂಬಂಧ ಅನ್ನುವಂತೆಯೇ ಸಂಸ್ಥೆಯನ್ನು ರೂಪಿಸಿ ಉದ್ಯೋಗಿಗಳಿಗೆಲ್ಲ ಒಳ್ಳೆಯ ಕೆಲಸ, ಏಳಿಗೆ ಸೃಷ್ಟಿಸಿದ ಕನ್ಸರ್ವ್ ಅನ್ನುವ ಸಂಸ್ಥೆಯ ಕತೆ ಗೂಡಿನಿಂದ ಬಾನಿಗೆ
ಭಾರತದಲ್ಲಿ ವಿದ್ಯುತ್ ಉದ್ದಿಮೆಯೆನ್ನುವುದು ಭ್ರಷ್ಟಾಚಾರಕ್ಕೆ ಹೆಸರುವಾಸಿ. ಈ ಕ್ಷೇತ್ರದಲ್ಲಿ ಉತ್ಪಾದನೆ, ವಿತರಣೆ, ಮಾರಾಟ ಹೀಗೆ ಎಲ್ಲ ಹಂತದಲ್ಲೂ ಬಹುತೇಕ ಗಂಡಸರದ್ದೇ ಕಾರುಬಾರು. ಅಂತಹ ಕ್ಷೇತ್ರಕ್ಕೆ ಕಾಲಿಟ್ಟು, ಭ್ರಷ್ಟಾಚಾರಕ್ಕೆ ಚೂರು ಸೊಪ್ಪು ಹಾಕದೇ ಒಂದು ಅದ್ಭುತವಾದ ಸಂಸ್ಥೆ ಕಟ್ಟಿ ತೋರಿಸಿದ, ಧಾರವಾಡದಿಂದ ಹಾರ್ವರ್ಡ್‌ವರೆಗೆ ಹಬ್ಬಿದ ಸಾಧಕಿ ಹೇಮಾ ಹಟ್ಟಂಗಡಿ ಅವರ ಬದುಕಿನ ಕತೆ ಲಿಫ್ಟ್ ಆಫ್ ಅನ್ನುವ ಹೆಸರಿನಲ್ಲಿ ಇಂಗ್ಲಿಷಿನಲ್ಲಿ ಪ್ರಕಟವಾಗಿತ್ತು. ಅದನ್ನು ಈಗ ಮೈಲ್ಯಾಂಗ್ ಪ್ರಕಾಶನ ಕನ್ನಡಕ್ಕೆ ತಂದಿದೆ. ಕನ್ನಡದ ಭರವಸೆಯ ಯುವ ಬರಹಗಾರ್ತಿ ಸಂಯುಕ್ತಾ ಪುಲಿಗಲ್ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
Share
Subscribe to our emails
Subscribe to our mailing list for insider news, product launches, and more.