Dr. C. R. Govindaraju
ಗೋಕಾಕ್ ವರದಿ
ಗೋಕಾಕ್ ವರದಿ
Publisher - ಕನ್ನಡ ಸಾಹಿತ್ಯ ಪರಿಷತ್ತು
Regular price
Rs. 160.00
Regular price
Rs. 160.00
Sale price
Rs. 160.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಚದುರಿ ಹೋಗಿದ್ದ ಕನ್ನಡದ ಪ್ರದೇಶಗಳು ಆಡಳಿತಾತ್ಮಕವಾಗಿ ಒಂದುಗೂಡಿ ಐವತ್ತು ವರುಷಗಳೇ ಆಗುತ್ತಿವೆ. ಈ ಹೊತ್ತು 'ಸುವರ್ಣ ಕರ್ನಾಟಕ'ದ ಉತ್ಸವದ ಆಚರಣೆಗೆ ಕನ್ನಡಿಗರೆಲ್ಲ ಒಂದುಗೂಡಬೇಕಿದೆ. ಆದರೆ ನಾಡು ಏಕೀಕೃತಗೊಂಡು ಇಷ್ಟು ವರುಷಗಳೇ ಕಳೆದರೂ 'ಕನ್ನಡ-ಕನ್ನಡಿಗ- ಕರ್ನಾಟಕ'ದ ಅನನ್ಯತೆ- ಅಸ್ಮಿತೆಗಳಿಗಾಗಿ ಚಳವಳಿಗಳನ್ನು ಹೂಡಬೇಕಾದ ಅನಿವಾರತೆ ಕನ್ನಡಿಗರದು. ಬಹುಶಃ ಇನ್ನಾವ ಭಾಷಿಕರಿಗೂ ಇರಲಾರದ ಸ್ಥಿತಿ ನಮ್ಮದು. ನಮ್ಮ ಅಸ್ತಿತ್ವಕ್ಕಾಗಿ ನಮ್ಮ ರಾಜಕಾರಣಿಗಳನ್ನೇ ಎಚ್ಚರಿಸಿ, ಕೊರತೆಗಳನ್ನು ನೀಗಿಕೊಳ್ಳಬೇಕಾದ ಸ್ಥಿತಿ ಕನ್ನಡಿಗರಿಗೆ ಈ ಹೊತ್ತಿಗೂ ಬದಲಾಗಿಲ್ಲ. ಇಂಥ ಸನ್ನಿವೇಶದಲ್ಲಿ ಕಳೆದ ಶತಮಾನದ ಎಂಭತ್ತರ ದಶಕ ಮಹತ್ತ್ವದ್ದು. ಏಕೀಕರಣ ಚಳುವಳಿಯ ಅನಂತರ ಮತ್ತೆ ಆ ಬಗೆಯ ಅಥವಾ ಅದಕ್ಕಿಂತಲೂ ಮಿಗಿಲಾಗಿ ನಮ್ಮನ್ನು ನಾವು ತೊಡಗಿಸಿಕೊಂಡ ಚಾರಿತ್ರಿಕ ಘಟ್ಟ ಅದು. ಅದೇ ನಮ್ಮ ಭಾಷೆಯ ಅಸ್ತಿತ್ವದ ಪ್ರಶ್ನೆಯಾಗಿ ಕಾಡಿದ 'ಗೋಕಾಕ್ ಚಳವಳಿ' ಇದನ್ನು 'ಕನ್ನಡ ಚಳವಳಿ' ಅಥವಾ 'ಭಾಷಾ ಚಳವಳಿ' ಎಂದೇ ಕರೆಯಲು ಬಹಳಷ್ಟು ಜನ ಬಯಸುತ್ತಾರೆ. ಆದರೆ ಅದು ಜನ-ಜನಿತವಾಗಿದ್ದು ಮಾತ್ರ 'ಗೋಕಾಕ್ ಚಳವಳಿ' ಎಂದೇ.
Share
Subscribe to our emails
Subscribe to our mailing list for insider news, product launches, and more.